ರಾಮ್‌ದೇವ್ ‘ಸ್ವದೇಶಿ’ ಅಭಿಯಾನ ಈಗ ವಿದೇಶಿ ಸರಕುಗಳಿಂದ ಕೂಡಿದೆ: ಬ್ರಿಜ್ ಭೂಷಣ್

ರಾಮ್‌ದೇವ್ ‘ಸ್ವದೇಶಿ’ ಅಭಿಯಾನ ಈಗ ವಿದೇಶಿ ಸರಕುಗಳಿಂದ ಕೂಡಿದೆ: ಬ್ರಿಜ್ ಭೂಷಣ್

ರಾಮ್‌ದೇವ್ ‘ಸ್ವದೇಶಿ’ ಅಭಿಯಾನ ಈಗ ವಿದೇಶಿ ಸರಕುಗಳಿಂದ ಕೂಡಿದೆ: ಬ್ರಿಜ್ ಭೂಷಣ್

ಗೊಂಡ(ಉತ್ತರ ಪ್ರದೇಶ): ಯೋಗ ಗುರು ಬಾಬಾ ರಾಮ್‌ದೇವ್ ಅವರ 'ಸ್ವದೇಶಿ' ಅಭಿಯಾನವು ಈಗ ನಕಲಿ ಉತ್ಪನ್ನಗಳು ಮತ್ತು ವಿದೇಶಿ ಸರಕುಗಳನ್ನೂ ಒಳಗೊಂಡಿದೆ ಎಂದು ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಆರೋಪಿಸಿದ್ದಾರೆ.

ಗೊಂಡದಲ್ಲಿನ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಜ್ ಭೂಷಣ್ ಅವರು ರಾಮ್‌ದೇವ್ ಅವರ 'ಸ್ವದೇಶಿ' ಅಭಿಯಾನದ ಕುರಿತು ಪ್ರಸ್ತಾಪಿಸುತ್ತಾ, ‘ದೇಶಿ ಉತ್ಪನ್ನಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಈ ಆಂದೋಲನವು ಸಮರ್ಥನೀಯವಾಗಿತ್ತು. ಆದರೆ ಇದೀಗ ಅವರು ವಿದೇಶಿ ಒಳ ಉಡುಪುಗಳನ್ನು ತಯಾರಿಸಲು ಆರಂಭಿಸಿದ್ದಾರೆ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ರಾಮ್‌ದೇವ್ ಅವರ ಅಭಿಯಾನಗಳನ್ನು ನೆನಪಿಸಿಕೊಂಡ ಬ್ರಿಜ್ ಭೂಷಣ್, ಯೋಗ ಗುರುಗಳು ಸ್ವದೇಶಿ ಹೋರಾಟವೊಂದನ್ನು ಆರಂಭಿಸಲು ಉದ್ದೇಶಿಸಿದ್ದರೆ ಅವರು 'ಸಿಂಧೂರ' ಮತ್ತು 'ಸಲ್ವಾರ್' ಧರಿಸಿ ಬರದಂತೆ ಅವರಿಗೆ ತಿಳಿಸಬೇಕು. ಈ ಬಾರಿ ಅವರು ಒಬ್ಬ ಪುರುಷನಂತೆ ಪ್ರತಿಭಟಿಸಿ, ನಿರ್ಣಾಯಕ ಹೋರಾಟವನ್ನು ನಡೆಸಬೇಕು ಎಂದು ಸವಾಲು ಹಾಕಿದ್ದಾರೆ.

ದೇಶದಲ್ಲಿ ಕೃತಕ ತುಪ್ಪದ ಕುರಿತು ಬಾರಿ ಆರೋಪಗಳು ಕೇಳಿಬರುತ್ತಿದ್ದು, ಅದಕ್ಕೆ ರಾಮ್‌ದೇವ್ ಹೊಣೆಹೊತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.

ಬಾಬಾ ರಾಮ್‌ದೇವ್ ಅವರು ಪತಂಜಲಿ ಹೆಸರನ್ನು ಬಳಸದಂತೆ ಈ ಹಿಂದೆ ಬ್ರಿಜ್ ಭೂಷಣ್ ಒತ್ತಾಯಿಸಿದ್ದರು.

ಅದರ ನಂತರ 2023ರಲ್ಲಿ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ, ರಾಮ್‌ದೇವ್ ಅವರು ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ