ಲಕ್ಷ್ಮೇಶ್ವರ | ಮಳೆ ಕೊರತೆಯಿಂದ ಒಣಗಿದ ಫಸಲು: ಅನ್ನದಾತರಲ್ಲಿ ಆತಂಕ

ಲಕ್ಷ್ಮೇಶ್ವರ | ಮಳೆ ಕೊರತೆಯಿಂದ ಒಣಗಿದ ಫಸಲು: ಅನ್ನದಾತರಲ್ಲಿ ಆತಂಕ

ಲಕ್ಷ್ಮೇಶ್ವರ | ಮಳೆ ಕೊರತೆಯಿಂದ ಒಣಗಿದ ಫಸಲು: ಅನ್ನದಾತರಲ್ಲಿ ಆತಂಕ

ಲಕ್ಷ್ಮೇಶ್ವರ: ಪ್ರಸ್ತುತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ತೇವಾಂಶದ ಕೊರತೆಯಿಂದಾಗಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಒಣಗುತ್ತಿವೆ. ಕಳೆದ ಎರಡು ವಾರಗಳ ಹಿಂದೆ ತಾಲ್ಲೂಕಿನಾದ್ಯಂತ ಆಗಾಗ ತುಂತುರು ಮಳೆ ಆಗಿತ್ತು.

ಆದರೆ ಸದ್ಯ ಮಳೆರಾಯ ಸಂಪೂರ್ಣ ಕಾಣೆಯಾಗಿದ್ದರಿಂದ ಅಲ್ಪಸ್ವಲ್ಪ ಬೆಳೆದು ನಿಂತಿದ್ದ ಬೆಳೆಗಳೂ ಒಣಗಿ ಅನ್ನದಾತರಲ್ಲಿ ಭಯ ಮೂಡಿಸಿವೆ.

ಸಾವಿರಾರು ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿರುವ ಶೇಂಗಾ, ಗೋವಿನ ಜೋಳ, ಹತ್ತಿ ಬೆಳೆಗಳು ಬಾಡುತ್ತಿವೆ. ಬೆಳಗಿನ ಸಮಯದಲ್ಲಿ ಬೀಸುವ ತಂಪು ವಾತಾ ವರಣಕ್ಕೆ ಬೆಳೆಗಳು ಉಸಿರಾಡು ತ್ತಿವೆ. ಆದರೆ ಮಧ್ಯಾಹ್ನದ ಹೊತ್ತಿಗೆ ಜೀವಕಳೆ ಕಳೆದುಕೊಂಡು ರೈತನ ದುಗುಡವನ್ನು ಹೆಚ್ಚಿಸಿವೆ.

ಮುಖ್ಯವಾಗಿ ಬೆಳೆದು ನಿಂತಿರುವ ಗೋವಿನಜೋಳ ಸೇರಿದಂತೆ ಎಲ್ಲ ಬೆಳೆಗಳಿಗೆ ಮಳೆಯ ಅಗತ್ಯ ಇದೆ. ದಿನ ಬೆಳಗಾದರೆ ಸಾಕು ರೈತರು ಇವತ್ತಾದರೂ ಮಳೆ ಸುರಿಯಬಹುದೇ ಎಂದು ಆಶೆಗಣ್ಣಿನಿಂದ ಆಗಸದತ್ತ ದೃಷ್ಟಿ ಹಾಯಿಸುತ್ತಿದ್ದಾರೆ.

ಸ್ವಲ್ಪ ಹೆಚ್ಚು ತೇವಾಂಶ ಬೇಡುವ ಗೋವಿನಜೋಳವಂತೂ ಸದ್ಯ ಸಂಪೂರ್ಣ ಒಣಗುವ ಸ್ಥಿತಿ ತಲುಪಿದ್ದು, ಅನ್ನದಾತನ ಜಂಘಾಬಲವನ್ನೇ ಉಡು ಗಿಸಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು ಕಣ್ಣೆದುರೇ ಬೆಳೆದಿರುವ ಬೆಳೆಗಳು ಒಣಗುತ್ತಿರುವುದನ್ನು ಕಂಡು ಸಂಕಟ ಪಡುತ್ತಿದ್ದಾರೆ.

ಇಂಥ ಬರದ ಸ್ಥಿತಿಯಲ್ಲೂ ಸರ್ಕಾರ ತಾಲ್ಲೂಕು ಅನ್ನು ಬರಪೀಡಿತ ಪಟ್ಟಿಯಿಂದ ಕೈ ಬಿಟ್ಟಿರುವುದು ರೈತರನ್ನು ಕಂಗಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿಯವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬರ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದರು.

ತಾಲ್ಲೂಕನ್ನು ಬರಗಾಲದ ಪಟ್ಟಿಗೆ ಸೇರಿಸುತ್ತಾರೆ ಎಂಬ ವಿಶ್ವಾಸ ರೈತರಲ್ಲಿತ್ತು. ಆದರೆ ಪಟ್ಟಿಯಲ್ಲಿ ತಾಲ್ಲೂಕಿನ ಹೆಸರು ನಾಪತ್ತೆ ಆಗಿರುವುದು ಅವರಲ್ಲಿ ದುಃಖ ಉಮ್ಮಳಿಸುವಂತೆ ಮಾಡಿದೆ. ಬರಗಾಲದ ಪಟ್ಟಿಯಲ್ಲಿ ತಾಲ್ಲೂಕಿನ ಹೆಸರು ಬಾರದ ಹಿನ್ನೆಲೆಯಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಶನಿವಾರ ಇಡೀ ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

‘ಮಳೆ ಇಲ್ಲದೆ ಬಿತ್ತಿರುವ ಎಲ್ಲ ಬೆಳೆಗಳೂ ಒಣಗಿವೆ. ಕೃಷಿಗೆ ಖರ್ಚು ಮಾಡಿರುವ ಬಂಡವಾಳ ಕೂಡ ಕೈಗೆ ಸಿಗದ ಸ್ಥಿತಿ ಇದೆ. ಸರ್ಕಾರ ನಮ್ಮ ತಾಲ್ಲೂಕನ್ನು ಬರಗಾಲ ಪೀಡಿತ ಪಟ್ಟಿಯಲ್ಲಿ ಸೇರಿಸಬೇಕಾಗಿತ್ತು. ಆದರೆ ಕೈ ಬಿಟ್ಟಿರುವುದು ನಮ್ಮನ್ನು ಕಂಗೆಡಿಸಿದೆ’ ಎಂದು ರಾಮಗೇರಿ ಗ್ರಾಮದ ರೈತ ದೇವಣ್ಣ ಬೆಟಗೇರಿ ಹಾಗೂ ಬಟ್ಟೂರು ಗ್ರಾಮದ ಮಹಾಂತೇಶ ಹೊಳಲಾಪುರ ನೋವು ತೋಡಿಕೊಂಡರು.

‘ ಸೆ.1ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಅಧಿಕಾರಿಗಳು ನೈಜ ಸ್ಥಿತಿ ಕುರಿತು ಮಾಹಿತಿ ನೀಡಬೇಕು’ ಎಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಟಾಕಪ್ಪ ಸಾತಪುತೆ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-23-1742440476

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ