ನಿನ್ನ ಧೈರ್ಯಕ್ಕೆ ಮೆಚ್ಚಲೇಬೇಕು.. ಟಾಕ್ಸಿಕ್ ನೋಡಿ ಯಶ್‌ ಬಗ್ಗೆ ನಟ ಸುದೀಪ್ ಮಾತು

ನಿನ್ನ ಧೈರ್ಯಕ್ಕೆ ಮೆಚ್ಚಲೇಬೇಕು.. ಟಾಕ್ಸಿಕ್ ನೋಡಿ ಯಶ್‌ ಬಗ್ಗೆ ನಟ ಸುದೀಪ್ ಮಾತು

ನಿನ್ನ ಧೈರ್ಯಕ್ಕೆ ಮೆಚ್ಚಲೇಬೇಕು.. ಟಾಕ್ಸಿಕ್ ನೋಡಿ ಯಶ್‌ ಬಗ್ಗೆ ನಟ ಸುದೀಪ್ ಮಾತು

ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಟಾಕ್ಸಿಕ್’ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿತ್ತು. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಇನ್ನೂ ಕೆಲವರು ಟಾಕ್ಸಿಕ್ ಸಿನಿಮಾದ ವಿರುದ್ಧ ನಕಾರಾತ್ಮಕ ಪ್ರಚಾರ ಮಾಡಿದ್ದರು.

ಆ ಬೆನ್ನಲ್ಲೇ ಚಂದನವದ ನಟ, ನಟಿಯರು, ನಿರ್ದೇಶಕರು ಹಾಗೂ ಅಭಿಮಾನಿಗಳು ಯಶ್‌ ಅವರ ಪರ ನಿಂತಿದ್ದಾರೆ. ನಿನ್ನೆ ನಟ ಉಪೇಂದ್ರ, ನಿರ್ದೇಶಕ ಮಂಸೋರೆ ಸೇರಿದಂತೆ ಹಲವರು ಟಾಕ್ಸಿಕ್ ಸಿನಿಮಾ ಹಾಗೂ ಯಶ್‌ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಬೆನ್ನಲ್ಲೇ ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಯಶ್ ನಟನೆ ಬಗ್ಗೆ ಹಾಡಿ ಹೊಗಳಿದ್ದಾರೆ.

ನಟ ಕಿಚ್ಚ ಸುದೀಪ್ ಅವರು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾವನ್ನು ವೀಕ್ಷಿಸಿ, ಅವರ ವಿಭಿನ್ನ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಸಾಂಪ್ರದಾಯಿಕ ಕಮರ್ಷಿಯಲ್ ಹಾದಿ ಬಿಟ್ಟು ವಿಭಿನ್ನವಾಗಿ ಹೆಜ್ಜೆ ಇಡೋದಕ್ಕೆ ಧೈರ್ಯ ಬೇಕು’ ಎಂದಿದ್ದಾರೆ.

ಕಿಚ್ಚ ಸುದೀಪ್ ಪೋಸ್ಟ್‌ನಲ್ಲಿ ಹೇಳಿದ್ದೇನು..?

‘ನಾನು ಇದನ್ನು ಖಂಡಿತ ಹೇಳಲೇಬೇಕು ಯಶ್, ನಿಮ್ಮ ಹಿಂದಿನ ಬ್ಲಾಕ್‌ಬಸ್ಟರ್ ಸಿನಿಮಾದ ಯಶಸ್ಸಿನ ನಂತರ, ಎಲ್ಲರೂ ನಿರೀಕ್ಷಿಸುವಂತಹದ್ದೇ ಒಂದು ಸಾಮಾನ್ಯ ಸಿನಿಮಾ. ಆದರೆ ನೀವು ಕಮರ್ಷಿಯಲ್ ಸಿನಿಮಾ ಮಾಡುವ ಸುಲಭ ಹಾದಿಯನ್ನು ಆಯ್ದುಕೊಳ್ಳದೆ, ನಿಜಕ್ಕೂ ಭಿನ್ನವಾದ ಪ್ರಯತ್ನವನ್ನು ಮಾಡಿದ್ದೀರಾ. ಈ ರೀತಿಯ ಪ್ರಯೋಗವನ್ನು ಕೈಗೆತ್ತಿಕೊಳ್ಳಲು ವಿಭಿನ್ನ ಆಲೋಚನಾ ಶಕ್ತಿ, ನಂಬಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಪಾರ ಧೈರ್ಯ ಬೇಕಾಗುತ್ತದೆ. ಟಾಕ್ಸಿಕ್ ಒಂದು ಅತ್ಯಂತ ಅಪರೂಪದ ಹಾಗೂ ಪ್ರಶಂಸನೀಯ ಪ್ರಯತ್ನ. ಚಿತ್ರದ ಹಲವು ದೃಶ್ಯಗಳು ನಿಜಕ್ಕೂ ಕುತೂಹಲಕಾರಿಯಾಗಿದ್ದು, ದೊಡ್ಡ ಮಟ್ಟದ ಚರ್ಚೆ, ಕಲಿಕೆಗೆ ವೇದಿಕೆ ಕಲ್ಪಿಸುತ್ತವೆ. ಸಾಮಾನ್ಯ ಹಾದಿಯನ್ನು ಬಿಟ್ಟು ಧೈರ್ಯವಾಗಿ ಪ್ರಯೋಗಕ್ಕೆ ಇಳಿದ ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ಸಲಾಂ. ನನ್ನ ಸ್ನೇಹಿತನಿಗೆ ಹೃದಯಪೂರ್ವಕ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ