ಪಾಕ್, ಸೌದಿ ಒಪ್ಪಂದದ ಬಗ್ಗೆ ಮೋದಿ ಮಾತನಾಡಿದ್ದಾರೆ ಎಂಬುವುದು ಸುಳ್ಳು

ಪಾಕ್, ಸೌದಿ ಒಪ್ಪಂದದ ಬಗ್ಗೆ ಮೋದಿ ಮಾತನಾಡಿದ್ದಾರೆ ಎಂಬುವುದು ಸುಳ್ಳು

ಪಾಕ್, ಸೌದಿ ಒಪ್ಪಂದದ ಬಗ್ಗೆ ಮೋದಿ ಮಾತನಾಡಿದ್ದಾರೆ ಎಂಬುವುದು ಸುಳ್ಳು

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ನಡುವೆ ನಡೆದಿರುವ ರಕ್ಷಣಾ ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಹೇಳುತ್ತಾ ಫಖಾರ್‌ ಉರ್‌ ರೆಹಮಾನ್‌ (@Fakharrehman01) ಎಂಬ ಪಾಕಿಸ್ತಾನದ ಪತ್ರಕರ್ತ, ‘ಎಕ್ಸ್‌’ನಲ್ಲಿ ವಿಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ಒಪ್ಪಂದಕ್ಕೆ ಬರುವ ಸಾಧ್ಯತೆಯ ಬಗ್ಗೆ ನಾನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಚರ್ಚಿಸಿದ್ದೆ ಎಂದು ಮೋದಿ ಹೇಳುತ್ತಿರುವುದು ವಿಡಿಯೊದಲ್ಲಿದೆ. ಆದರೆ, ಇದು ಸುಳ್ಳು ಮಾಹಿತಿ.

ವಿಡಿಯೊ ತುಣುಕಿನ ಕೀಫ್ರೇಮ್‌ ಒಂದನ್ನು ಬಳಸಿಕೊಂಡು ಗೂಗಲ್‌ ಲೆ‌ನ್ಸ್‌ ಮೂಲಕ ಹುಡುಕಿದಾಗ, ಪ್ರಧಾನಿ ಕಚೇರಿಯ (ಪಿಎಂಒ) ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಪ್ರಧಾನಿಯವರ ಭಾಷಣದ ವಿಡಿಯೊ ಸಿಕ್ಕಿತು. 1 ಗಂಟೆ 39 ನಿಮಿಷಗಳ ಪೂರ್ಣ ವಿಡಿಯೊವನ್ನು ಪರಿಶೀಲಿಸಿದಾಗ, ಅವರೆಲ್ಲೂ ಈ ಒಪ್ಪಂದದ ಬಗ್ಗೆ ಮಾತನಾಡಿರುವುದು ಕಂಡು ಬರಲಿಲ್ಲ. ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಿದಾಗ, ಪಿಐಬಿ ಪ್ರಕಟಿಸಿದ ಭಾಷಣದ ಲಿಖಿತ ‍ಪ್ರತಿ ಸಿಕ್ಕಿತು. ಅದರಲ್ಲೂ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ನಡುವಿನ ಒಪ್ಪಂದದ ಬಗ್ಗೆ ‍ಪ್ರಸ್ತಾಪ ಇರಲಿಲ್ಲ. ವಿಡಿಯೊ ತುಣುಕಿನ ಧ್ವನಿ ಡೀಪ್‌ ಫೇಕ್‌ ಆಗಿರಬಹುದು ಎಂದು ಅನುಮಾನ ಬಂತು. ಧ್ವನಿಯನ್ನು ರೆಸೆಂಬಲ್‌ ಎಐ ಟೂಲ್‌ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ, ಅದು ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಿರುವ ಧ್ವನಿ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ