ಭೀಕರ ಪ್ರವಾಹಕ್ಕೆ ತತ್ತರ: ವಿದೇಶಗಳಿಂದ ತಾಂತ್ರಿಕ ನೆರವು ಕೋರಿದ ನೇಪಾಳ

ಭೀಕರ ಪ್ರವಾಹಕ್ಕೆ ತತ್ತರ: ವಿದೇಶಗಳಿಂದ ತಾಂತ್ರಿಕ ನೆರವು ಕೋರಿದ ನೇಪಾಳ

ಭೀಕರ ಪ್ರವಾಹಕ್ಕೆ ತತ್ತರ: ವಿದೇಶಗಳಿಂದ ತಾಂತ್ರಿಕ ನೆರವು ಕೋರಿದ ನೇಪಾಳ

ಕಠ್ಮಂಡು: ಹಿಮಾಲಯದ ಚೀನಾ-ನೇಪಾಳ ಗಡಿಭಾಗದಲ್ಲಿ ಭೀಕರ ಪ್ರವಾಹ ಸಂಭವಿಸಿದ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರವು ವಿಶೇಷ ತಾಂತ್ರಿಕ ಕಾರ್ಯಾಚರಣೆಗಾಗಿ ವಿದೇಶಗಳ ನೆರವನ್ನು ಕೋರಿದೆ. ಆದರೆ, ಸಾಮಾನ್ಯ ಶೋಧ ಮತ್ತು ರಕ್ಷಣಾ ಕಾರ್ಯಗಳಿಗೆ ಹೊರಗಿನವರ ಸಹಾಯ ಅಗತ್ಯವಿಲ್ಲ ಎಂದೂ ತಿಳಿಸಿದೆ.

‘ಸುರಂಗಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವುದು, ಸಾರಿಗೆ ಮತ್ತು ಸಂಪರ್ಕ ಜಾಲ ಮರುಸ್ಥಾಪಿಸುವುದು, ಮೃತದೇಹಗಳ ಗುರುತು ಪತ್ತೆ ಮಾಡುವುದು, ಡಿಎನ್‌ಎ ಪರೀಕ್ಷೆ ನಡೆಸುವುದು ಮತ್ತು ಮೃತದೇಹಗಳನ್ನು ದೀರ್ಘಕಾಲ ಸಂರಕ್ಷಿಸಿಡುವುದು ಸೇರಿದಂತೆ ನೇಪಾಳದಲ್ಲಿ ತಾಂತ್ರಿಕ ಸಾಮರ್ಥ್ಯದ ಕೊರತೆಯಿರುವ ಕ್ಷೇತ್ರಗಳಲ್ಲಿ ವಿದೇಶಿ ತಜ್ಞರ ಅಗತ್ಯವಿದೆ’ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್‌ ಖನಾಲ್ ತಿಳಿಸಿದ್ದಾರೆ.

ಬುಧವಾರ ಸಂಭವಿಸಿದ ಹಿಮನದಿ ಸರೋವರದ ಸ್ಫೋಟದಿಂದಾಗಿ ಬೃಹತ್ ಗಾತ್ರದ ಬಂಡೆಗಳು, ಮಂಜುಗಡ್ಡೆ, ಮಣ್ಣು ಸೇರಿದಂತೆ ಭಗ್ನಾವಶೇಷಗಳು ಹರಿದು ಬಂದಿವೆ. ಈ ದುರಂತದಲ್ಲಿ ನೇಪಾಳ ಮತ್ತು ಚೀನಾದ ಟಿಬೆಟ್ ಪ್ರಾಂತ್ಯದಾದ್ಯಂತ ಸುಮಾರು 626 ಜನರು ಮೃತಪಟ್ಟಿದ್ದು, 2,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

‘ನಮ್ಮಲ್ಲಿ ಅಗತ್ಯ ಪರಿಣತಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವಿಲ್ಲದ ಕಾರಣ ತಾಂತ್ರಿಕ ನೆರವಿಗಾಗಿ ನಾವು ಈಗಾಗಲೇ ಮನವಿ ಮಾಡಿದ್ದೇವೆ’ ಎಂದು ಖನಾಲ್ ಹೇಳಿದ್ದಾರೆ.

ಸುಮಾರು ಎರಡು ಡಜನ್ ಸೇತುವೆಗಳು ಧ್ವಂಸಗೊಂಡಿರುವ ದುರಂತ ಪೀಡಿತ ಪ್ರದೇಶಗಳಲ್ಲಿ ಸಂಪರ್ಕವನ್ನು ಮರುಸ್ಥಾಪಿಸಲು ನೇಪಾಳವು, ನೆರೆಯ ದೇಶಗಳಾದ ಭಾರತ ಮತ್ತು ಚೀನಾದ ಬಳಿ ‘ಬೇಲಿ ಸೇತುವೆ’ಗಳಿಗೆ ಮನವಿ ಮಾಡಿದೆ ಎಂದು ವರದಿಯಾಗಿದೆ.

ನೇಪಾಳದ ವಿದೇಶಾಂಗ ಸಚಿವಾಲಯವು ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗಳನ್ನು ದೇಶವೇ ಸ್ವತಃ ನಿರ್ವಹಿಸಬಲ್ಲದು ಎಂದು ಶುಕ್ರವಾರ ಹೇಳಿತ್ತು. ಈ ಮೂಲಕ ವಿದೇಶಿ ನೇರ ಹಸ್ತಕ್ಷೇಪವನ್ನು ನಿರಾಕರಿಸಿತ್ತು.

ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ ಖನಾಲ್, ನೇಪಾಳದ ರಕ್ಷಣಾಪಡೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಸಮರ್ಥವಾಗಿವೆ. ಹೀಗಾಗಿ ಹೊರಗಿನ ನೆರವಿನ ಅಗತ್ಯವಿಲ್ಲ ಎಂದು ಹೇಳಿದ್ದರು.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡುವ ಅಗತ್ಯವಿಲ್ಲ ಎಂದೂ ಅವರು ತಿಳಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ