ಈ ನಾಲ್ಕು ರಾಶಿಯವರಿಗೆ ರಾಜಯೋಗ :ಒಲಿಯುವಳು ಧನಲಕ್ಷ್ಮೀ, ಮುಂದಿದೆ ಐಷಾರಾಮಿ ಜೀವನ

ಈ ನಾಲ್ಕು ರಾಶಿಯವರಿಗೆ ರಾಜಯೋಗ :ಒಲಿಯುವಳು ಧನಲಕ್ಷ್ಮೀ, ಮುಂದಿದೆ ಐಷಾರಾಮಿ ಜೀವನ

ಈ ನಾಲ್ಕು ರಾಶಿಯವರಿಗೆ ರಾಜಯೋಗ :ಒಲಿಯುವಳು ಧನಲಕ್ಷ್ಮೀ, ಮುಂದಿದೆ ಐಷಾರಾಮಿ ಜೀವನ

ಲಾಭ ದೃಷ್ಟಿ ರಾಜಯೋಗ ೨೦೨೬: ಈ ವರ್ಷ ಆಗಸ್ಟ್ ೧೩ ರಂದು, ಬುಧ ಮತ್ತು ಶುಕ್ರ ಪರಸ್ಪರ ೬೦° ಯಲ್ಲಿ ಬಂದು ಲಾಭ ದೃಷ್ಟಿ ಯೋಗ ನಿರ್ಮಾಣ ಆಗ್ತಾ ಇದೆ. ಈ ಯೋಗ ನಾಲ್ಕು ರಾಶಿಯವರ ಜೀವನದ ದಿಕ್ಕನ್ನು ಸಕಾರಾತ್ಮಕವಾಗಿ ಬದಲಾಯಿಸುವುದು.

ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಬುದ್ಧಿಶಕ್ತಿ, ವ್ಯವಹಾರ ಮತ್ತು ಮಾತಿನ ಅಂಶ ಅಂತ ಕರೀತಾರೆ. ಮತ್ತೊಂದು ಕಡೆ ಶುಕ್ರ ಗ್ರಹ ಎಂದರೆ ಪ್ರೀತಿ, ಸಂತೋಷ ಮತ್ತು ಸಂಪತ್ತಿಗೆ ಕಾರಣವಾಗುವವನು. ಇವೆರಡೂ ಶುಭ ಗ್ರಹಗಳೇ. ಈ ಎರಡೂ ಗ್ರಹಳು ಒಟ್ಟಾದಾಗ ಅಥವಾ ಎದುರು ಬದುರಾದಾಗ ಕೆಲವು ಯೋಗಗಳು ರೂಪುಗೊಳ್ಳುವುದು. ರಾಶಿಗೆ ಅನುಗುಣವಾಗಿ ಈ ಯೋಗಗಳು ಶುಭ ಫಲವನ್ನು ನೀಡುವುದು. ಬುಧ ಮತ್ತು ಶುಕ್ರ ಗ್ರಹಗಳು ಪರಸ್ಪರ ೬೦°ಯಲ್ಲಿ ಬಂದು ಎದುರುಬದುರಾದಾಗ ಪ್ರಬಲ ಯೋಗವನ್ನು ರೂಪಿಸ್ತವೆ.

ಗುರುವಾರ, ಆಗಸ್ಟ್ ೧೩, ೨೦೨೬ ರಂದು ರಾತ್ರಿ ೯:೪೯ ಕ್ಕೆ, ಬುಧ ಮತ್ತು ಶುಕ್ರನ ಕಾರಣದಿಂದ ಲಾಭ ದೃಷ್ಟಿ ಯೋಗ ನಿರ್ಮಾಣ ಆಗ್ತಾ ಇದೆ. ಈ ಯೋಗವು ಸ್ವಲ್ಪ ಸಮಯದವರೆಗೆ ಇರುವುದು. ಈ ಅವಧಿಯಲ್ಲಿ ಲಾಭ ದೃಷ್ಟಿ ಯೋಗದ ಕಾರಣದಿಂದ ಕೆಲವು ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವುದು. ಜೀವನದಲ್ಲಿ ಪ್ರೀತಿ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಈ ಯೋಗ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗೆ ನೆಮ್ಮದಿಯ ಜೀವನ ನಿಮ್ಮದಾಗುವುದು. ಹಾಗಿದ್ದರೆ ಬುಧ ಮತ್ತು ಶುಕ್ರನ ಕಾರಣದಿಂದ ಯಾವ ನಾಲ್ಕು ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು ನೋಡೋಣ.

ಬುಧ ಮತ್ತು ಶುಕ್ರನ ಈ ಸಂಯೋಜನೆಯು ವೃಷಭ ರಾಶಿಯವರಿಗೆ ಹೆಚ್ಚು ಶುಭ ಫಲವನ್ನು ನೀಡ್ತದೆ. ಕಚೇರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಪ್ರಮುಖ ವ್ಯವಹಾರದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಇದು. ಆದರೆ ಆತುರದ ನಿರ್ಧಾರ ಬೇಡ. ಎಲ್ಲಾ ವಿಚಾರಗಳನ್ನು ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಈ ರಾಶಿಯವರ ಸೌಕರ್ಯಗಳು ಮತ್ತು ಐಷಾರಾಮ ಹೆಚ್ಚಾಗುವುದು. ಹೊರಗೆ ಉಳಿದಿರುವ ಹಣ ವಾಪಸ್‌ ಬರುವುದು.ಪ್ರೇಮ ಸಂಬಂಧವು ಗಾಢವಾಗಬಹುದು.

ಮಿಥುನ ರಾಶಿಯವರಿಗೆ, ಲಾಭ ದೃಷ್ಟಿ ಯೋಗವು ಎಲ್ಲಾ ರೀತಿಯಲ್ಲಿಯೂ ಪ್ರಯೋಜನಕಾರಿಯಾಗಿರುವುದು. ಅವರ ವ್ಯಕ್ತಿತ್ವದ ಮೂಲಕವೇ ಎಲ್ಲರನ್ನೂ ತನ್ನತ್ತ ಸೆಳೆಯುವರು. ಆದಾಯ ಗಳಿಸುವ ಬೇರೆ ಬೇರೆ ಮಾರ್ಗಗಳು ಹುಟ್ಟಿಕೊಳ್ಳುವುದು. ಕಚೇರಿಯಲ್ಲಿ ಇವರ ಕೆಲಸಕ್ಕೆ ಮನ್ನಣೆ ಸಿಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

ಬುಧ-ಶುಕ್ರ ಸಂಯೋಗ ಸಿಂಹ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರುವುದು. ಅದೃಷ್ಟ ನಿಮ್ಮ ಜೊತೆ ನಿಲ್ಲುವುದು. ಕೈ ಹಾಕಿದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು. ನಿಮ್ಮ ಮಾತಿನ ಮೂಲಕವೇ ಎಲ್ಲರನ್ನೂ ಹಿಡಿತಕ್ಕೆ ತೆಗೆದುಕೊಳ್ಳುವಿರಿ. ಮನೆಯಾಗಲಿ, ಕಚೇರಿಯಾಗಲಿ ನಿಮ್ಮ ಮಾತೇ ನಡೆಯುವುದು. ಬಹಳ ಮುಖ್ಯವಾದ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಬಹುದು. ಕೆಲಸದಲ್ಲಿ ಬಡ್ತಿ ಸಿಗುವುದು, ವೇತನ ಹೆಚ್ಚಾಗುವುದು. ಬಾಕಿ ಉಳಿದಿರುವ ಕೆಲಸಗಳು ಒಂದು ಹಂತಕ್ಕೆ ಮುಗಿಯುವುದು.

ಬುಧ-ಶುಕ್ರ ಸಂಯೋಗವು ತುಲಾ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುವುದು. ಜೀವನವು ಹೊಸ ದಿಕ್ಕನ್ನು ತೆಗೆದುಕೊಳ್ಳುವುದು. ಹೂಡಿಕೆಗಳು ಗಮನಾರ್ಹ ಲಾಭವನ್ನು ನೀಡಬಹುದು. ಗೌರವ ಹೆಚ್ಚಾಗಬಹುದು. ಭೌತಿಕ ಸೌಕರ್ಯಗಳು ಮತ್ತು ಸಂಪತ್ತು ಹೆಚ್ಚಾಗುತ್ತದೆ. ಮದುವೆಯಾಗದವರಿಗೆ ವಿವಾಹ ಯೋಗ ಕೂಡಿ ಬರುವುದು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ