2 ಸಾವಿರ ಅಡಿ ಸಾಗರದಾಳದಲ್ಲಿ ಕಪ್ಪು ಮೊಟ್ಟೆಗಳು ಪತ್ತೆ: ಒಂದೊಂದೂ ಮೊಟ್ಟೆಯೊಳಗಿತ್ತು ಏಳು ಭ್ರೂಣ!

2 ಸಾವಿರ ಅಡಿ ಸಾಗರದಾಳದಲ್ಲಿ ಕಪ್ಪು ಮೊಟ್ಟೆಗಳು ಪತ್ತೆ: ಒಂದೊಂದೂ ಮೊಟ್ಟೆಯೊಳಗಿತ್ತು ಏಳು ಭ್ರೂಣ!

2 ಸಾವಿರ ಅಡಿ ಸಾಗರದಾಳದಲ್ಲಿ ಕಪ್ಪು ಮೊಟ್ಟೆಗಳು ಪತ್ತೆ: ಒಂದೊಂದೂ ಮೊಟ್ಟೆಯೊಳಗಿತ್ತು ಏಳು ಭ್ರೂಣ!

ಸಮುದ್ರ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ದೊಡ್ಡ ದೊಡ್ಡ ಅಲೆಗಳು, ಮರಳು, ಮೀನು ಜಲಚರ. ಸಮುದ್ರ ಅಂದ್ರೆ ಇಷ್ಟೇ ಅಲ್ಲ. ಅದು ಅದೆಷ್ಟೋ ನಿಗೂಢಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಇಡೀ ದ್ವಾರಕೆಯನ್ನೇ ಸಮುದ್ರ ನುಂಗಿರುವುದು ನಮಗೆ ಗೊತ್ತೇ ಇದೆ. ಇದೇ ರೀತಿ ಸಮುದ್ರದಾಳಕ್ಕಿಳಿದಂತೆ ನಮಗೆ ತಿಳಿಯದ ಹೊಸ ಲೋಕವೇ ಅಲ್ಲಿದೆ. ನಾವು ಯಾವತ್ತೂ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗದ ಜೀವ ಜಗತ್ತು ಸಮುದ್ರದಾಳದಲ್ಲಿದೆ.

ಇದೀಗ ಮತ್ತೊಂದು ಅಚ್ಚರಿ ಸಾಗರದಾಳದಿಂದ ಹೊರ ಬಂದಿದೆ. ಪೆಸಿಫಿಕ್ ಮಹಾಸಾಗರದ ಸುಮಾರು 20,000 ಅಡಿಗಳಷ್ಟು ಆಳದಲ್ಲಿ ಬಚ್ಚಿಟ್ಟುಕೊಂಡಿದ್ದ ವಿಸ್ಮಯವಿದು. ಇಲ್ಲಿಯ ಬಂಡೆ ಮೇಲೆ ಮೊಟ್ಟೆ ಆಕಾರದಲ್ಲಿರುವ ನಾಲ್ಕು ಕಪ್ಪು ಬಾಲ್‌ಗಳಿರುವುದು ವಿಜ್ಞಾನಿಗಳ ಕಣ್ಣಗೆ ಬಿದ್ದಿದೆ. ತಕ್ಷಣಕ್ಕೆ ನೋಡುವಾಗ ಇದು ಕಪ್ಪು ಬಣ್ಣದ ಮೊಟ್ಟೆ ಹಾಗೆ ಕಾಣುತ್ತಿತ್ತು. ಆದ್ರೆ ಈ ಬಾಲ್‌ಗಳು ವಿಚಿತ್ರವಾಗಿ ಹೊಳೆಯುತ್ತಿತ್ತು. ಇದು ಅಸಲಿಗೆ ಮೊಟ್ಟೆಯೇ ಆಗಿರಲಿಲ್ಲ! ಬದಲಿಗೆ ಭ್ರೂಣವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಚೀಲವದು.

ಆಳ ಸಮುದ್ರದಲ್ಲಿ ಬಂಡೆಗಳಿಗೆ ಅಂಟಿಕೊಂಡಿದ್ದ ಕಕೂನ್‌ :

ವಾಯುವ್ಯ ಪೆಸಿಫಿಕ್ ಮಹಾಸಾಗರದಲ್ಲಿರುವ ಕುರಿಲ್-ಕಮ್ಚಟ್ಕಾ ಕಂದಕದ ಪ್ರಪಾತ ಇಳಿಜಾರಿನಲ್ಲಿ ರಿಮೋಟ್‌ ಕಂಟ್ರೋಲ್‌ ಚಾಲಿತ ವಾಹನವನ್ನು ಬಳಸಿಕೊಂಡು ಇದರ ಬಗ್ಗೆ ಸಂಶೋಧಿಸಲಾಗುತ್ತಿದೆ. ಹೊಕ್ಕೈಡೊ ವಿಶ್ವವಿದ್ಯಾಲಯದ ಕುರಿಲ್-ಕಮ್ಚಟ್ಕಾ ಟ್ರೆಂಚ್ ಮತ್ತು ಅಯೋಯ್ ತ್ಸುಯುಕಿ ಅವರು ಬಯಾಲಜಿ ಲೆಟರ್ಸ್ ಸಂಶೋಧನಾ ಪ್ರಬಂಧದಲ್ಲಿ ಈ ಬಗ್ಗೆ ವರದಿ ಮಾಡಿದ್ದಾರೆ. ಈ ವರದಿಯ ಪ್ರಕಾರ, ಹೊಳೆಯುತ್ತಿದ್ದ ವಸ್ತು ಫ್ಲಾಟ್‌ವರ್ಮ್ ಪ್ರಭೇದವನ್ನು ತನ್ನೊಳಗೆ ಇರಿಸಿಕೊಂಡಿದ್ದ ಕಕೂನ್‌ಗಳಾಗಿತ್ತು. ಕಪ್ಪು ಬಣ್ಣದ ಮೊಟ್ಟೆಯಾಕಾರದ ಕಕೂನ್ 6,176 ರಿಂದ 6,200 ಮೀಟರ್ ಅಥವಾ 20,000 ಅಡಿಗಳಿಗಿಂತ ಹೆಚ್ಚು ಆಳದಲ್ಲಿರುವ ಬಂಡೆಗಳಿಗೆ ಅಂಟಿಕೊಂಡಿತ್ತು.

ಮೂರರಿಂದ ಏಳು ಭ್ರೂಣಗಳಿದ್ದ ಕಕೂನ್‌ :

ಈ ಕಕೂನ್‌ ಅನ್ನು ಲ್ಯಾಬ್‌ಗೆ ತಂದು ಪರೀಕ್ಷೆ ನಡೆಸುವಾಗ ಪ್ರತಿಯೊಂದು ಕೋಕೂನ್‌ಗಳು ಸುಮಾರು ಮೂರು ಮಿಲಿಮೀಟರ್ ಗಾತ್ರವನ್ನು ಹೊಂದಿತ್ತು. ಅದರೊಳಗೆ ಮೂರರಿಂದ ಏಳು ಭ್ರೂಣಗಳೂ ಇತ್ತು. ಅವುಗಳಲ್ಲಿ ಕೆಲವು ಇನ್ನೂ ಗೋಲಾಕಾರದ ಹಂತದಲ್ಲಿದ್ದರೆ, ಕೆಲವು ಈಗಾಗಲೇ ಹುಳುಗಳಂತಹ ಭ್ರೂಣಗಳಾಗಿ ರೂಪಾಂತರಗೊಂಡಿತ್ತು. ನಾಲ್ಕೂ ಕಕೂನ್‌ಗಳಲ್ಲಿ ಒಂದೇ ಹಂತದಲ್ಲಿ ಬೆಳವಣಿಗೆಯಾದ ಭ್ರೂಣಗಳಿರುವುದು ಪತ್ತೆಯಾಗಿದೆ.

ಇನ್ನು ಈ ಹುಳಗಳು ಯಾವ ಪ್ರಬೇಧಕ್ಕೆ ಸೇರಿವೆ ಎನ್ನುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 18S ಮತ್ತು 28S ರೈಬೋಸೋಮಲ್ ಆರ್‌ಎನ್‌ಎ ಜೆನೆಟಿಕ್‌ ಪರೀಕ್ಷೆಯ ಆಧಾರದಲ್ಲಿ ಇದರ ಪ್ರಭೇದವನ್ನು ಕಂಡು ಹಿಡಿಯಲಾಗಿದೆ. ಈ ಜೀವಿಗಳು ಸಮುದ್ರ ಫ್ಲಾಟ್‌ವರ್ಮ್‌ಗಳ ಗುಂಪಾದ ಮಾರಿಕೋಲಾಕ್ಕೆ ಸೇರಿವೆ ಎನ್ನುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.ಆದ್ರೆ ಇದರ ಡಿಎನ್‌ಎ ಇದುವರೆಗೆ ತಿಳಿದಿರುವ ಯಾವುದೇ ಜೀವಿಯ ಜೀನ್‌ಗಳಿಗೆ ಹೋಲಿಕೆಯಾಗುತ್ತಿಲ್ಲ ಎನ್ನುವುದು ವಿಶೇಷ.

ಈ ಚಪ್ಪಟೆಹುಳಗಳು ನೀರಿನ ಮೇಲೆ ಅಂದರೆ ಭೂಮಿಯಲ್ಲಿ ವಾಸಿಸುವ ಫ್ಲಾಮ್‌ ವರ್ಮ್‌ಗಳಂತೆಯೇ ಭ್ರೂಣದ ಬೆಳವಣಿಗೆಯನ್ನು ಹೊಂದಿದೆ. ಶಾರೀರಿಕ ಮತ್ತು ಪರಿಸರ ಬದಲಾವಣೆಗಳ ಮೂಲಕ ಆಳವಾದ ನೀರಿಗೆ ಹೊಂದಿಕೊಂಡು ಬದುಕುತ್ತಿವೆ.ಆದರೆ, ಸಂತಾನೋತ್ಪತ್ತಿ ಶೈಲಿಯಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಸಾಗರದಾಳದ ತೀವ್ರ ಒತ್ತಡ, ಆಹಾರದ ಕೊರತೆ ಮತ್ತು ನಿರಂತರ ಕತ್ತಲೆಗೆ ಹೊಂದಿಕೊಳ್ಳುವುದು ಭ್ರೂಣದ ಬೆಳವಣಿಗೆಯಲ್ಲಿ ಬದಲಾವಣೆಗಳಿಗಿಂತ ಶಾರೀರಿಕ ಬದಲಾವಣೆಗಳಿಗೆ ಕಾರಣವಾಗಬಹುದು ಎನ್ನುವುದು ವಿಜ್ಞಾನಿಗಳ ವಾದ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ