ದೇವದತ್ತ ಶತಕದ ಹಿಂದಿನ ಗುಟ್ಟು... ಹೀಗಿದೆ ಅವರ ಪರಿಶ್ರಮ

ದೇವದತ್ತ ಶತಕದ ಹಿಂದಿನ ಗುಟ್ಟು... ಹೀಗಿದೆ ಅವರ ಪರಿಶ್ರಮ

ದೇವದತ್ತ ಶತಕದ ಹಿಂದಿನ ಗುಟ್ಟು... ಹೀಗಿದೆ ಅವರ ಪರಿಶ್ರಮ

ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಶನಿವಾರ ಸಂಭ್ರಮದ ಅಲೆಗಳಲ್ಲಿ ತೇಲಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಈ ಸಾಧನೆ ಅವರಿಗೆ ಸುಲಭವಾಗಿ ಒಲಿದು ಬಂದಿಲ್ಲ. ಏಕೆಂದರೆ; ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಸುಲಭವಾಗಿ ಸಿಕ್ಕಿಲ್ಲ. 

2024ರ ನವೆಂಬರ್‌ನಲ್ಲಿ ಅವರು ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯ ಆಡಿದ್ದರು. ಅದರ ನಂತರ ಅವರಿಗೆ ಅವಕಾಶ ಸಿಕ್ಕಿದ್ದು ಇಲ್ಲಿಯೇ. ಅದೂ ಸಾಯಿ ಸುದರ್ಶನ್ ಅವರು ಗಾಯದಿಂದ ಚೇತರಿಸಿಕೊಳ್ಳದೇ ಹಿಂದೆ ಸರಿದ ಕಾರಣಕ್ಕೆ.  ದೇವದತ್ತ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಅವರ ಸಿದ್ಧತೆ ಮತ್ತು ಬದ್ಧತೆಗಳೇ ಈ ಸಾಧನೆಗೆ ಕಾರಣವಾಗಿವೆ. 

ಶ್ರೀಲಂಕಾ ವಿಮಾನವೇರುವ ಮುನ್ನ ಸುಮಾರು ಎಂಟು ದಿನಗಳ ಕಾಲ ಅವರು ಬೆಂಗಳೂರಿನಲ್ಲಿ ವಿಶೇಷ ತಾಲೀಮು ಮಾಡಿದ್ದರು. ಲಂಕಾದಲ್ಲಿ ಸ್ಪಿನ್ನರ್‌ಗಳ ಸವಾಲು ಎದುರಿಸುವ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ಅವರು ಅದಕ್ಕೆ ತಕ್ಕ ಅಭ್ಯಾಸವನ್ನು ಇಲ್ಲಿ ಮಾಡಿದ್ದರು. 

‘ಲಂಕಾದಲ್ಲಿ ಬಳಸುವ ಕೂಕಬುರಾ ಚೆಂಡುಗಳನ್ನು ದೇವದತ್ತ ತಾವೇ ಖರೀದಿಸಿಕೊಂಡು ಬಂದಿದ್ದರು. ಅದಕ್ಕೆ ತಕ್ಕಂತೆ ನಮ್ಮ ಅಕಾಡೆಮಿಯಲ್ಲಿ ಪಿಚ್‌ ಸಿದ್ಧಪಡಿಸಿಕೊಂಡೆವು. ಅಲ್ಲದೇ ನಮ್ಮಲ್ಲಿ ತರಬೇತಿಯಲ್ಲಿರುವ ಹುಡುಗರಲ್ಲಿ ಬೇರೆ ಬೇರೆ ವಯೋಮಿತಿಯಿಂದ ವಿಭಿನ್ನ ಎತ್ತರದ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿಕೊಂಡೆವು. ಇದರಿಂದಾಗಿ ಅವರಿಗೆ ವಿಭಿನ್ನ ಶೈಲಿ, ವೇಗ, ಸ್ಪಿನ್ ಎಸೆತಗಳನ್ನು ಎದುರಿಸಲು ಸಾಧ್ಯವಾಯಿತು. ಇದೆಲ್ಲವೂ ಅವರದ್ದೇ ಯೋಚನೆ ಮತ್ತು ಯೋಜನೆ. ಅವರಿಗೆ ನಾವು ಬೆಂಬಲವಾಗಿ ನಿಂತು ಎಲ್ಲವನ್ನೂ ಒದಗಿಸಿಕೊಟ್ಟೆವು. ಅಭ್ಯಾಸ ಪಂದ್ಯದಲ್ಲಿ ಶತಕ ಹೊಡೆದರು, ಈಗ ಟೆಸ್ಟ್‌ನಲ್ಲಿ ಶತಕ ಮಾಡಿದ್ದಾರೆ. ಮುಂದಿನ ಪಂದ್ಯಗಳಲ್ಲಿಯೂ ಮತ್ತೊಂದು ನೂರು ಬರುತ್ತೆ’ ಎಂದು ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಕ್ರಿಕೆಟ್ ಅಕಾಡೆಮಿಯ ಕೋಚ್ ನಾಸೀರುದ್ದೀನ್ ಸಂತಸ ವ್ಯಕ್ತಪಡಿಸಿದರು. 

ಹಾಗೆ ನೋಡಿದರೆ; ದೇವದತ್ತ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿಯೂ ರನ್‌ ಗಳಿಸಬಲ್ಲ ಪ್ರತಿಭಾನ್ವಿತ ಬ್ಯಾಟರ್. ಆದರೆ ಅವರಿಗೆ ಸಿಕ್ಕಿರುವ ಅವಕಾಶಗಳು ಕಡಿಮೆ. 2021ರಲ್ಲಿಯೇ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಅವರಿಗೆ ಟೆಸ್ಟ್ ಆಡುವ ಅವಕಾಶ ಲಭಿಸಿದ್ದು 2024ರಲ್ಲಿ. ಏಕದಿನ ಪಂದ್ಯಗಳಿಗೆ ಇನ್ನೂ ಅವಕಾಶವನ್ನೇ ನೀಡಿಲ್ಲ. 

ಆದರೆ ಅವರು ತಮ್ಮ ಪ್ರಯತ್ನಗಳನ್ನು ಯಾವುದೇ ಹಂತದಲ್ಲಿಯೂ ಕೈಚೆಲ್ಲಿಲ್ಲ. 2020ರಲ್ಲಿ ಅವರು ಐಪಿಎಲ್‌ನ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಆಗ ಅವರಿಗೆ ಕೋವಿಡ್ ಕಾಡಿತ್ತು. ಚೇತರಿಸಿಕೊಂಡು ಬಂದ ಅವರು ಆ ಟೂರ್ನಿಯಲ್ಲಿ 473 ರನ್ ಗಳಿಸಿದ್ದರು. 2020–21ರ ವಿಜಯ್ ಹಜಾರೆ ಟ್ರೋಫಿ (ಏಕದಿನ) ಕ್ರಿಕೆಟ್ ಟೂರ್ನಿಯಲ್ಲಿ ನಾಲ್ಕು ಶತಕ ಹೊಡೆದರು. 2021ರ ಐಪಿಎಲ್‌ನಲ್ಲಿಯೂ 400ಕ್ಕೂ ಹೆಚ್ಚು ರನ್ ಗಳಿಸಿದರು. ಅದೇ ವರ್ಷ ಶ್ರೀಲಂಕಾದಲ್ಲಿ ನಡೆದ ಟಿ20 ಸರಣಿಯಲ್ಲಿ ಭಾರತ ತಂಡದಲ್ಲಿ ಆಡಿದರು. ಆದರೆ ಅದೇ ಸಂದರ್ಭದಲ್ಲಿ ಅವರಿಗೆ ಆನಾರೋಗ್ಯ ಕಾಡಿತ್ತು. ದೀರ್ಘ ವಿಶ್ರಾಂತಿಯ ನಂತರ ಕಣಕ್ಕೆ ಮರಳಿದರು. ಆಪಾರ ಶ್ರಮಪಟ್ಟು ತಾಲೀಮು ನಡೆಸಿ ಲಯಕ್ಕೆ ಬಂದರು. 

‘ಈ ವರ್ಷ ಅವರು ದೇಶಿ ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿಯೂ ರನ್‌ ಗಳಿಸಿದ್ದರು. ಐಪಿಎಲ್‌ನಲ್ಲಿ ಅವರ ಆಟ ಅಮೋಘವಾಗಿತ್ತು. ನಂತರ ಭಾರತ ಎ ತಂಡದಲ್ಲಿ ಆಡಿ ಬಂದರು. ಟೂರ್ನಿಗೆ ಮುನ್ನದ ಎಂಟು ದಿನಗಳವರೆಗೆ ಪ್ರತಿದಿನ ಇಲ್ಲಿ ಅಭ್ಯಾಸ ಮಾಡಿದರು. ನೆಟ್ಸ್‌ನಲ್ಲಿ ಸತತ ಎರಡೂವರೆ ಗಂಟೆ ಬ್ಯಾಟಿಂಗ್ ಮಾಡುತ್ತಿದ್ದರು’ ಎಂದು ನಾಸೀರುದ್ದೀನ್ ಹೇಳಿದರು. 

ಕಳೆದ ರಣಜಿ ಋತುವಿನಲ್ಲಿ ಪಂಜಾಬ್ ಎದುರು ಕರ್ನಾಟಕ ತಂಡವನ್ನು ಅವರು ಗೆಲುವಿನತ್ತ ಮುನ್ನಡೆಸಿದ್ದರು. ಅಲ್ಲಿಂದ ಅವರ ಆತ್ಮವಿಶ್ವಾಸ ಹೆಚ್ಚಿದೆ. ಬ್ಯಾಟಿಂಗ್‌ ಮತ್ತು ಯೋಚನಾಲಹರಿಯಲ್ಲಿ ಸ್ಪಷ್ಟತೆ ಹೆಚ್ಚಿದೆ ಎಂದೂ ನಾಸೀರುದ್ದೀನ್ ಹೇಳುತ್ತಾರೆ.

26 ವರ್ಷದ ದೇವದತ್ತ ಅವರಿಗೆ ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ. ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಳ್ಳುವತ್ತ ಅವರೀಗ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. 

ತಂದೆಯ ನಿರ್ಧಾರವೇ  ಶಕ್ತಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ