
ಕೊಡಗು: ಹ್ಯಾರೀಸ್ ಪುತ್ರ ನಳಪಾಡ್ ವಿವಾಹಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್
ಮಡಿಕೇರಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ತಾಲ್ಲೂಕಿನ ಭಾಗಮಂಡಲದ ಭಗಂಡೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಮಳೆಯ ನಡುವೆ ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಬಂದಿಳಿದ ಅವರು ಭಗಂಡೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಮಡಿಕೇರಿ ಸಮೀಪದ ಮೇಕೇರಿ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆಯುತ್ತಿರುವ ಶಾಸಕ ಹ್ಯಾರೀಸ್ ಅವರ ಪುತ್ರ ಮಹಮ್ಮದ್ ನಳಪಾಡ್ ಅವರ ವಿವಾಹ ಸಮಾರಂಭಕ್ಕೆಂದು ಅವರು ಇಲ್ಲಿಗೆ ಬಂದಿದ್ದಾರೆ.