ಹಳೇಬೀಡು: ಸರ್ಕಾರಿ ಆಸ್ಪತ್ರೆಗೆ ವಾರ್ಡ್ ಕಟ್ಟಿಸಿದ ಉದ್ಯಮಿ

ಹಳೇಬೀಡು: ಸರ್ಕಾರಿ ಆಸ್ಪತ್ರೆಗೆ ವಾರ್ಡ್ ಕಟ್ಟಿಸಿದ ಉದ್ಯಮಿ

ಹಳೇಬೀಡು: ಸರ್ಕಾರಿ ಆಸ್ಪತ್ರೆಗೆ ವಾರ್ಡ್ ಕಟ್ಟಿಸಿದ ಉದ್ಯಮಿ

ಹಳೇಬೀಡು: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ತಮ್ಮದೊಂದು ಕಾಣಿಕೆ ನೀಡಬೇಕು ಎಂದು ಹಳೇಬೀಡಿನ ಉದ್ಯಮಿ ಎಚ್.ಎನ್. ಯೋಗೀಶ್ ಅವರು, ಹಳೇಬೀಡು ಸರ್ಕಾರಿ ಸಮುದಾಯ ಆಸ್ಪತ್ರೆಗೆ ಹೆಚ್ಚುವರಿ ವಾರ್ಡ್ ನಿರ್ಮಿಸಿಕೊಟ್ಟಿದ್ದಾರೆ. ಆಗಸ್ಟ್ 28ರಂದು ಉದ್ಘಾಟನೆ ನೆರವೇರಿಸಲು ವಾರ್ಡ್ ಸಿದ್ದವಾಗಿದೆ.

ದಿವಂಗತರಾಗಿರುವ ತಾಯಿ ಚನ್ನಮ್ಮ, ತಂದೆ ನಂಜೇಗೌಡ (ಚೆನ್ನಳ್ಳಿ ಮೇಸ್ಟ್ರು) ಹಾಗೂ ಅಕ್ಕ ಬೀರೂರಿನ ಸರೋಜಮ್ಮ, ಭಾವ ಮಹೇಶ್ವರಪ್ಫ ಅವರ ಸ್ಮರಣಿಗಾಗಿ ಆಸ್ಪತ್ರೆ ಕಟ್ಟಡದ 1ನೇ ಅಂತಸ್ತಿನಲ್ಲಿ ಯೋಗೀಶ್ ₹20ಲಕ್ಷ ವೆಚ್ಚದ ವಾರ್ಡ್ ಕಟ್ಟಡ ನಿರ್ಮಿಸಿದ್ದಾರೆ. ವಾರ್ಡ್‌ಗೆ ತೆರಳಲು ಸುಸಜ್ಜಿತ ಮೆಟ್ಟಿಲು ಸಹ ನಿರ್ಮಿಸಲಾಗಿದೆ.

ಗಾಳಿ, ಬೆಳಕು ಬರುವಂತೆ ವಿಶಾಲ ಕಿಟಕಿ ಬಾಗಿಲು, ವ್ಯವಸ್ಥಿತವಾದ ಶೌಚಾಲಯಗಳು ಕಟ್ಟಡದಲ್ಲಿವೆ. 8ರಿಂದ 10 ಮಂದಿ ಒಳ ರೋಗಿಗಳಿಗೆ ಚಿಕಿತ್ಸೆ ನೀಡಲು ಕಟ್ಟಡದಲ್ಲಿ ಅವಕಾಶವಿದೆ. ಹಳೇಬೀಡು ಸಮುದಾಯ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಹೆಚ್ಚುವರಿ ವಾರ್ಡ್ ಅಗತ್ಯವಿತ್ತು. ಎಚ್.ಎನ್.ಯೋಗೀಶ್ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ.

ತಂದೆ, ತಾಯಿ ಹಾಗೂ ಅಕ್ಕ, ಭಾವನ ಸವಿ ನೆನಪಿಗಾಗಿ ಸಮಾಜಕ್ಕೆ ಉಪಯುಕ್ತವಾದ ಸೇವೆ ಮಾಡಬೇಕು ಎಂಬುದು ಮಹಾದಾಸೆಯಾಗಿತ್ತು. ಈ ನಿಟ್ಟಿನಲ್ಲಿ ಚಿಂತನೆ ಮಾಡಿದಾಗ ಸರ್ಕಾರಿ ಆಸ್ಪತ್ರೆಗೆ ವಾರ್ಡ್ ನಿರ್ಮಿಸಿಕೊಡುವ ಆಲೋಚನೆ ಮೂಡಿತು. ಈಗ ಕೆಲಸ ಕಾರ್ಯಗತ ಆಗಿರುವುದರಿಂದ ಮನಸ್ಸಿಗೆ ಸಂತಸವಾಯಿತು. ರೋಗಿಗಳಿಗಾಗಿ ನಾವು ನಿರ್ಮಿಸಿರುವ ವಾರ್ಡ್‌ ಅನ್ನು ಜನರು ಸದುಪಯೋಗ ಮಾಡಿಕೊಂಡರೆ, ನಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ ಎಂದು ಯೋಗೀಶ್ ಹೇಳಿದರು.

ಎಚ್.ಎನ್. ಯೋಗೀಶ್ ಅವರು ಸಿರಿಗೆರೆಯ ತರಳಬಾಳು ಮಠ ಹಾಗೂ ಪುಷ್ಪಗಿರಿ ಮಠದ ಒಡನಾಡಿಯಾಗಿದ್ದಾರೆ.

ಪತ್ರಕರ್ತರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಗಳಿಸಿದ ಹಣದಲ್ಲಿ ಸಮಾಜಕ್ಕೆ ಒಂದಿಷ್ಟು ಕಾಣಿಕೆ ನೀಡಬೇಕು ಎಂಬ ಕಾಳಜಿಯಿಂದ ಸರ್ಕಾರಿ ಆಸ್ಪತ್ರೆಗೆ ನೆರವು ನೀಡಿದ್ದಾರೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂತು.

ಹಳೇಬೀಡು ಹತ್ತಾರು ಹಳ್ಳಿಗಳ ಸಂಪರ್ಕ ಕೇಂದ್ರವಾಗಿದೆ. ಗ್ರಾಮೀಣ ಭಾಗದ ಕೃಷಿಕರಿಗೆ ಆರೋಗ್ಯ ಸೇವೆ ದೊರಕಲಿ ಎಂದು ವಾರ್ಡ್ ನಿರ್ಮಿಸಿಕೊಟ್ಟಿದ್ದೇವೆ.

ಎಚ್. ಎನ್.ಯೋಗೀಶ್, ಉದ್ಯಮಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-36-623696084

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ