
ಮೀನುಗಾರಿಕೆಯಲ್ಲಿ ಆಸಕ್ತಿಯಿದೆಯಾ, ಇಲಾಖೆಯಿಂದ ಮೀನು ವಿತರಣೆ ಆರಂಭ, ಕೆಲವು ಉಚಿತ
ಬೆಂಗಳೂರು: ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯಿದೆಯಾ, ಈಗೆಲ್ಲಾ ಮಳೆಯಾಗಿ ಕೆರೆಯಲ್ಲೂ ನೀರು ತುಂಬಿರುವುದರಿಂದ ಬಿತ್ತನೆಗೆ ಬೇಕಾದ ಮೀನು ಪಡೆದುಕೊಳ್ಳಲು ಅವಕಾಶವಿದೆ.
ಪ್ರತಿ ವರ್ಷದಂತೆ 2026-27ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಸರ್ಕಾರ ನಿಗಧಿ ಪಡಿಸಿದ ದರಗಳಲ್ಲಿ ಬಿತ್ತನೆಗೆ ಯೋಗ್ಯವಾದ ಮೀನುಮರಿಗಳು ಲಭ್ಯವಿದೆ ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ.
ಆಸಕ್ತ ಕೃಷಿಕರು ತಮ್ಮ ಬೇಡಿಕೆಯನ್ನು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ನೋಂದಾಯಿಸಿಕೊಂಡರೆ ಬೇಡಿಕೆಗೆ ಅನುಗುಣವಾಗಿ ಮೀನು ಮರಿಗಳನ್ನು ವಿತರಣೆ ಮಾಡಲಾಗುತ್ತದೆ.
ಮೀನುಗಾರಿಕೆ ಇಲಾಖೆಯಿಂದ ಉಚಿತವಾಗಿ ಸಾಮಾನ್ಯ ಗೆಂಡೆ ಅಥವಾ ತಿಲಾಪಿಯ ತಳಿ ಮೀನುಮರಿಗಳನ್ನು ವಿತರಿಸಲಾಗುವುದು. ಇತರೆ ಮೀನು ಮರಿಗಳಿಗೆ ನಿಗದಿತ ದರ ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಆಗಸ್ಟ್, 25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲಾ ಕೇಂದ್ರದಲ್ಲಿರುವ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ಇಲ್ಲವೇ ಸಹಾಯಕ ನಿರ್ದೇಶಕರು, ತಾಲ್ಲೂಕು ಹಂತದಲ್ಲಿ ಇರುವ ಇಲಾಖೆಗೆ ತೆರಳಿ ವಿವರ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.