ಗುರು ತತ್ವದಿಂದ ಸಮಾಜ ಒಂದಾಗಲಿ: ದಯಾನಂದ ಕರ್ಕೇರ ಉಗೇರುಬೆಟ್ಟು

ಗುರು ತತ್ವದಿಂದ ಸಮಾಜ ಒಂದಾಗಲಿ: ದಯಾನಂದ ಕರ್ಕೇರ ಉಗೇರುಬೆಟ್ಟು

ಗುರು ತತ್ವದಿಂದ ಸಮಾಜ ಒಂದಾಗಲಿ: ದಯಾನಂದ ಕರ್ಕೇರ ಉಗೇರುಬೆಟ್ಟು

ಮಂಗಳೂರು: ಮನಸ್ಸು ಒಡೆಯದ, ಗೋಡೆಗಳನ್ನು ನಿರ್ಮಿಸದ ನಾರಾಯಣ ಗುರುಗಳು ಎಲ್ಲರನ್ನು ಒಗ್ಗೂಡಿಸುವ ಸೇತುವೆಯಾಗಿದ್ದರು. ಅಂಥ ಮಹಾನ್ ವ್ಯಕ್ತಿಯನ್ನು ಜಾತಿಗೆ ಸೀಮಿತಗೊಳಿಸಿ ಸಂಕುಚಿತರಾಗದೆ ಅವರ ತತ್ವಗಳ ಮೂಲಕ ಸಮಾಜ ಕಟ್ಟುವ ಕೆಲಸ ಮಾಡ ಬೇಕು ಎಂದು ಉಡುಪಿಯ ಉಪನ್ಯಾಸಕ ದಯಾನಂದ ಕರ್ಕೇರ ಉಗೇರುಬೆಟ್ಟು ಹೇಳಿದರು.

ನಗರದ ಕುದ್ರೋಳಿ ದೇವಸ್ಥಾನದಲ್ಲಿ ಜಿಲ್ಲಾಡಳಿತ ಶುಕ್ರವಾರ ಆಯೋಜಿಸಿದ್ದ ನಾರಾಯಣ ಗುರು ಜಯಂತಿಯಲ್ಲಿ ಮಾತನಾಡಿದ ಅವರು ಮನಸ್ಸುಗಳನ್ನು ಕಟ್ಟುವ ಶ್ರೇಷ್ಠ ಕಾರ್ಯವನ್ನು ನಾರಾಯಣ ಗುರುಗಳು ಮಾಡಿದ್ದರು. ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿದರೆ ಹಾಗೆ ಮಾಡುವವರಿಗೆ ಹಾನಿಯಾಗುತ್ತದೆ ಎಂದರು.

ಸಮಾಜ ಸುಧಾರಕರ ವಿವಿಧ ಘಟ್ಟಗಳನ್ನು ಮತ್ತು ವಿವಿಧ ಆಯಾ ಮಗಳನ್ನು ಗಮನಿಸಿದರೆ ನಾರಾಯಣ ಗುರುಗಳ ಸಿದ್ಧಾಂತ ಶ್ರೇಷ್ಠವಾಗಿ ಕಾಣು ತ್ತದೆ. ಆದರೆ ಅವರ ತತ್ವಗಳನ್ನು ಅನು ಷ್ಠಾನಕ್ಕೆ ತರಲಾಗಿದೆಯೇ ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಾಗಿದೆ. ವಿದೇಶದಲ್ಲಿ ಗುರುಗಳ ಹೆಸರಿನಲ್ಲಿ ಸೇವಾ ಕಾರ್ಯಗಳು ನಡೆಯುತ್ತಿವೆ. ಸ್ವತಃ ಪೋಪ್‌ ಅವರೇ ಗುರುಗಳ ಹೆಸರು ಉಲ್ಲೇಖಿಸುತ್ತಾರೆ. ಆದರೆ ಭಾರತದಲ್ಲಿ ಅವರ ಆದರ್ಶಗಳನ್ನು ಆಚರಣೆಗೆ ಸೀಮಿತಗೊಳಿಸಲಾಗುತ್ತಿದೆ ಎಂದರು.

ಗುರುಗಳು ಸಮಾಜ ಸುಧಾರಣೆಯ ಕಾರ್ಯದಲ್ಲಿ ಮಾನವೀಯತೆಯನ್ನು ಬಳಸಿದ್ದಾರೆ. ಸಮಾಜವನ್ನು ಸಂಯಮ ದಿಂದ ಕಟ್ಟಿದ ಸಂತರಾಗಿರುವ ಅವರ ಕಾರ್ಯಗಳನ್ನು ಮುಂದುವರಿಸುವ ಸಂಕಲ್ಪ ತೊಡಲು ಜಯಂತಿ ಆಚರಣೆ ಕಾರಣ ಆಗಬೇಕು ಎಂದು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ನಾರಾಯಣ ಗುರು ವಿಶ್ವ ಸಂತರಾಗಿದ್ದಾರೆ. ಅವರನ್ನು ಒಂದು ಸಮುದಾಯದ 26 ಪಂಗಡಗಳಿಗೆ ಸೀಮಿತಗೊಳಿಸಬಾರದು. ಕೇರಳದಲ್ಲಿ ಅವರು ಎಲ್ಲ ಜಾತಿ–ಧರ್ಮದದರಿಗೂ ದೇವರಿಗೆ ಸಮಾನ ಎಂದು ಹೇಳಿದರು.

ಮತಾಂತರ ತಡೆಯಲು ನಾರಾಯಣ ಗುರುಗಳ ದೇವಸ್ಥಾನ ನಿರ್ಮಾಣ ಕಾರ್ಯ ಸಹಕಾರಿಯಾಗಿತ್ತು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಕರ್ನಾಟಕ ಗೇರು ಅಭಿವೃದ್ಧಿ ನಿಮಗದ ಅಧ್ಯಕ್ಷೆ ಮಮತಾ ಗಟ್ಟಿ, ಪರಿಸರ ಪ್ರವಾ ಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ, ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ ಶ್ರೀನಾಥ್, ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜಯರಾಜ್ ಸೋಮಸುಂದರಂ, ಎಎಸ್‌ಪಿ ಅನಿಲ್ ಭೂಮರಡ್ಡಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಯರಾಜ್‌, ಮುಖಂಡ ರಮೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಪಾಲ್ಗೊಂಡಿದ್ದರು.

‘ಮೋದಿ ಪರಿಕಲ್ಪನೆಗೆ ಆದರ್ಶ’

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಸನಾತನ ಸಂಸ್ಕೃತಿಯ ತತ್ವಗಳನ್ನು ಪಾಲಿಸಿಕೊಂಡು ಬದುಕಿದರೆ ಶಾಂತಿ ಮತ್ತು ಸಹಬಾಳ್ವೆ ಸಾಧ್ಯ ಎಂಬುದನ್ನು ನಾರಾಯಣ ಗುರುಗಳು ತೋರಿಸಿಕೊಟ್ಟಿದ್ದಾರೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಗುರುಗಳ ತತ್ವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್ ಪರಿಕಲ್ಪನೆಗೆ ಆದರ್ಶವಾಗಿದೆ. 2047ರ ವಿಕಸಿತ ಭಾರತದ ಆಶಯ ಕೇವಲ ಆರ್ಥಿಕ ಅಭಿವೃದ್ಧಿಯಲ್ಲ, ಭಾರತದ ಪರಂಪರೆಯನ್ನು ಉಳಿಸಿಕೊಂಡು ಮುನ್ನಡೆಯುವ ವಿಕಾಸವಾಗಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-29-192539502

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ