ಮಡಿಕೇರಿ ರಾಜಸೀಟ್ ರಸ್ತೆ ಗುಂಡಿಗಳ ಸಾಮ್ರಾಜ್ಯವಾಗಿದೆ

ಮಡಿಕೇರಿ ರಾಜಸೀಟ್ ರಸ್ತೆ ಗುಂಡಿಗಳ ಸಾಮ್ರಾಜ್ಯವಾಗಿದೆ

ಮಡಿಕೇರಿ ರಾಜಸೀಟ್ ರಸ್ತೆ ಗುಂಡಿಗಳ ಸಾಮ್ರಾಜ್ಯವಾಗಿದೆ

ಮಡಿಕೇರಿ: ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಇಲ್ಲಿನ ರಾಜಸೀಟ್ ಉದ್ಯಾನದ ರಸ್ತೆ ಈಗ ಗುಂಡಿಗಳ ಸಾಮ್ರಾಜ್ಯವಾಗಿದೆ. ಎಲ್ಲಿ ನೋಡಿದರಲ್ಲಿ ಗುಂಡಿಗಳೇ ಇದ್ದು, ವಾಹನ ಸವಾರರು ನಿತ್ಯವೂ ಹೈರಣಾಗುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ರಸ್ತೆಯ ವಿಡಿಯೊ ಮತ್ತು ಚಿತ್ರಗಳನ್ನು ತೆಗೆದು ಪ್ರವಾಸಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ವ್ಯಾಪಕವಾಗಿ ಟ್ರೋಲ್‌ ಮಾಡುತ್ತಿದ್ದಾರೆ. ನಗರಸಭೆಯ ವಿರುದ್ಧ ಸಾರ್ವಜನಿಕರೂ ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ರಸ್ತೆ ಕುಸಿದ ನಂತರ ಎಲ್ಲ ಬಗೆಯ ಬಸ್‌ಗಳನ್ನು ಹಾಗೂ ವಾಹನಗಳನ್ನು ಇದೇ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಯಿತು. ಇದರಿಂದ ರಸ್ತೆ ಗುಂಡಿಗಳು ನಾಯಿಕೊಡೆಗಳಂತೆ ಹೆಚ್ಚಿತು.

ಇದನ್ನು ಕಂಡ ನಗರಸಭೆ ಅಧಿಕಾರಿಗಳು ಒಂದೆರಡು ಬಾರಿ ವೆಟ್‌ಮಿಕ್ಸ್‌ ಹಾಕಿದರು. ಆದರೆ, ನಿರಂತರವಾಗಿ ಬೀಳುತ್ತಿರುವ ಮಳೆಗೆ ಹಾಗೂ ಸಂಚರಿಸುತ್ತಿರುವ ವಾಹನಗಳಿಂದ ವೆಟ್‌ಮಿಕ್ಸ್ ಒಂದೆರಡು ದಿನಗಳಲ್ಲೇ ಕೊಚ್ಚಿಕೊಂಡು ಹೋಯಿತು.

ಈಗಾಗಲೆ ಇಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲೆಂದು ₹ 1.5 ಕೋಟಿ ಮೊತ್ತದ ಟೆಂಡರ್ ಆಗಿದೆ. ಆದರೆ, ಕೆಲಸ ಮಾತ್ರ ಇನ್ನೂ ಆರಂಭವೇ ಆಗಿಲ್ಲ. ಇದರಿಂದ ಗುಂಡಿಗಳಲ್ಲೇ ಏಳುತ್ತಾ, ಬೀಳುತ್ತಾ ವಾಹನ ಸವಾರರು ಸಂಚರಿಸಬೇಕಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-51-1211002778

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ