ಗದಗ ಅಭಿವೃದ್ಧಿಗಾಗಿ ರಕ್ತದಲ್ಲಿ ಸಹಿ ಅಭಿಯಾನ
ಗದಗ: ಜಿಲ್ಲೆಯ ಅಭಿವೃದ್ಧಿಗೆ ಆಗ್ರಹಿಸಿ ಜೆನ್ ಜಿ ಮತದಾರರು ಹಾಗೂ ನಾಗರಿಕ ವೇದಿಕೆ ವತಿಯಿಂದ ರಕ್ತದಲ್ಲಿ ಸಹಿ ಅಭಿಯಾನ ಆರಂಭಿಸಲಾಗಿದೆ.
ಇಲ್ಲಿನ ಮಂಜುನಾಥ ನಗರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಗದಗ-ಬೆಟಗೇರಿ ಅವಳಿ ನಗರದ ಸಮಗ್ರ ಅಭಿವೃದ್ಧಿ ಸೇರಿದಂತೆ ರೈತರು, ಮಹಿಳೆಯರು ಹಾಗೂ ಯುವಕರ ಸಬಲೀಕರಣಕ್ಕಾಗಿ ಆಗ್ರಹಿಸಲಾಯಿತು.
ಮನವಿ ಪತ್ರಕ್ಕೆ ರಕ್ತದಲ್ಲಿ ಸಹಿ ಮಾಡಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.