ಅಮೆರಿಕ–ಇರಾನ್ ಪರಸ್ಪರ ದಾಳಿ: ತಿಂಗಳ ಬಳಿಕ ಮತ್ತೆ ಸಂಘರ್ಷ

ಅಮೆರಿಕ–ಇರಾನ್ ಪರಸ್ಪರ ದಾಳಿ: ತಿಂಗಳ ಬಳಿಕ ಮತ್ತೆ ಸಂಘರ್ಷ

ಅಮೆರಿಕ–ಇರಾನ್ ಪರಸ್ಪರ ದಾಳಿ: ತಿಂಗಳ ಬಳಿಕ ಮತ್ತೆ ಸಂಘರ್ಷ

‌ವಾಷಿಂಗ್ಟನ್: ಹೊರ್ಮುಜ್ ಜಲಸಂಧಿಯಲ್ಲಿ ಸ್ಫೋಟಕಗಳನ್ನು ಇರಿಸಲು ಪ್ರಯತ್ನಿಸುತ್ತಿದ್ದ ಇರಾನ್‌ನ ಎರಡು ರಾಕೆಟ್‌ ಉಡಾವಣೆ ವ್ಯವಸ್ಥೆ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.

ಕೆಲವೇ ಗಂಟೆಗಳಲ್ಲಿ ಇರಾನ್‌ ಇದಕ್ಕೆ ಪ್ರತ್ಯುತ್ತರ ನೀಡಿದ್ದು, ಜೊರ್ಡನ್‌ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಆ ಕ್ಷಿಪಣಿಗಳನ್ನು ವಿಫಲಗೊಳಿಸಲಾಗಿದೆ ಎಂದು ಹೆಸರು ಬಹಿರಂಗ ಪಡಿಸಕೂಡದು ಎನ್ನುವ ಷರತ್ತಿನೊಂದಿಗೆ ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಜೋರ್ಡನ್‌ನಲ್ಲಿರುವ ಸೇನಾ ನೆಲೆಯಲ್ಲಿ ಸಾವಿರಾರು ಅಮೆರಿಕ ಸೈನಿಕರು ಇದ್ದರು ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಜೊರ್ಡನ್‌ನಲ್ಲಿರುವ ಅಮೆರಿಕದ ಎರಡು ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಭಾರಿ ಹಾನಿ ಉಂಟಾಗಿದೆ ಎಂದು ರೆವಲ್ಯೂಷನರಿ ಗಾರ್ಡ್ ಹೇಳಿದ್ದಾಗಿ ‘ಎಎಫ್‌ಪಿ’ ವರದಿ ಮಾಡಿದೆ. ಕ್ಷಿಪಣಿ ದಾಳಿಯನ್ನು ವಿಫಲಗೊಳಿಸಿದ್ದಾಗಿ ಜೋರ್ಡನ್ ಹೇಳಿದ್ದು, ಆ ಕ್ಷಿಪಣಿ ಎಲ್ಲಿಂದ ಉಡ್ಡಯನವಾಗಿತ್ತು ಎನ್ನುವುದನ್ನು ಅದು ಖಚಿತಪಡಿಸಿಲ್ಲ.

ಒಂದು ತಿಂಗಳಲ್ಲಿ ಇರಾನ್ ವಿರುದ್ಧ ಅಮೆರಿಕ ನಡೆಸಿದ ಮೊದಲ ದಾಳಿ ಇದು. ಈ ಹಿಂದಿನ ದೊಡ್ಡ ಪ್ರಮಾಣದ ಬಾಂಬ್ ದಾಳಿಗೆ ಹೋಲಿಸಿದರೆ, ಇದು ಸೀಮಿತ ಪ್ರಮಾಣದ ದಾಳಿ. ಆದರೆ ಉಭಯ ದೇಶಗಳ ನಡುವಿನ ಈ ದಾಳಿ–‍‍ಪ್ರತಿದಾಳಿ ಮತ್ತೊಂದು ಸುತ್ತಿನ ಸಂಘರ್ಷದ ಆತಂಕ ತಂದೊಡ್ಡಿದೆ.

‘ಲರಕ್ ದ್ವೀಪದಿಂದ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಸ್ಫೋಟಕಗಳನ್ನು ಇರಿಸುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಲಾಯಿತು. ಹೀಗಾಗಿ ದಾಳಿ ನಡೆಸಲಾಗಿದೆ ಎಂದು ಸೆಂಟ್ರಲ್‌ ಕಮಾಂಡ್‌ನ ವಕ್ತಾರ ಕ್ಯಾ, ಟಿಮ್ ಹಾಕಿನ್ಸ್ ಹೇಳಿದ್ದಾರೆ.

ಜಲಸಂಧಿಯಲ್ಲಿ ಇರಾನ್ ಅಡಗಿಸಿಟ್ಟಿದ್ದ ಸ್ಫೋಟಕಗಳನ್ನು ಅಮೆರಿಕದ ಸೇನಾ ಪಡೆಗಳು ತೆರವು ಮಾಡಿದ್ದವು.

ಅಮೆರಿಕ ದಾಳಿಯ ಬೆನ್ನಲ್ಲೇ, ‘ಅಕ್ರಮಕಾರರನ್ನು ಶಿಕ್ಷಿಸುತ್ತೇವೆ’ ಎಂದು ರೆವಲ್ಯೂಷನರಿ ಗಾರ್ಡ್ ಹೇಳಿದ್ದಾಗಿ ಇರಾನ್‌ ಸರ್ಕಾರಿ ಸುದ್ದಿ ವಾಹಿನಿ ಹೇಳಿದೆ. ಅಮೆರಿಕ ದಾಳಿಯಲ್ಲಿ ಇಬ್ಬರು ಕೊಲ್ಲ‍ಲ್ಪಟ್ಟಿದ್ದಾರೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ‘ತಸ್ನಿಮ್’ ವರದಿ ಮಾಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ