ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್‌ ಉದ್ಯಾನದಲ್ಲಿ ಹಠಾತ್‌ ಪ್ರವಾಹ; ಹಲವರು ನಾಪತ್ತೆ

ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್‌ ಉದ್ಯಾನದಲ್ಲಿ ಹಠಾತ್‌ ಪ್ರವಾಹ; ಹಲವರು ನಾಪತ್ತೆ

ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್‌ ಉದ್ಯಾನದಲ್ಲಿ ಹಠಾತ್‌ ಪ್ರವಾಹ; ಹಲವರು ನಾಪತ್ತೆ

ವಾಷಿಂಗ್ಟನ್: ಅಮೆರಿಕದ ಪ್ರಸಿದ್ಧ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನದಲ್ಲಿ ಸಂಭವಿಸಿದ ಹಠಾತ್‌ ಪ್ರವಾಹದಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ನಾಪತ್ತೆಯಾದವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಶನಿವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಬ್ರೈಟ್ ಏಂಜಲ್ ಕಣಿವೆ ಪ್ರದೇಶದಲ್ಲಿ ಪ್ರವಾಹ ಆರಂಭವಾಗಿದ್ದು, ಕ್ಷಣಾರ್ಧದಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಬ್ರೈಟ್ ಏಂಜಲ್ ಕಣಿವೆ ಹಾಗೂ ಫ್ಯಾಂಟಮ್ ರಾಂಚ್ ಪ್ರದೇಶಗಳು ಪ್ರವಾಹದ ತೀವ್ರ ಹೊಡೆತಕ್ಕೆ ಸಿಲುಕಿವೆ. ನೀರಿನ ರಭಸಕ್ಕೆ ಬೃಹತ್ ಬಂಡೆಗಳು, ಲೋಹದ ರಚನೆಗಳು ಹಾಗೂ ಇತರೆ ಅವಶೇಷಗಳು ಕೊಲೊರಾಡೊ ನದಿಗೆ ಕೊಚ್ಚಿಕೊಂಡು ಹೋಗಿವೆ.

ಪ್ರವಾಹದ ಪರಿಣಾಮ ಸೇತುವೆಗಳು ಬಹುತೇಕ ನಾಶವಾಗಿದ್ದು, ಹಲವು ಪಾದಚಾರಿ ಮಾರ್ಗಗಳು ಸಂಪರ್ಕ ಕಳೆದುಕೊಂಡಿವೆ. ನೀರಿನ ರಭಸದಿಂದ ಪ್ರದೇಶದ ಭೌಗೋಳಿಕ ಸ್ವರೂಪವೇ ಬದಲಾಗಿರುವುದು ವಿಡಿಯೊ ದೃಶ್ಯಗಳಲ್ಲಿ ಕಾಣಬಹುದು.

ರಾಷ್ಟ್ರೀಯ ಉದ್ಯಾನ ಸೇವೆ (ಎನ್‌ಪಿಎಸ್‌) ಮತ್ತು ಅರಿಜೋನಾ ಸಾರ್ವಜನಿಕ ಸುರಕ್ಷತಾ ಇಲಾಖೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇದುವರೆಗೆ ಕನಿಷ್ಠ 62 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೆ, ಘಟನಾ ಸ್ಥಳದಲ್ಲಿದ್ದ ಇನ್ನೂ 20ಕ್ಕೂ ಹೆಚ್ಚು ಜನರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರಿಸ್ಥಿತಿಯನ್ನು ಗಮನಿಸಿ ಫ್ಯಾಂಟಮ್ ರಾಂಚ್, ಬ್ರೈಟ್ ಏಂಜಲ್ ಕ್ಯಾಂಪ್‌ಗ್ರೌಂಡ್ ಹಾಗೂ ನಾರ್ತ್ ಕೈಬ್ಯಾಬ್ ಟ್ರೇಲ್ ಸೇರಿದಂತೆ ಹಲವು ಪ್ರದೇಶಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ. ಕೊಲೊರಾಡೊ ನದಿಯಲ್ಲಿನ ದೋಣಿ ಸಂಚಾರವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ