ಮುಸ್ಲಿಮ್ ಗುರಿಯಾಗಿಸಿ ಬುಲ್ಡೋಜರ್ ಕ್ರಮ: 'ಸಂವಿಧಾನಕ್ಕೆ ಅಪಮಾನ' ಎಂದ ಕಾಂಗ್ರೆಸ್

ಮುಸ್ಲಿಮ್ ಗುರಿಯಾಗಿಸಿ ಬುಲ್ಡೋಜರ್ ಕ್ರಮ: 'ಸಂವಿಧಾನಕ್ಕೆ ಅಪಮಾನ' ಎಂದ ಕಾಂಗ್ರೆಸ್

ಮುಸ್ಲಿಮ್ ಗುರಿಯಾಗಿಸಿ ಬುಲ್ಡೋಜರ್ ಕ್ರಮ: 'ಸಂವಿಧಾನಕ್ಕೆ ಅಪಮಾನ' ಎಂದ ಕಾಂಗ್ರೆಸ್

ನವದೆಹಲಿ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ 'ಬುಲ್ಡೋಜರ್ ಕಾರ್ಯಾಚರಣೆ' ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. 

ಇದು ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ಎಸಗಿದ 'ಅಪಮಾನ'ವಾಗಿದೆ ಎಂದು ಟೀಕಿಸಿದೆ. 

ಬುಲ್ಡೋಜರ್ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ ತೆರವು ಕಾರ್ಯಾಚರಣೆಗೆ ಕಾರಣರಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದೂ ಒತ್ತಾಯಿಸಿದೆ.

ಮಧ್ಯಪ್ರದೇಶದಲ್ಲಿ 2022ರ ರಾಮನವಮಿ ಮೆರವಣಿಗೆ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದ 11 ಮಂದಿಯನ್ನು ಸ್ಥಳೀಯ ನ್ಯಾಯಾಲಯವು ಇತ್ತೀಚೆಗೆ ಖುಲಾಸೆಗೊಳಿಸಿತ್ತು. 

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, 'ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯವನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದ್ದು, ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಮನೆಗಳನ್ನು ಧ್ವಂಸಗೊಳಿಸಲಾಗುತ್ತಿದೆ' ಎಂದು ಆರೋಪಿಸಿದ್ದಾರೆ. 

'ನ್ಯಾಯಾಲಯವು ನಿರಪರಾಧಿಗಳು ಎಂದು ಸಾಬೀತುಪಡಿಸುವ ಮೊದಲೇ  ನರೋತ್ತಮ್ ಮಿಶ್ರಾ ಅವರ 'ಬುಲ್ಡೋಜರ್ ನ್ಯಾಯ'ದ ಶೈಲಿಯು ಶಿಕ್ಷೆಯನ್ನು  ಅನುಭವಿಸುವಂತೆ ಮಾಡಿದೆ' ಎಂದು ಟೀಕಿಸಿದ್ದಾರೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ