ಮಂತ್ರಾಲಯ: ಭಕ್ತರ ಸೌಕರ್ಯಕ್ಕಾಗಿ ಹಲವು ಅಭಿವೃದ್ಧಿ ಯೋಜನೆ

ಮಂತ್ರಾಲಯ: ಭಕ್ತರ ಸೌಕರ್ಯಕ್ಕಾಗಿ ಹಲವು ಅಭಿವೃದ್ಧಿ ಯೋಜನೆ

ಮಂತ್ರಾಲಯ: ಭಕ್ತರ ಸೌಕರ್ಯಕ್ಕಾಗಿ ಹಲವು ಅಭಿವೃದ್ಧಿ ಯೋಜನೆ

ಮಂತ್ರಾಲಯ: ರಾಘವೇಂದ್ರ ಸ್ವಾಮಿ ಮಠ ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಭಕ್ತರ ಸೌಕರ್ಯಕ್ಕಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ.

ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ₹50 ಕೋಟಿ ಸಿಎಸ್ಆರ್ ನಿಧಿ ಬಳಸಿ 43.80 ಎಕರೆ ಪ್ರದೇಶದಲ್ಲಿ 56.63 ಕೋಟಿ ಲೀಟರ್ ಸಾಮರ್ಥ್ಯದ ಜಲಾಶಯ ಹಾಗೂ ಮುಂಬೈನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಫೌಂಡೇಶನ್ ನೆರವಿನಿಂದ 2.5 ಎಕರೆ ಪ್ರದೇಶದಲ್ಲಿ 20 ದಶಲಕ್ಷ ಘನ ಅಡಿ ಪ್ರದೇಶದಲ್ಲಿ 56.63 ಕೋಟಿ ಲೀಟರ್ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಹೊಸ ಜಲಸಂಗ್ರಹಾಗಾರದಿಂದ ಮಂತ್ರಾಲಯಕ್ಕೆ ಬರುವ ಲಕ್ಷಾಂತರ ಭಕ್ತರು ಮತ್ತು ಸ್ಥಳೀಯ ನಿವಾಸಿಗಳ ಕುಡಿಯುವ ನೀರಿನ ಶಾಶ್ವತ ಬವಣೆ ನೀಗಲಿದೆ.

ಮಂತ್ರಾಲಯದ ಸಮೀಪ ‘ಜೈ ಶ್ರೀರಾಮ್ ಫೌಂಡೇಶನ್’ ವತಿಯಿಂದ ₹300 ಕೋಟಿ ವೆಚ್ಚದಲ್ಲಿ 108 ಅಡಿ ಎತ್ತರದ ಬೃಹತ್ ಶ್ರೀರಾಮನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. 10 ಎಕರೆ ಪ್ರದೇಶದಲ್ಲಿ ಭವ್ಯವಾದ ರಾಮ ಮಂದಿರ ಮತ್ತು ಸಾಂಸ್ಕೃತಿಕ ಸಂಕೀರ್ಣವೂ ತಲೆಯೆತ್ತಲಿದೆ.

ಭಕ್ತರಿಗಾಗಿ ಹೊಸ ವಸತಿಗೃಹಗಳ ನಿರ್ಮಾಣ:

ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವತಿಯಿಂದ ಕರ್ನಾಟಕದ ಭಕ್ತರಿಗಾಗಿ ಮಂತ್ರಾಲಯದಲ್ಲಿ 50 ಕೋಣೆಗಳ ಸುಸಜ್ಜಿತ ವಸತಿಗೃಹ ನಿರ್ಮಾಣವಾಗುತ್ತಿದೆ. ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪ್ರಾಂಗಣದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ ಮತ್ತು ಭಾಗವತದ ಕಥೆಗಳನ್ನು ಬಿಂಬಿಸುವ 3ಡಿ ರಿಲೀಫ್ ಶಿಲ್ಪಕಲೆಗಳು ಮತ್ತು ಪೌರಾಣಿಕ ಚಿತ್ರಗಳನ್ನು ರಚಿಸಲಾಗಿದೆ.

ಮಠದ ಯೋಜನೆಗಳು: ‘ಸಮಾಜದ ಸಮಗ್ರ ಅಭಿವೃದ್ಧಿ ಮತ್ತು ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಹಲವು ಪರಿವರ್ತನಾತ್ಮಕ ಮೆಗಾ ಯೋಜನೆಗಳನ್ನು ಕೈಗೊಳ್ಳಲು ಮಠವು ಬದ್ಧವಾಗಿದೆ. ಮಠವು ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಸೌಕರ್ಯ, ಸಮುದಾಯ ಕಲ್ಯಾಣದಂತಹ ಹಲವಾರು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿದೆ’ ಎಂದು ಸುಬುಧೇಂದ್ರ ತೀರ್ಥರು ಹೇಳುತ್ತಾರೆ.

‘ನದಿ ದಡದಲ್ಲಿ ನಿರ್ಮಿಸಲಾದ ಆಧ್ಯಾತ್ಮಿಕ ಥೀಮ್ ಪಾರ್ಕ್, ಮುಖ್ಯ ರಸ್ತೆಯಲ್ಲಿನ ಕಲಾತ್ಮಕ ಕಾರಿಡಾರ್ ಹಾಗೂ ಟಿಸಿಎಸ್ ಸಹಯೋಗದಲ್ಲಿ ಪೂರ್ಣಗೊಂಡ ಒಳಚರಂಡಿ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕ (ಎಸ್‌ಟಿಪಿ) ಲೋಕಾರ್ಪಣೆಗೊಳ್ಳಲಿವೆ. ಸುಪರ್ ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯ ಉದ್ದೇಶವನ್ನೂ ಹೊಂದಲಾಗಿದೆ’ ಎಂದು ಶ್ರೀಗಳು ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-34-1402714218

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ