ತಬಾಹಿ ಹಾಡಿಗೆ ಅಶ್ಲೀಲ ಟ್ರೋಲ್: ಕೊನೆಗೂ ಮೌನ ಮುರಿದ ಯಶ್...

ತಬಾಹಿ ಹಾಡಿಗೆ ಅಶ್ಲೀಲ ಟ್ರೋಲ್: ಕೊನೆಗೂ ಮೌನ ಮುರಿದ ಯಶ್...

ತಬಾಹಿ ಹಾಡಿಗೆ ಅಶ್ಲೀಲ ಟ್ರೋಲ್: ಕೊನೆಗೂ ಮೌನ ಮುರಿದ ಯಶ್...

ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ‘ತಬಾಹಿ’ ಹಾಡು ಬಿಡುಗಡೆಯಾದಾಗಿನಿಂದಲೂ ವ್ಯಾಪಕ ಟೀಕೆ ಮತ್ತು ಟ್ರೋಲ್‌ ಆಗುತ್ತಿದೆ. ಈ ಕುರಿತು ನಟ ಯಶ್ ಅವರು ಕೊನೆಗೂ ಮೌನ ಮುರಿದಿದ್ದಾರೆ.

ತಬಾಹಿ ಹಾಡಿನಲ್ಲಿ ಬಾಲಿವುಡ್ ತಾರೆ ಕಿಯಾರಾ ಅಡ್ವಾಣಿ ಅವರೊಂದಿಗೆ ಯಶ್ ನಟಿಸಿದ್ದಾರೆ. ಆ ಹಾಡಿನಲ್ಲಿ ಇವರಿಬ್ಬರ ನಡುವೆ ಕೆಮಿಸ್ಟ್ರಿ ಇದೆ ಎಂಬುದು ಕೆಲವರ ವಾದವಾಗಿದೆ. ಇನ್ನೂ ಕೆಲವರು ಈ ಹಾಡಿನ ದೃಶ್ಯಗಳು ಸಭ್ಯತೆ ಮೀರಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸುತ್ತಿದ್ದಾರೆ.

‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ನಟ ಯಶ್ ಭಾಗಿಯಾಗಿದ್ದರು. ಇದೇ ವೇಳೆ ಸಂದರ್ಶಕರು ಯಶ್ ಅವರಿಗೆ ‘ತಬಾಹಿ ಹಾಡನ್ನು ಕೆಲವರು, ಕಾಂಡೋಮ್ ಜಾಹೀರಾತಿಗೆ ಹೋಲಿಕೆ ಮಾಡುತ್ತಿದ್ದಾರೆ’ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಯಶ್, ‘ಒಂದು ವೇಳೆ ನಾನು ಕಾಂಡೋಮ್ ಜಾಹೀರಾತನ್ನು ಮಾಡಬೇಕಾದರೆ, ಹಣಕ್ಕಾಗಿ ಮಾಡುತ್ತೇನೆ. ಎಂದಿಗೂ ಉಚಿತವಾಗಿ ಮಾಡುವುದಿಲ್ಲ’ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

ಎಲ್ಲಿಯೂ ‌ಸಿನಿಮಾ ಅಶ್ಲೀಲತೆಯ ಗಡಿಯನ್ನು ದಾಟಿಲ್ಲ ಎಂದಿರುವ  ಯಶ್, ‘ಅಶ್ಲೀಲತೆ ತಪ್ಪು. ನೀವು ಸರಿಯಾಗಿ ಗಮನಿಸಿರಬಹುದು. ನಾನು ಎಲ್ಲಿಯೂ ಮುತ್ತಿಟ್ಟಿಲ್ಲ. ಎಲ್ಲದ್ದಕ್ಕೂ ಒಂದು ಮಿತಿ ಇದೆ. ಅದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ನೋಡುಗನಿಗೆ ಸಿನಿಮಾ ಆಕರ್ಷಕವಾಗಿ ಕಾಣಬೇಕು ಎಂಬುದಷ್ಟೇ ನಮ್ಮ ಗುರಿ. ಟಾಕ್ಸಿಕ್ ಜೆನ್‌–ಜೀಗಳ ಸಿನಿಮಾ’ ಎಂದು ಹೇಳಿದ್ದಾರೆ. 

ಇದೇ ಆಗಸ್ಟ್ 26ರಂದು ಟಾಕ್ಸಿಕ್ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯ ಜತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ