UGC NET–2026: 84 ವಿಷಯಗಳ ಕೀ ಉತ್ತರ ಪ್ರಕಟಿಸಿದ ಎನ್‌ಟಿಎ
ಯುಜಿಸಿ ನೆಟ್ ಜೂನ್ 2026ರ ಪರೀಕ್ಷೆಯ 84 ವಿಷಯಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಕೀ ಉತ್ತರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಎನ್‌ಟಿಎ ಅಧಿಕೃತ ವೆಬ್‌ಸೈಟ್ ugcnet.nta.nic.in ನಲ್ಲಿ ನೋಡಬಹುದು.
87 ವಿಷಯಗಳ ಯುಜಿಸಿ ನೆಟ್ ಪರೀಕ್ಷೆಯು ಜೂನ್ 22ರಿಂದ ಜೂನ್ 30ರವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಯು ಜೂನಿಯರ್ ರಿಸರ್ಚ್ ಫೆಲೋಶಿಪ್, ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಮತ್ತು ಪಿಎಚ್‌ಡಿ ಅರ್ಹತೆಯನ್ನು ನಿರ್ಧರಿಸುತ್ತದೆ. ಎನ್‌ಟಿಎ ಆಗಸ್ಟ್ 16ರಿಂದ ಆಗಸ್ಟ್ 18ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.
ಸದ್ಯ ಎನ್‌ಟಿಎ 84 ವಿಷಯಗಳಿಗೆ ತಾತ್ಕಾಲಿಕ ಕೀ ಉತ್ತರ ಬಿಡುಗಡೆ ಮಾಡಿದೆ. ಯಾವುದೇ ಉತ್ತರಕ್ಕೆ ಆಕ್ಷೇಪಣೆಗಳಿದ್ದರೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 18.
ಆಕ್ಷೇಪಣೆ ಶುಲ್ಕ: ಪ್ರತಿಯೊಂದು ಪ್ರಶ್ನೆಗೆ ₹200 ಶುಲ್ಕ ಪಾವತಿಸಬೇಕು.
ಶುಲ್ಕ ಮರುಪಾವತಿ: ಅಭ್ಯರ್ಥಿ ಸಲ್ಲಿಸಿದ ಆಕ್ಷೇಪಣೆಯನ್ನು ವಿಷಯ ತಜ್ಞರ ಸಮಿತಿ ಪುರಸ್ಕರಿಸಿದರೆ (ಆಕ್ಷೇಪಣೆ ಸರಿಯಾಗಿದ್ದರೆ), ಪಾವತಿಸಿದ ₹200 ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುತ್ತದೆ.
ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಇಂಗ್ಲಿಷ್, ಕಾಮರ್ಸ್ ಮತ್ತು ಸೋಶಿಯಾಲಜಿ ಸೇರಿದಂತೆ ಉಳಿದ 3 ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿದ್ದ ದೋಷಗಳ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಈ ವಿಷಯಗಳ ಕೀ ಉತ್ತರ ಬಿಡುಗಡೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸೂಚನೆಯನ್ನು NTA ಶೀಘ್ರದಲ್ಲೇ ಪ್ರಕಟಿಸಲಿದೆ.
ಕೀ ಉತ್ತರ ಡೌನ್‌ಲೋಡ್ ಮಾಡುವುದು ಹೇಗೆ?
ಅಧಿಕೃತ ವೆಬ್‌ಸೈಟ್ ugcnet.nta.nic.in ಗೆ ಭೇಟಿ ನೀಡಿ.
ಮುಖಪುಟದಲ್ಲಿರುವ 'UGC NET June 2026 Answer Key / Challenge Window' ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕ ಅಥವಾ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
ನಿಮ್ಮ ರಿಸ್ಪಾನ್ಸ್ ಶೀಟ್ ಮತ್ತು ಪ್ರಾವಿಷನಲ್ ಕೀ ಉತ್ತರ ಸ್ಕ್ರೀನ್ ಮೇಲೆ ಕಾಣಿಸುತ್ತದೆ, ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಯಾವುದೇ ಉತ್ತರಕ್ಕೆ ಆಕ್ಷೇಪಣೆ ಇದ್ದರೆ ಆನ್‌ಲೈನ್‌ನಲ್ಲೇ ಸೂಕ್ತ ದಾಖಲೆಗಳೊಂದಿಗೆ 'Challenge' ಸಲ್ಲಿಸಿ, ಶುಲ್ಕ ಪಾವತಿಸಿ.