ಯಲ್ವಡಿಕವೂರು: ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಪಿಯು ತರಗತಿಗಳು..

ಯಲ್ವಡಿಕವೂರು: ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಪಿಯು ತರಗತಿಗಳು..

ಯಲ್ವಡಿಕವೂರು: ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಪಿಯು ತರಗತಿಗಳು..

ಭಟ್ಕಳ: ತಾಲ್ಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡೀನ್ ಗ್ರಾಮದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ಕೊಠಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆ ದೂರು ಹೆಚ್ಚಿದೆ. ಹೆಚ್ಚುವರಿ ತರಗತಿ ಕೊಠಡಿ ಇರದ ಕಾರಣ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಕೊಠಡಿಯಲ್ಲಿ ಕುಳಿತು ಶಿಕ್ಷಣ ಪಡೆಯವಂತಾಗಿದೆ.

ಕಾಲೇಜಿಗೆ ಈಗಿರುವ ಕಟ್ಟಡದಲ್ಲಿ 4 ತರಗತಿ ಕೊಠಡಿಗಳು ಮಾತ್ರ ಇದೆ. ವಿದ್ಯಾರ್ಥಿಗಳಿಗೆ ಸಾಲದ ಕಾರಣ ಯಲ್ವಡಿಕವೂರ ಗ್ರಾಮ ಪಂಚಾಯಿತಿಯ 3 ಕೊಠಡಿಗಳನ್ನು ಎರವಲು ಪಡೆದು, ಎರಡು ಕೊಠಡಿಯಲ್ಲಿ ತರಗತಿ ಇನ್ನೊಂದರಲ್ಲಿ ಸಿಬ್ಬಂದಿ ಕೊಠಡಿಯಾಗಿ ಬಳಸಲಾಗುತ್ತಿದೆ.

‘2007ರಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ ಅವರ ಅಧಿಕಾರ ಅವಧಿಯಲ್ಲಿ ಭಟ್ಕಳದ ಯಲ್ವಡಿಕವೂರನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಲಾಗಿತ್ತು. ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ನೀಡಿ ಅಭ್ಯಾಸ ಮಾಡಲು ಸಾಧ್ಯವಾಗದವರು ಇಲ್ಲಿ ದಾಖಲಾತಿ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮೂರು ವಿಭಾಗಗಳಲ್ಲಿಯೂ ಇಲ್ಲಿ ದಾಖಲಾತಿಗೆ ಅವಕಾಶ ಇದೆ. ಆದರೆ ವಿದ್ಯಾರ್ಥಿಗಳಿಗೆ ತಕ್ಕಂತೆ ಶಿಕ್ಷಣ ನೀಡಲು ಮೂಲಸೌಕರ್ಯದ ಕೊರತೆ ಇದೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಅತೀ ಅವಶ್ಯಕವಾದ ಪ್ರಯೋಗಾಲಯ, ಎಲ್ಲಾ ವಿದ್ಯಾರ್ಥಿಗಳು ಒಂದೆಡೆ ಸೇರಬಹುದಾದ ಸಭಾಂಗಣ ಸೇರಿದಂತೆ ಮೂಲ ಸೌಕರ್ಯಗಳು ಈ ಕಾಲೇಜು ಆರಂಭವಾಗಿ 28 ವರ್ಷ ಕಳೆದರೂ ಇನ್ನೂ ಮರೀಚಿಕೆಯಾಗಿ ಉಳಿದಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಮೂಲಸೌಕರ್ಯದ ಕೊರತೆ ಯಿಂದಾಗಿ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಭಟ್ಕಳದ ಬಹುತೇಕ ಬಡ ವಿದ್ಯಾರ್ಥಿಗಳು ಬೈಂದೂರಿನ ಪಿಯು ಕಾಲೇಜಿಗೆ ತೆರಳುತ್ತಾರೆ. ಉತ್ತಮ ಉಪನ್ಯಾಸಕರು, ಗುಣಮಟ್ಟದ ಶಿಕ್ಷಣ ಇದ್ದರೂ ಮೂಲ ಸೌಕರ್ಯ ಇಲ್ಲದ ಕಾರಣ ದಿನೇ ದಿನೆ ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂಬುದು ಭಟ್ಕಳ ಬಿಜೆಪಿ ಮಂಡಳ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಆರೋಪ.

ಜನಪ್ರತಿನಿಧಿಗಳ ನಿರಾಸಕ್ತಿ

‘ಹಡೀನ್ ಗ್ರಾಮದಲ್ಲಿ ಪಿಯು ಕಾಲೇಜು ಆರಂಭವಾಗಿ 28 ವಷ ಕಳೆದರೂ ಸರಿಯಾದ ಸೌಕರ್ಯ ಸಿಕ್ಕಿಲ್ಲ. ಎರಡು ಪಕ್ಷದ ಶಾಸಕರು ಅಧಿಕಾರಕ್ಕೆ ಬಂದು ಹೋದರೂ ಕಾಲೇಜಿನ ಅಭಿವೃದ್ದಿ ಬಗ್ಗೆ ಆಸಕ್ತಿ ತೋರಿಸಿಲ್ಲ. ಕಾಲೇಜು ಇರುವ ಅರಣ್ಯ ಜಾಗವನ್ನು ಸಕ್ರಮ ಮಾಡಿಸುವ ಅಥವಾ ಸ್ಥಳಾಂತರಿಸುವ ಕೆಲಸ ಜನಪ್ರತಿನಿಧಿಗಳಿಂದ ನಡೆಯಲಿಲ್ಲ. ಬಡವರ ಮಕ್ಕಳು ಪಿಯುಸಿ ಶಿಕ್ಷಣ ಪಡೆಯಬೇಕಾದರೆ ದುಬಾರಿ ಶುಲ್ಕ ತೆತ್ತು ಖಾಸಗಿ ಕಾಲೇಜು ಅವಲಂಭಿಸುವ ಸ್ಥಿತಿ ಇದೆ’ ಎಂಬುದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಅವರ ದೂರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-20-1067087985

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ