ಬದುಕಿಗೆ ಶರಣರ ಭಕ್ತಿಯೇ ಸರ್ವಶ್ರೇಷ್ಠ ಎಂದು ಸಿದ್ರಾಮಪ್ಪ ಕಪಲಾಪೂರೆ ಹೇಳಿದರು

ಬದುಕಿಗೆ ಶರಣರ ಭಕ್ತಿಯೇ ಸರ್ವಶ್ರೇಷ್ಠ ಎಂದು ಸಿದ್ರಾಮಪ್ಪ ಕಪಲಾಪೂರೆ ಹೇಳಿದರು

ಬದುಕಿಗೆ ಶರಣರ ಭಕ್ತಿಯೇ ಸರ್ವಶ್ರೇಷ್ಠ ಎಂದು ಸಿದ್ರಾಮಪ್ಪ ಕಪಲಾಪೂರೆ ಹೇಳಿದರು

ಬೀದರ್: ‘ದೇವರು ಹಾಗೂ ಶರಣರನ್ನು ಮರೆಯುತ್ತಿರುವ ಮನುಷ್ಯ ಸ್ವಾರ್ಥ, ವಂಚನೆ, ಮೋಸದ ಹಾದಿಯಲ್ಲಿ ಸಾಗುತ್ತಿರುವುದು ವಿಷಾದನೀಯ’ ಎಂದು ಸಿದ್ರಾಮಪ್ಪ ಕಪಲಾಪೂರೆ ಹೇಳಿದರು.

ನೌಬಾದ್‍ನ ಬಸವ ಮಂಟಪದಲ್ಲಿ ಶ್ರಾವಣ ಮಾಸದ ಮೊದಲ ದಿನದ ಅಂಗವಾಗಿ ಆಯೋಜಿಸಿದ್ದ ಪ್ರವಚನದಲ್ಲಿ ಅವರು ಮಾತನಾಡಿದರು.

‘ಶರಣರ ತತ್ವ, ಆದರ್ಶ ಮತ್ತು ಭಕ್ತಿಯ ಮಾರ್ಗವೇ ಉತ್ತಮ ಜೀವನಕ್ಕೆ ದಾರಿದೀಪವಾಗಿದ್ದು, ಆದ್ದರಿಂದ ಬದುಕಿಗೆ ಶರಣರ ಭಕ್ತಿಯೇ ಸರ್ವಶ್ರೇಷ್ಠ’ ಎಂದರು.

ಎಂ.ಜಿ.ದೇಶಪಾಂಡೆ ಹಾಗೂ ಆರ್.ಎಸ್.ಬಿರಾದರ್ ಶರಣರ ಜೀವನ, ವಚನಗಳಲ್ಲಿನ ಸಾಮಾಜಿಕ ಸಂದೇಶ ಕುರಿತು ವಿಚಾರ ಮಂಡಿಸಿದರು. ಮಹಾನಗರ ಪಾಲಿಕೆ ಸದಸ್ಯೆ ಮಹಾದೇವಿ ಅವರು ಶರಣರ ವಚನಗಳ ಮಹತ್ವವನ್ನು ವಿವರಿಸಿದರು.

ಸುರೇಶ ಸ್ವಾಮಿ, ಕಾಳಮ್ಮ ಪಾಂಚಾಳ, ಲಲಿತಾ ಹಾರ್ಕೂಡೆ, ಮಹಾದೇವಿ ಬಸವರಾಜ್, ರಾಜೇಶ್ವರಿ ಹುಮ್ನಾಬಾದ್, ಕೋಮಲ ರವಿ ಧೂಳೆ, ಉಮ್ರಾವತಿ ಸೇರಿದಂತೆ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-33-29208925

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ