ಉತ್ತರ ಕನ್ನಡ: ಬಸ್ ಪ್ರಯಾಣಿಕರಿಗೆ ತಪ್ಪದ ನರಕಯಾತನೆ

ಉತ್ತರ ಕನ್ನಡ: ಬಸ್ ಪ್ರಯಾಣಿಕರಿಗೆ ತಪ್ಪದ ನರಕಯಾತನೆ

ಉತ್ತರ ಕನ್ನಡ: ಬಸ್ ಪ್ರಯಾಣಿಕರಿಗೆ ತಪ್ಪದ ನರಕಯಾತನೆ

ಶಿರಸಿ: ಒಂದು ಕಡೆ ಕಸದ ರಾಶಿ, ಮತ್ತೊಂದೆಡೆ ಹೊಂಡ ಬಿದ್ದು ಕೆಸರು ಗದ್ದೆಯಂತಾದ ನೆಲಹಾಸು, ಕುಡಿಯಲು ಹನಿ ನೀರಿಲ್ಲದ ನಲ್ಲಿಗಳು, ಗಬ್ಬು ನಾರುವ ಶೌಚಾಲಯದ ವಾತಾವರಣ, ಇದು ತಾಲ್ಲೂಕಿನ ಬನವಾಸಿಯ ಬಸ್ ನಿಲ್ದಾಣದಲ್ಲಿ ದಿನಂಪ್ರತಿ ಕಾಣಸಿಗುವ ದೃಶ್ಯ.

ಶಿರಸಿ, ಸೊರಬ ಹಾಗೂ ಶಿಕಾರಿಪುರಕ್ಕೆ ಸಂಪರ್ಕ ಕಲ್ಪಿಸುವ ಬನವಾಸಿ ಬಸ್ ನಿಲ್ದಾಣದಲ್ಲಿ ನಿತ್ಯ ಸ್ಥಳೀಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಬಸ್ಸಿಗಾಗಿ ಬಂದು ನಿಂತರೆ ಅನುಭವಿಸುವುದು ನರಕಯಾತನೆ. ಬಸ್ ನಿಲ್ದಾಣ ಎನ್ನುವುದಕ್ಕಿಂತ ಅವ್ಯವಸ್ಥೆಯ ಆಗರ ಎನ್ನಲು ಅಡ್ಡಿಯಿಲ್ಲದ ಈ ಜಾಗದಲ್ಲಿ ಪ್ರಯಾಣಿಕರಿಗೆ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ ನಿತ್ಯ ಪರದಾಡುವಂತಾಗಿದೆ.

1996ರಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣವು ಕೇವಲ ಒಂದು ಸಣ್ಣ ವ್ಯಾಪಾರಿ ಮಳಿಗೆಯಷ್ಟಿದೆ. ಒಳಗೆ ಕುಳಿತುಕೊಳ್ಳಲು ಇರುವುದು 15–20 ಆಸನಗಳು ಮಾತ್ರ. ‘ಬಸ್ ನಿಲ್ದಾಣದ ಒಳಗೆ ಒಮ್ಮೆಗೆ ಕೇವಲ ಎರಡು ಬಸ್‌ಗಳು ನಿಲ್ಲಲು ಜಾಗವಿರುವುದರಿಂದ ಬಸ್ ಬಂದ ತಕ್ಷಣ ನೂಕುನುಗ್ಗಲು ಏರ್ಪಡುತ್ತದೆ. ಹೀಗಾಗಿ ಶೇಕಡಾ 50ಕ್ಕೂ ಹೆಚ್ಚು ಜನ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಆಸನ ಸಿಗದೆ, ನಿಲ್ಲಲು ಜಾಗವೂ ಇಲ್ಲದೆ ಮಳೆಯಲ್ಲಿಯೇ ಹೊರಗೆ ನಿಂತು ಬಸ್ ಕಾಯಬೇಕಾಗಿದೆ’ ಎಂಬುದು ಪ್ರಯಾಣಿಕರ ದೂರು.

‘ನಿಲ್ದಾಣಕ್ಕೆ ಒಟ್ಟು ಒಂದು ಎಕರೆ ವಿಶಾಲವಾದ ಜಾಗವಿದ್ದರೂ, ಕಟ್ಟಡವನ್ನು ತೀರಾ ಮುಂಭಾಗದಲ್ಲೇ ನಿರ್ಮಿಸಲಾಗಿದೆ. ಇದರಿಂದಾಗಿ ಹಿಂಭಾಗದ ವಿಶಾಲ ಜಾಗವು ಯಾವುದೇ ಬಳಕೆಗೆ ಬಾರದೆ ವ್ಯರ್ಥವಾಗಿ ಬಿದ್ದಿದೆ. ಅಲ್ಲಿ ನಿರ್ಮಿಸಲಾದ ಶೌಚಾಲಯವು ನಿರ್ವಹಣೆಯಿಲ್ಲದೆ ಹಾಳಾಗಿದ್ದು, ಸಾರ್ವಜನಿಕರು ಖಾಲಿ ಜಾಗವನ್ನೇ ಮೂತ್ರ ವಿಸರ್ಜನೆಗೆ ಬಳಸುತ್ತಿರುವುದರಿಂದ ಇಡಿ ಆವರಣ ದುರ್ನಾತ ಬೀರುತ್ತಿದೆ. ನಿಲ್ದಾಣದ ಕಂಪೌಂಡ್ ಗೋಡೆಗಳು ಹಲವೆಡೆ ಕುಸಿದು ಬಿದ್ದಿದ್ದರೂ ಯಾರೂ ತಿರುಗಿ ನೋಡುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯ ಉದಯಕುಮಾರ ಕಾನಳ್ಳಿ.

‘ಪ್ರತ್ಯೇಕ ತಾಲ್ಲೂಕು ಆಗುವ ಎಲ್ಲ ಅರ್ಹತೆ ಹೊಂದಿದ್ದರೂ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬನವಾಸಿಗೆ ತಕ್ಷಣವೇ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಬೇಕಿದೆ. ಐತಿಹಾಸಿಕ ಬನವಾಸಿ ಬಸ್ ನಿಲ್ದಾಣವನ್ನು ತಕ್ಷಣ ಪುನರ್ ನಿರ್ಮಿಸಿ, ಆಧುನೀಕರಣಗೊಳಿಸಿ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು’ ಎನ್ನುತ್ತಾರೆ ಸ್ಥಳೀಯರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ