ಹೆಬ್ರಿ ವಲಯದಲ್ಲಿ ಅಪಾಯಕಾರಿ ಮರಗಳ ತೆರವಿಗೆ ಸರ್ವೆ

ಹೆಬ್ರಿ ವಲಯದಲ್ಲಿ ಅಪಾಯಕಾರಿ ಮರಗಳ ತೆರವಿಗೆ ಸರ್ವೆ

ಹೆಬ್ರಿ ವಲಯದಲ್ಲಿ ಅಪಾಯಕಾರಿ ಮರಗಳ ತೆರವಿಗೆ ಸರ್ವೆ

ಹೆಬ್ರಿ: ಬ್ರಹ್ಮಾವರದಲ್ಲಿ ಕಾರಿನ ಮೇಲೆ ಬರ ಬಿದ್ದು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡ ಬಳಿಕ, ಹೆಬ್ರಿ ವಲಯ ಅರಣ್ಯಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಮನವಿಗಳನ್ನು ಪರಿಶೀಲಿಸಿ ಸರ್ವೆ ಮಾಡಿ ಪಟ್ಟಿ ತಯಾರಿಸುವ ಕಾರ್ಯ ನಡೆಯುತ್ತಿದೆ. ಮುದ್ರಾಡಿ ಪ್ರೌಢಶಾಲೆ ಬಳಿ ಹಾಗೂ ಹೆಬ್ರಿ ಬ್ರಹ್ಮಾವರ ರಸ್ತೆಯ ವಿವಿಧ ಕಡೆಗಳ ಅಪಾಯಕಾರಿ ಮರಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.

ಕಾರಿನ ಮೇಲೆ ಮರ ಬಿದ್ದು ಕಳ್ತೂರಿನ ಸದಾನಂದ ನಾಯಕ್‌ ಎಂಬುವರು ಈಚೆಗೆ ಪ್ರಾಣ ಕಳೆದುಕೊಂಡಿದ್ದರು. ಹೆಬ್ರಿ ತಾಲ್ಲೂಕು ರೆಡ್‌ ಕ್ರಾಸ್‌ ಸೊಸೈಟಿಯವರು ಇತ್ತೀಚೆಗೆ ಅಪಾಯಕಾರಿ ಮರಗಳ ತೆರವಿಗೆ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಕುಚ್ಚೂರು ಶ್ರೀಕಾಂತ್‌ ಪೂಜಾರಿ, ಮಿಥುನ್‌ ಶೆಟ್ಟಿ ಚಾರ, ನವೀನ್‌ ಕೆ. ಅಡ್ಯಂತಾಯ, ಶಂಕರ ಶೇರಿಗಾರ್‌ ಹೆಬ್ರಿ, ಕನ್ಯಾನ ಸಂತೋಷ ನಾಯಕ್‌, ಪ್ರವೀಣ್‌ ಸೂಡ ಕೆರೆಬೆಟ್ಟು, ಪ್ರಶಾಂತ್‌ ಪೈ ಮುದ್ರಾಡಿ, ಪ್ರೀತಮ್‌ ಜೆ ಶೆಟ್ಟಿ ಮುದ್ರಾಡಿ, ಅಣ್ಣಪ್ಪ ಕುಲಾಲ್‌ ಮಂಡಾಡಿಜಡ್ಡು, ಕೆರೆಬೆಟ್ಟು ಸಂಜೀವ ಶೆಟ್ಟಿ, ಸನತ್‌ ಕುಮಾರ ಶೆಟ್ಟಿ ಬೇಳಂಜೆ, ವಕೀಲ ಕೃಷ್ಣ ಶೆಟ್ಟಿ, ರವಿ ಬೇಳಂಜೆ ಮುಂತಾದವರು ಒತ್ತಾಯಿಸಿದ್ದರು.

ಇನ್ನೂ ಇವೆ ಅಪಾಯಕಾರಿ ಮರಗಳು: ಮುದ್ರಾಡಿಯ ಪಾದೆಗುಡ್ಡೆ, ಭೀಮನಗರ, ಕೆಲಕಿಲ, ಉಪ್ಪಳ, ಭಕ್ರೆ ಮುಂತಾದ ಕಡೆ ಅಪಾಯಕಾರಿ ಹಾಗೂ ಬೀಳುವ ಸ್ಥಿಯ ಮರಗಳಿವೆ ಎಂದು ಪ್ರೀತಮ್‌ ಜೆ ಶೆಟ್ಟಿ ತಿಳಿಸಿದ್ದಾರೆ. ಬೇಳಂಜೆಯ ತೆಂಕಹೊಲ, ಕೆಪ್ಪೆಕೆರೆ, ಸಳ್ಳೇಕಟ್ಟೆ ಪರಿಸರದಲ್ಲಿಯೂ ಅಪಾಯಕಾರಿ ಮರಗಳು ಇವೆ ಎಂದು ಸನತ್‌ ಕುಮಾರ್‌ ಶೆಟ್ಟಿ ಹೇಳಿದ್ದಾರೆ. ಉಡುಪಿ ರಸ್ತೆಯ ಎಸ್‌ ಕೆ ಫರ್ನಿಚರ್‌ ಬಳಿ ಸತ್ತು ಹೋಗಿರುವ ಬೃಹತ್‌ ಮರ ಬೀಳುವ ಸ್ಥಿತಿಯಲ್ಲಿದೆ ಎಂದು ಮುಖಂಡ ಕನ್ಯಾನ ಸಂತೋಷ ನಾಯಕ್‌ ಹೇಳಿದ್ದಾರೆ. ಕಾರ್ಕಳ ರಸ್ತೆಯ ಗಿಲ್ಲಾಳಿ ಬಸ್‌ ನಿಲ್ದಾಣದ ಬಳಿ ಅಪಾಯಕಾರಿ ಮರಗಳು, ಶಿವಪುರ ಗೋಳಿಕಟ್ಟೆ ರಸ್ತೆಯಲ್ಲಿ ವಾಲಿಕೊಂಡಿರುವ ಮರಗಳು ಇವೆ ಎಂದು ಸ್ಥಳೀಯರು ದೂರಿದ್ದಾರೆ.

ಹೆಬ್ರಿ ಪರಿಸರದ ಎಲ್ಲ ಪ್ರಮುಖ ರಸ್ತೆಗಳಲ್ಲಿ, ಗ್ರಾಮೀಣ ರಸ್ತೆ, ಗ್ರಾಮ ಪಂಚಾಯಿತಿ ರಸ್ತೆಗಳ ಇಕ್ಕೆಲಗಳಲ್ಲೂ ರಸ್ತೆಗೆ ವಾಲಿಕೊಂಡಿರುವ, ಸತ್ತುಹೋಗಿರುವ, ಟೊಳ್ಳಾಗಿರುವ ಬೃಹತ್‌ ಮರಗಳು ಅಪಾಯಕಾರಿಯಾಗಿ ನಿಂತಿವೆ. ಇವುಗಳ ಬಗ್ಗೆಯೂ ಅರಣ್ಯ ಇಲಾಖೆ ಸರ್ವೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಪ್ರಕೃತಿ ವಿಕೋಪ ಕುರಿತ ವಿಶೇಷ ಸಭೆಯಲ್ಲಿ ಸಚಿವರಾದ ಯು.ಟಿ ಖಾದರ್‌ ಮತ್ತು ಶಾಸಕ ಸುನಿಲ್‌ ಕುಮಾರ್‌ ಅವರೂ ಅಪಾಯಕಾರಿ ಮರಗಳನ್ನು ಶೀಘ್ರ ತೆರವುಗೊಳಿಸುವಂತೆ ಸೂಚನೆ ನೀಡಿದ್ದನ್ನು ಸಾರ್ವಜನಿಕರು ನೆನಪಿಸಿಕೊಳ್ಳುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-28-917825704

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ