ಚಿಕಿತ್ಸೆಯ ಬಳಿಕ ಪತಿ ದೇವರಕೊಂಡ ಜತೆ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

ಚಿಕಿತ್ಸೆಯ ಬಳಿಕ ಪತಿ ದೇವರಕೊಂಡ ಜತೆ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

ಚಿಕಿತ್ಸೆಯ ಬಳಿಕ ಪತಿ ದೇವರಕೊಂಡ ಜತೆ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ‘ಮೈಸಾ’ ಸಿನಿಮಾದ ಚಿತ್ರೀಕರಣದ ವೇಳೆ ಸೊಂಟದ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ 6 ವಾರಗಳವರೆಗೂ ವಿಶ್ರಾಂತಿ ಪಡೆಯಲು ವೈದ್ಯರ ತಂಡ ಸೂಚನೆ ನೀಡಿತ್ತು.

ಇದೀಗ ಹೈದರಾಬಾದ್‌ನಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ಪತಿ ವಿಜಯ್ ದೇವರಕೊಂಡ ಅವರ ಜತೆ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಂಡಿದ್ದಾರೆ.

ನಿರ್ಮಾಪಕ ನಿರಂಜನ್ ರೆಡ್ಡಿ ಅವರ ಪುತ್ರ ಸಾಹಿಲ್ ರೆಡ್ಡಿ ಅವರ ನಿಶ್ಚಿತಾರ್ಥವನ್ನು ಹೈದರಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಈ ಶುಭಕಾರ್ಯಕ್ಕೆ ದಂಪತಿ ಒಟ್ಟಾಗಿ ಆಗಮಿಸಿದ್ದಾರೆ. ಮಾತ್ರವಲ್ಲದೆ, ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರ ಕೈ ಹಿಡಿದುಕೊಂಡು ಆಗಮಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದೇ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರು ಕಪ್ಪು ಹಾಗೂ ಚಿನ್ನದ ಬಣ್ಣದಿಂದ ಕೂಡಿದ ಲೆಹೆಂಗಾ ಧರಿಸಿದ್ದರು. ಪತಿ ವಿಜಯ್ ದೇವರಕೊಂಡ ಕೂಡ ಕಪ್ಪು ಬಣ್ಣದ ಸೂಟ್‌ ಧರಿಸಿದ್ದರು. 

ಸೊಂಟದ  ಗಾಯಕ್ಕೆ ಒಳಗಾದ ಬಳಿಕ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ರಶ್ಮಿಕಾ, ‘ಗಾಯಗಳಾಗುವುದು ನಿಜಕ್ಕೂ ಕಿರಿಕಿರಿ ಉಂಟುಮಾಡುತ್ತದೆ. ಈ ವಿಷಯ ಯಾರಿಗೂ ತಿಳಿಯಬಾರದು ಎಂದು ಭಾವಿಸಿದ್ದೆ. ಆದರೆ ಚಿತ್ರೀಕರಣದಿಂದ ದೂರವಾಗಿದ್ದಕ್ಕೆ ಕ್ಷಮೆ ಇರಲಿ' ಎಂದು ಬರೆದುಕೊಂಡಿದ್ದರು.

‘ಈ ಘಟನೆ ಸಂಭವಿಸಿ ಕೆಲವು ದಿನಗಳಾಗಿವೆ. ಇದು ನನಗೆ ಸತತವಾಗಿ ಆಗುತ್ತಿರುವ 3ನೇ ಗಾಯ. ನನ್ನ ದೇಹವನ್ನು ಕೇವಲ ಒಂದು ಯಂತ್ರದಂತೆ ನೋಡದೆ, ಅದನ್ನೂ ಒಬ್ಬ ಮನುಷ್ಯನ ದೇಹದಂತೆ ನೋಡಿಕೊಳ್ಳುವುದನ್ನು ನಾನು ಕಲಿಯಬೇಕು’ ಎಂದು ಬರೆದುಕೊಂಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ