ತಂಪಾದ ಗಾಳಿಯಲ್ಲಿ ಸಾಹಸದ ಖುಷಿ

ತಂಪಾದ ಗಾಳಿಯಲ್ಲಿ ಸಾಹಸದ ಖುಷಿ

ತಂಪಾದ ಗಾಳಿಯಲ್ಲಿ ಸಾಹಸದ ಖುಷಿ

ಶಹಾಪುರ: ನಗರಕ್ಕೆ ನಿಸರ್ಗದ ತಡೆಗೊಡೆ ನಿರ್ಮಿಸಿದಂತೆ ಕಾಣುವ ಬೆಟ್ಟಗಳ ಸಾಲಿನಲ್ಲಿ ಪ್ರಾಕೃತಿಕ ವಿಸ್ಮಯದಂತೆ ಕಾಣುವ ಬುದ್ಧ ಮಲಗಿರುವ ದೃಶ್ಯ ಸ್ಥಳ ತಲುಪುವುದೇ ಒಂದು ಸಾಹಸವಾಗಿದೆ.

ಬೆಟ್ಟದ ಸಾಲಿನ ಕವಲು ದಾರಿಯಲ್ಲಿ ಹೆಜ್ಜೆ ಹಾಕುವುದು ಖುಷಿ ಹಾಗೂ ಸಂಭ್ರಮವನ್ನು ಉಂಟು ಮಾಡುತ್ತದೆ. ಮಳೆಗಾಲದ ತಂಪನೆಯ ಗಾಳಿಯಲ್ಲಿ ನಿಸರ್ಗದ ಹಸಿರಿನ ಸೀರೆ ಹೊದ್ದುಕೊಂಡಂತೆ ಕಾಣುವ ಇಲ್ಲಿನ ಬೆಟ್ಟ ಪ್ರದೇಶಕ್ಕೆ ತೆರಳುವುದು ಚಾರಣಿಗರಿಗೆ ಮನೋಲ್ಲಾಸದ ಮೋಜು ನೀಡುತ್ತದೆ.

ನಗರದ ಸರ್ಕಾರಿ ಪದವಿ ಕಾಲೇಜಿನ ಹಿಂಭಾಗದಿಂದ ಹೊರಟರೆ ಅನತಿ ದೂರದಲ್ಲಿ ರಸ್ತೆ ಕಾಣುತ್ತದೆ. ನಂತರ ಬೆಟ್ಟದ ಸಾಲು ಮೆಟ್ಟಿಲು ಆಗುತ್ತವೆ. ಬೆಟ್ಟದ ಒಡಲಿನೊಳಗೆ ಸೇರಿದಂತೆ ಬುದ್ದನ ಹೊಟ್ಟೆ, ಎದೆ ಮುಖ ವಿಂಗಡಿಸಲು ಆಗದಂತೆ ಕೇವಲ ಕಿರಿದಾದ ಕಲ್ಲು ಬಂಡೆಗಳ ನಡುವೆ ಅಲ್ಲಿ ಬೆಳೆದು ನಿಂತ ಕುರುಚಲು ಗಿಡಗಳನ್ನು ಸರಿಸುತ್ತಾ, ದಾರಿ ಮಾಡಿಕೊಂಡು ಸಾಗಬೇಕು. ಹರ ಸಾಹಸ ಪಟ್ಟು ಸುಮಾರು 500 ಅಡಿ ಎತ್ತರದ ಬೆಟ್ಟದ ತುದಿಯನ್ನು ತಲುಪಿದಾಗ ಮತ್ತೊಂದು ಸೋಜಿಗವು ಚಾರಣಿಯರಿಗೆ ಸಿಗುತ್ತದೆ ಎಂದು ತಮ್ಮ ಅನುಭವವನ್ನು ಹಿರಿಯ ಲೇಖಕಿ ಶೈಲಜಾ ಬಾಗೇವಾಡಿ ಹಂಚಿಕೊಂಡರು.

ಬುದ್ಧನ ಮೂಗಿನ ತುದಿಯ ಬಂಡೆಯ ಕೆಳಗಡೆ ನಾಗಲಿಂಗೇಶ್ವರನ ಗುಹೆ ಇದೆ. ಅದರ ಬಳಿ ನಿಂತು ಎತ್ತರ ಪ್ರದೇಶದಿಂದ ಕಣ್ಣು ಹಾಯಿಸಿದಾಗ ಶಹಾಪುರ ನಗರದ ವಿಹಂಗಮ ನೋಟವು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಬೆವರು ಸುರಿಸಿ ತೆರಳಿದ ಚಾರಣಿಗರಿಗೆ ಸಾರ್ಥಕದ ಭಾವ ಮೂಡುತ್ತದೆ ಎನ್ನುತ್ತಾರೆ ಅವರು.

ಅಲ್ಲದೆ ಬೆಟ್ಟದ ಸಾಲಿನಲ್ಲಿ ಸಾಕಷ್ಟು ಪ್ರೇಕ್ಷಣಿಯ ಸ್ಥಳ ತಾಣಗಳು ಸಿಗುತ್ತವೆ. ಅದನ್ನು ಕಾಣುವ ಮನಸ್ಸುಗಳು ಇದ್ದರೆ, ಮುಖ್ಯವಾಗಿ ಅಲ್ಲಿನ ಕೋಟೆ, ತಾವರೆಕೆರೆ, ಸಿದ್ದಲಿಂಗೇಶ್ವರ ಬೆಟ್ಟ, ಪಾಂಡವರ ಬಂಡೆ, ಅಕ್ಕ ತಂಗಿ ಕೊಳಕ್ಕೆ ಭೇಟಿ ನೀಡಲು ಅವಕಾಶವಿದೆ. ಈಗ ಮಳೆಗಾಲವಾಗಿದ್ದರಿಂದ ತೆರಳಿದರೆ ಮನಸ್ಸಿಗೆ ಉಲ್ಲಾಸದ ಜತೆಯಲ್ಲಿ ಸಾಹಸದ ಖುಷಿ ನಿಮಗೆ ಸಿಗುತ್ತದೆ. ಆದರೆ ಚಾರಣಿಗರು ತೆರಳುವಾಗ ಕಡ್ಡಾಯವಾಗಿ ನೀರು ಒಂದಿಷ್ಟು ಉಪಹಾರ ಹೆಗಲಿಗೆರಿಸಿಕೊಂಡು ತೆರಳಿ.

ಬೆಟ್ಟದ ಸಾಲಿನ ತಾಣಗಳನ್ನು ಆಡಳಿತ ವ್ಯವಸ್ಥೆ ಅಭಿವೃದ್ಧಿಪಡಿಸಿದರೆ ಉತ್ತಮ ಪ್ರವಾಸಿ ತಾಣವಾಗಬಲ್ಲದು. ಎರಡು ಬೆಟ್ಟದ ಮಧ್ಯದಲ್ಲಿ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿ ಶೈಲಜಾ ಬಾಗೇವಾಡಿ, ಲೇಖಕಿ, ಶಹಾಪುರ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-30-2092734136

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ