ಇರುವ ಬೆಳೆ ಉಳಿಸಿಕೊಳ್ಳಲು ತುಂಗಭದ್ರಾ ನೀರು ಹರಿಸಿ; ರೈತರ ಒತ್ತಾಯ

ಇರುವ ಬೆಳೆ ಉಳಿಸಿಕೊಳ್ಳಲು ತುಂಗಭದ್ರಾ ನೀರು ಹರಿಸಿ; ರೈತರ ಒತ್ತಾಯ

ಇರುವ ಬೆಳೆ ಉಳಿಸಿಕೊಳ್ಳಲು ತುಂಗಭದ್ರಾ ನೀರು ಹರಿಸಿ; ರೈತರ ಒತ್ತಾಯ

ಕೊಪ್ಪಳ: ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಬರದ ಛಾಯೆ ಇದ್ದು ಇರುವ ಬೆಳೆ ಉಳಿಸಿಕೊಳ್ಳಲು ಜಲಾಶಯದಿಂದ ಇಂದೇ ನೀರು ಹರಿಸಬೇಕು ಎಂದು ವಿವಿಧ ಜಿಲ್ಲೆಗಳ ರೈತ ಮುಖಂಡರು ಒತ್ತಾಯಿಸಿದರು. 

ತಾಲ್ಲೂಕಿನ ಮುನಿರಾಬಾದ್‌ನ ಕಾಡಾ ಕಚೇರಿಯಲ್ಲಿ ಮಂಗಳವಾರ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಗೂ ಪೂರ್ವದಲ್ಲಿ ಸಚಿವ ಶಿವರಾಜ ತಂಗಡಗಿ ಅವರನ್ನು ಭೇಟಿಯಾದ ರೈತ ಮುಖಂಡರು ಈ ಹಕ್ಕೊತ್ತಾಯ ಮಂಡಿಸಿದರು. ರೈತರ ಜೊತೆ ಸಚಿವ ಸಭೆ ನಡೆಸಿದರು. 

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ರೈತ ಮುಖಂಡರಾದ ಚಾಮರಸ ಪಾಟೀಲ, ಶರಣಪ್ಪಗೌಡ್ರ, ಶಂಕರಗೌಡ್ರ ಸೇರಿದಂತೆ ನಾಲ್ಕೂ ಜಿಲ್ಲೆಗಳ ರೈತ ಮುಖಂಡರು ಕಾಲುವೆಗಳಿಗೆ ತಕ್ಷಣವೇ ನೀರು ಹರಿಸಬೇಕು. ಕುಡಿಯಲು ಬೇಕಾಗುವಷ್ಟು ನೀರು ಉಳಿಸಿಕೊಂಡು ಸಭೆಯಲ್ಲಿ ನೀರು ಹರಿಸಲು ತೀರ್ಮಾನಿಸಬೇಕು ಎಂದು ಒತ್ತಾಯಿಸಿದರು.  

ಜಲಾಶಯದಲ್ಲಿ 82.599 ಟಿಎಂಸಿ ಅಡಿ ನೀರು ಸಂಗ್ರಹವಿದ್ಧು ಬೇಗನೆ ಕಾಲುವೆಗಳಿಗೆ ನೀರು ಹರಿಸಬೇಕು. ಭತ್ತ, ಮೆಣಸಿನಕಾಯಿ ಸಸಿಗಳ ನರ್ಸರಿ ಹಾಳಾಗುತ್ತಿದೆ. ಗೊಬ್ಬರ ಮತ್ತು ಬೀಜ ದಾಸ್ತಾನು ಇದೆ. ನೀರು ಸಿಗದ ಕಾರಣ ರೈತರು ಕಂಗಾಲಾಗಿದ್ದಾರೆ. ಜಲಾಶಯಕ್ಕೆ 50 ಟಿಎಂಸಿ ಅಡಿ ಬಂದಾಗಲೇ ನೀರು ಬಿಡಬೇಕಿತ್ತು. ನೀರು ಇಲ್ಲದೆ ತೊಗರಿ, ಹತ್ತಿ, ಮೆಣಸಿನ ಬೆಳೆಗಳು ಒಣಗಿವೆ ಎಂದು ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು.

2008ರಲ್ಲಿ ಕಾಲುವೆಗಳ ದುರಸ್ತಿ ಮಾಡಿದ್ದು ಬಿಟ್ಟರೆ ಇದುವರೆಗೆ ಮತ್ತೆ ಕಾಲುವೆಗಳ ದುರಸ್ತಿ ಕಾರ್ಯ ಮಾಡಿಲ್ಲ. ಬಲದಂಡೆ, ಎಡದಂಡೆ ಸೇರಿದಂತೆ ಎಲ್ಲ ಕಾಲುವೆಗಳ ದುರಸ್ತಿ ಕಾರ್ಯ ಕೂಡ ನಡೆಯಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಸಭೆಯಲ್ಲಿ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ, ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್,
ಜಿ. ಹಂಪಯ್ಯ ನಾಯಕ, ಬಸವನಗೌಡ ತುರವಿಹಾಳ, ಎಸ್. ಶಿವರಾಜ ಪಾಟೀಲ, ಅನ್ನಪೂರ್ಣ ತುಕಾರಾಮ್‌, ಜೆ.ಎನ್ ಗಣೇಶ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಮುನಿರಾಬಾದ್‌ ಕಾಡಾ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ಮುಖಂಡರಾದ ಎನ್‌.ಎಸ್. ಬೋಸರಾಜು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ನೀರು ಬಿಡುವ ಕುರಿತು ಚರ್ಚಿಸಲು ಸಭೆ ನಡೆಯಲಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ