ದಿಢೀರ್ ಪ್ರವಾಹ: ಸಂಕಷ್ಟಕ್ಕೆ ಸಿಲುಕಿದ ನೇಪಾಳಕ್ಕೆ ಸಹಾಯಹಸ್ತ ಚಾಚಿದ ಭಾರತ

ದಿಢೀರ್ ಪ್ರವಾಹ: ಸಂಕಷ್ಟಕ್ಕೆ ಸಿಲುಕಿದ ನೇಪಾಳಕ್ಕೆ ಸಹಾಯಹಸ್ತ ಚಾಚಿದ ಭಾರತ

ದಿಢೀರ್ ಪ್ರವಾಹ: ಸಂಕಷ್ಟಕ್ಕೆ ಸಿಲುಕಿದ ನೇಪಾಳಕ್ಕೆ ಸಹಾಯಹಸ್ತ ಚಾಚಿದ ಭಾರತ

ಕಠ್ಮಂಡು: ನೇಪಾಳದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಭಾರತವು ಒಟ್ಟು 62 ಟನ್ ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.

ಇದರೊಂದಿಗೆ ಆಪತ್ತಿನಲ್ಲಿರುವ ನೆರೆಹೊರೆಯ ದೇಶಗಳಿಗೆ ಭಾರತವು ಎಂದಿನಂತೆ ಮಾನವೀಯ ನೆರವು ನೀಡಿದೆ.

ಅಮೆರಿಕ ಮತ್ತು ಚೀನಾ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸಂಸ್ಥೆಗಳು ನೆರವು ನೀಡಲು ಸಿದ್ಧತೆ ನಡೆಸುತ್ತಿರುವಾಗಲೇ, ಭಾರತವು ತಕ್ಷಣವೇ ಕಾರ್ಯಪ್ರವೃತ್ತವಾಗಿ ನೇಪಾಳ ತಲುಪಿದ ಮೊದಲ ದೇಶ ಎನಿಸಿಕೊಂಡಿದೆ.

ಭಾರತೀಯ ವಾಯುಪಡೆಯ C-130J ಮತ್ತು C-17 ವಿಮಾನಗಳ ಮೂಲಕ ಒಟ್ಟು ಮೂರು ಹಂತಗಳಲ್ಲಿ 62 ಟನ್ ಪರಿಹಾರ ಸಾಮಗ್ರಿಗಳನ್ನು ಕಠ್ಮಂಡುವಿಗೆ ತಲುಪಿಸಲಾಗಿದೆ.

ತಾತ್ಕಾಲಿಕ ಡೇರೆ (ಟೆಂಟ್), ಕಂಬಳಿ, ನೈರ್ಮಲ್ಯ ಕಿಟ್‌, ಸೋಲಾರ್ ದೀಪ, ವಿದ್ಯುತ್ ಉತ್ಪಾದಿಸುವ ಜೆನ್‌ಸೆಟ್‌, ನೀರು ಹೊರಹಾಕುವ ಪಂಪ್‌, ಅಡುಗೆ ಪಾತ್ರೆ ಹಾಗೂ ಸುಮಾರು 9 ಟನ್‌ಗೂ ಹೆಚ್ಚು ತುರ್ತು ಔಷಧಗಳು ಮತ್ತು ಆಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ.

ದುರಂತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿದ್ದಾರೆ. ಭಾರತದಿಂದ ಎಲ್ಲಾ ರೀತಿಯ ಸಹಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಹಿಂದೆಯೂ ಟರ್ಕಿ, ಸಿರಿಯಾ, ಮ್ಯಾನ್ಮಾರ್, ಶ್ರೀಲಂಕಾ ಮತ್ತು ವೆನೆಜುವೆಲಾಗಳಲ್ಲಿ ದುರಂತ ಸಂಭವಿಸಿದಾಗ ಭಾರತವು ಮುಂಚೂಣಿಯಲ್ಲಿ ನಿಂತು ನೆರವು ನೀಡಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ