ಇಂದು ಟಾಕ್ಸಿಕ್ ಟ್ರೇಲರ್ ಬಿಡುಗಡೆ; ಬೆಂಗಳೂರಿನಲ್ಲಿ ಅದ್ದೂರಿ ವೇದಿಕೆ ಸಜ್ಜು

ಇಂದು ಟಾಕ್ಸಿಕ್ ಟ್ರೇಲರ್ ಬಿಡುಗಡೆ; ಬೆಂಗಳೂರಿನಲ್ಲಿ ಅದ್ದೂರಿ ವೇದಿಕೆ ಸಜ್ಜು

ಇಂದು ಟಾಕ್ಸಿಕ್ ಟ್ರೇಲರ್ ಬಿಡುಗಡೆ; ಬೆಂಗಳೂರಿನಲ್ಲಿ ಅದ್ದೂರಿ ವೇದಿಕೆ ಸಜ್ಜು

ರಾಕಿಂಗ್‌ ಸ್ಟಾರ್ ಯಶ್ ಅಭಿನಯ, ಗೀತು ಮೋಹನ್‌ದಾಸ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ ಅಪ್ಸ್‌’ ಸಿನಿಮಾದ ಟ್ರೇಲರ್ ಇಂದು (ಆ.8) ಬಿಡುಗಡೆಯಾಗುತ್ತಿದೆ. ಈ ಬಗ್ಗೆ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು (ಆ.8) ಸಂಜೆ 7 ಗಂಟೆ 1 ನಿಮಿಷಕ್ಕೆ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಬೆಂಗಳೂರಿನ ಕಪಾಲಿ ಎಎಂಬಿ ಸಿನಿಮಾಸ್‌ನಲ್ಲಿ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಟ್ರೇಲರ್ ಬಿಡುಗಡೆಗೆ ದೊಡ್ಡ ವೇದಿಕೆ ಸಜ್ಜಾಗುತ್ತಿದೆ.

ಟಾಕ್ಸಿಕ್ ಚಿತ್ರತಂಡ ಅಧಿಕೃತವಾಗಿ ಟ್ರೇಲರ್‌ ಬಿಡುಗಡೆ ಮಾಡುವ ಮೂಲಕ ಬೆಂಗಳೂರಿನಿಂದಲೇ ಸಿನಿಮಾ ಪ್ರಚಾರವನ್ನು ಆರಂಭಿಸಲಿದೆ. ಆ ಬಳಿಕ ದೇಶದ ನಾನಾ ಭಾಗಗಳಿಗೆ ನಟ ಯಶ್ ಹಾಗೂ ಚಿತ್ರತಂಡ ಪ್ರಚಾರಕ್ಕೆ ತೆರಳಲಿದೆ.

ಇನ್ನು, ಈ ಕಾರ್ಯಕ್ರವನ್ನು ಖ್ಯಾತ ಹಾಸ್ಯನಟ, ರೇಡಿಯೊ ಜಾಕಿ, ನೊಗರಾಜ್ ಮತ್ತು ಮಿಸ್ಟರ್ ನಾಗ್ಸ್‌ ಎಂದೇ ಜನಪ್ರಿಯರಾಗಿರುವ ನಟ ಡ್ಯಾನಿಶ್ ಸೇಠ್ ಅವರು ನಿರೂಪಣೆ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಟಾಕ್ಸಿಕ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯಾರು ಆಗಮಿಸಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಹಿಂದೆ ‘ಕೆಜಿಎಫ್’ ಸಿನಿಮಾದ ಟ್ರೇಲರ್‌ ಬಿಡುಗಡೆ ವೇಳೆ ನಟ ಶಿವರಾಜ್ ಕುಮಾರ್ ಅವರು ಆಗಮಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ಬಾರಿ ಟಾಕ್ಸಿಕ್ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ