ಭಾರತ ಸೇರಿ ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ 100ರಷ್ಟು ಸುಂಕ: ಅಮೆರಿಕ ಅಸ್ತು

ಭಾರತ ಸೇರಿ ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ 100ರಷ್ಟು ಸುಂಕ: ಅಮೆರಿಕ ಅಸ್ತು

ಭಾರತ ಸೇರಿ ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ 100ರಷ್ಟು ಸುಂಕ: ಅಮೆರಿಕ ಅಸ್ತು

ವಾಷಿಂಗ್ಟನ್: ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳ ಮಸೂದೆಗೆ ಅಮೆರಿಕ ಸೆನೆಟ್ ಶುಕ್ರವಾರ ಭಾರಿ ಬಹುಮತದೊಂದಿಗೆ ಅನುಮೋದನೆ ನೀಡಿದೆ.

ಉಕ್ರೇನ್‌ಗೆ ಅಮೆರಿಕದ ಬೆಂಬಲವನ್ನು ಬಲಪಡಿಸಲು ಮತ್ತು ದೀರ್ಘಕಾಲದಿಂದ ನಡೆಯುತ್ತಿರುವ ಯುದ್ಧದ ನಡುವೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ದಿವಂಗತ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ನಡೆಸಿದ ವರ್ಷದ ಸುದೀರ್ಘ ಅಭಿಯಾನದ ಫಲವಾಗಿ ಕಠಿಣ ನಿರ್ಬಂಧಗಳ ಮಸೂದೆಗೆ ಅನುಮೋದನೆ ಸಿಕ್ಕಿದೆ.

86-11 ಭಾರಿ ಬಹುಮತದಿಂದ ರಷ್ಯಾ ವಿರುದ್ಧದ ನಿರ್ಬಂಧ ಮಸೂದೆಗೆ ಮೆರಿಕ ಸಂಸತ್(ಸೆನೆಟ್) ಅಸ್ತು ಎಂದಿದೆ. ಇದು ರಷ್ಯಾದ ತೈಲ ಮತ್ತು ಅನಿಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಮೊದಲ ಐದು ದೇಶಗಳ ಸರಕುಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುತ್ತದೆ.

ಪ್ರಸ್ತುತ ಚೀನಾ, ಭಾರತ, ಅಜೆರ್‌ಬೈಜಾನ್, ಹಂಗೇರಿ ಮತ್ತು ಸ್ಲೋವಾಕಿಯಾ, ರಷ್ಯಾದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುವ ಪ್ರಮುಖ ಐದು ದೇಶಗಳಾಗಿವೆ.

ಕಳೆದ ವಾರ ಗ್ರಹಾಂ ಅಂತ್ಯ ಸಂಸ್ಕಾರದ ಹಿನ್ನೆಲೆ ಅಮೆರಿಕಕ್ಕೆ ಭೇಟಿ ನೀಡಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕ್ಯಾಪಿಟಲ್ಸ್ ಹಿಲ್ಸ್‌ಗೂ ತೆರಳಿ ಸೆನೆಟರ್‌ಗಳನ್ನು ಭೇಟಿಯಾಗಿದ್ದರು.

ರಷ್ಯಾ ಮೇಲಿನ ನಿರ್ಬಂಧಗಳ ಜೊತೆಗೆ, ಇರಾನ್‌ನ ಇಂಧನ ವಲಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ದಂಡ ವಿಧಿಸುವ '1996ರ ಇರಾನ್ ನಿರ್ಬಂಧಗಳ ಕಾಯ್ದೆ'ಯ ಅವಧಿಯನ್ನು 2031ರವರೆಗೆ ವಿಸ್ತರಿಸುವ ಅವಕಾಶವನ್ನೂ ಈ ಮಸೂದೆ ಕಲ್ಪಿಸುತ್ತದೆ.

ಉಭಯ ಪಕ್ಷಗಳ ಬೆಂಬಲವಿದ್ದ ಈ ಮಸೂದೆಯನ್ನು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಡೆಮಾಕ್ರಟ್ ರಿಚರ್ಡ್ ಬ್ಲೂಮೆಂತಾಲ್ ಅವರು ಪ್ರಬಲವಾಗಿ ಪ್ರತಿಪಾದಿಸಿದ್ದರು.

ಗ್ರಹಾಂ ಅಕಾಲಿಕ ಮರಣದ ಬಳಿಕ ಮಸೂದೆಯನ್ನು ಅಂಗೀಕರಿಸಲು ಹಾಗೂ ಉಕ್ರೇನ್‌ನ ಮಿತ್ರರಾಗಿದ್ದ ಗ್ವಹಾಂ ಅವರ ಪರಂಪರೆಗೆ ಗೌರವ ಸಲ್ಲಿಸಲು ಉಭಯ ಪಕ್ಷಗಳ ನಾಯಕರು ಹೊಸ ಹುರುಪಿನೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ