ನವೆಂಬರ್‌ನಲ್ಲಿ ತೆರೆಗೆ ‘ಕೌಂತೇಯ’

ನವೆಂಬರ್‌ನಲ್ಲಿ ತೆರೆಗೆ ‘ಕೌಂತೇಯ’

ನವೆಂಬರ್‌ನಲ್ಲಿ ತೆರೆಗೆ ‘ಕೌಂತೇಯ’

ಮನೋರಂಜನ್‌ ರವಿಚಂದ್ರನ್‌ ಹಾಗೂ ಅಚ್ಯುತ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕೌಂತೇಯ’ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಬಿ.ಕೆ. ಚಂದ್ರಹಾಸ್‌ ನಿರ್ದೇಶನದ ಈ ಚಿತ್ರ ನವೆಂಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಶ್ರೀ ಮಹಾಕಾಳಿ ಪಿಕ್ಚರ್ಸ್‌ ಅಡಿ ಸುರೇಶ್‌ ಕುಮಾರ್‌ ನಿರ್ಮಿಸಿರುವ ಚಿತ್ರದಲ್ಲಿ ಅಚ್ಯುತ್‌ ಕುಮಾರ್‌ ನಿವೃತ್ತಿಯ ಅಂಚಿನಲ್ಲಿರುವ ಸಬ್‌ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನೋರಂಜನ್‌ ರವಿಚಂದ್ರನ್‌ ಖಳನಾಯಕನ ಛಾಯೆಯಿರುವ ಪಾತ್ರ ನಿರ್ವಹಿಸಿದ್ದಾರೆ.

ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ಚಂದ್ರಹಾಸ್‌, ‘ಕುಂತಿಪುತ್ರ ಕರ್ಣನ ಮತ್ತೊಂದು ಹೆಸರು ಕೌಂತೇಯ. ಆದರೆ, ಇದು ಪೌರಾಣಿಕ ಕಥೆಯಲ್ಲ. ಕೊಲೆ ರಹಸ್ಯದ ಸುತ್ತ ಸಾಗುವ ಕ್ರೈಮ್‌ ಥ್ರಿಲ್ಲರ್‌. ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಸದ್ಯ ರೀರೆಕಾರ್ಡಿಂಗ್‌ ಕಾರ್ಯ ನಡೆಯುತ್ತಿದ್ದು, ನವೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ’ ಎಂದರು.

‘ನನ್ನ ಪಾತ್ರದಲ್ಲಿ ನೆಗೆಟಿವ್‌ ಶೇಡ್‌ ಇದ್ದರೂ, ಅದು ಇಡೀ ಸಿನಿಮಾದುದ್ದಕ್ಕೂ ಇರುವುದಿಲ್ಲ. ಒಂದು ಪ್ರಯೋಗದ ರೀತಿಯಲ್ಲಿ ಈ ಸಿನಿಮಾ ಮಾಡಿದ್ದೇನೆ. ಹಿಂದಿನ ಸಿನಿಮಾಗಳಿಗಿಂತ ಭಿನ್ನವಾದ ಪಾತ್ರ ಇದಾಗಿದೆ’ ಎಂದು ಮನೋರಂಜನ್‌ ಹೇಳಿದರು. ಪ್ರಿಯಾಂಕ ತಿಮ್ಮೇಶ್‌ ಎಸಿಪಿ ಪಾತ್ರದಲ್ಲಿ ನಟಿಸಿದ್ದು, ‘ಬಿಗ್‌ಬಾಸ್‌’ ಖ್ಯಾತಿಯ ನೀತು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಾಘವೇಂದ್ರ ಸಂಗೀತ ನಿರ್ದೇಶನ, ಪಿ.ಎಲ್‌. ರವಿ ಛಾಯಾಚಿತ್ರಗ್ರಹಣ ಹಾಗೂ ಅನುರಂಜನ್‌ ಸಂಕಲನ ಚಿತ್ರಕ್ಕಿದೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-51-666497330

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ