ಬಿಗ್‌ಬಾಸ್‌ ಅಗ್ನಿಪರೀಕ್ಷೆಗೆ ದಿನಗಣನೆ: ತೀರ್ಪುಗಾರರಾಗಿ ಮಾಜಿ ಸ್ಪರ್ಧಿಗಳ ಆಗಮನ

ಬಿಗ್‌ಬಾಸ್‌ ಅಗ್ನಿಪರೀಕ್ಷೆಗೆ ದಿನಗಣನೆ: ತೀರ್ಪುಗಾರರಾಗಿ ಮಾಜಿ ಸ್ಪರ್ಧಿಗಳ ಆಗಮನ

ಬಿಗ್‌ಬಾಸ್‌ ಅಗ್ನಿಪರೀಕ್ಷೆಗೆ ದಿನಗಣನೆ: ತೀರ್ಪುಗಾರರಾಗಿ ಮಾಜಿ ಸ್ಪರ್ಧಿಗಳ ಆಗಮನ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್ ಸೀಸನ್ 13ರ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 16ರಂದು ಬಿಗ್‌ ಬಾಸ್‌ ಸೀಸನ್ 13 ಆರಂಭವಾಗುತ್ತಿದೆ. ಈ ಬಾರಿಯ ಸೀಸನ್‌ಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ‌ಕಾಯುತ್ತಿದ್ದಾರೆ.

ಈ ಬಾರಿಯ ವಿಶೇಷ ಏನೆಂದರೆ ಸೆಲೆಬ್ರಿಟಿಗಳು ಮಾತ್ರವಲ್ಲದೇ ಜನಸಾಮಾನ್ಯರಿಗೂ ಬಿಗ್‌ ಬಾಸ್‌ಗೆ ಹೋಗುವ ಅವಕಾಶ ಕಲ್ಪಿಸಲಾಗಿದೆ. ​​ಬಿಗ್‌ ಬಾಸ್ ಮನೆ ಸೇರುವ ಮೊದಲೇ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಲಿದೆ.

ಈ ಅಗ್ನಿಪರೀಕ್ಷೆಯನ್ನು ನಡೆಸಿಕೊಡಲು ತೀರ್ಪುಗಾರರು ಸಜ್ಜಾಗಿದ್ದು, ಅದರ ಪ್ರೋಮೊವನ್ನು ಕಲರ್ಸ್‌ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಪ್ರೋಮೊದಲ್ಲಿ ವೇದಿಕೆಗೆ ಬಿಗ್​​ ಬಾಸ್ ಮಾಜಿ ಸ್ಪರ್ಧಿಗಳ ಆಗಮನವಾಗಿದೆ. ‌

ಬಿಗ್‌ ಬಾಸ್ ಸೀಸನ್ 3ರ ವಿಜೇತೆ ಶ್ರುತಿ, ಚಂದನ್ ಶೆಟ್ಟಿ, ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ವೇದಿಕೆಗೆ ಆಗಮಿಸಿದ್ದಾರೆ. ಈ ನಾಲ್ಕು ಮಂದಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದು, ಇವರೊಂದಿಗೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ನಿರಂಜನ್‌ ದೇಶಪಾಂಡೆ ಅವರು ನಿರೂಪಣೆ ಜವಬ್ದಾರಿ ವಹಿಸಿಕೊಂಡಿದ್ದಾರೆ.

ಇದೇ ಆಗಸ್ಟ್ 16ರಂದು ರಾತ್ರಿ 9 ಗಂಟೆಗೆ ಬಿಗ್‌ಬಾಸ್‌ ಅಗ್ನಿಪರೀಕ್ಷೆ ಸಂಚಿಕೆ ಪ್ರಸಾರವಾಗಲಿದ್ದು, ಹೀಗಾಗಿ ಯಾರೆಲ್ಲಾ ಸ್ಪರ್ಧಿಗಳಾಗಿ ಬಿಗ್‌ಬಾಸ್‌ ಮನೆಗೆ ಬರಲಿದ್ದಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ