ಗ್ರಂಥಾಲಯ ಹಿಂಭಾಗದಲ್ಲಿ ಕಸದ ರಾಶಿ: ಕ್ರಮಕ್ಕೆ ಆಗ್ರಹ

ಗ್ರಂಥಾಲಯ ಹಿಂಭಾಗದಲ್ಲಿ ಕಸದ ರಾಶಿ: ಕ್ರಮಕ್ಕೆ ಆಗ್ರಹ

ಗ್ರಂಥಾಲಯ ಹಿಂಭಾಗದಲ್ಲಿ ಕಸದ ರಾಶಿ: ಕ್ರಮಕ್ಕೆ ಆಗ್ರಹ

ತುಮಕೂರಿನ ಎಸ್‌ಐಟಿ ಬಡಾವಣೆಯ 23ನೇ ಕ್ರಾಸ್‌ನಲ್ಲಿರುವ ಗ್ರಂಥಾಲಯ ಹಿಂಭಾಗದ ರಸ್ತೆಯಲ್ಲಿ ಕಸ ಸುರಿಯಲಾಗುತ್ತಿದೆ.

ಯಾರು ಕಸ ತಂದು ಇಲ್ಲಿ ಸುರಿಯುತ್ತಾರೆ ಎಂಬುದು ಗೊತ್ತಿಲ್ಲ. ರಸ್ತೆಯ ಜಾಗ ಕಸದ ತೊಟ್ಟಿಯಂತೆ ಗೋಚರಿಸುತ್ತಿದೆ. ಗ್ರಂಥಾಲಯದಲ್ಲಿ ಓದುವವರಿಗೆ, ರಸ್ತೆ ಪಕ್ಕದಲ್ಲಿ ಓಡಾಡುವವರಿಗೆ ತುಂಬಾ ಕಿರಿಕಿರಿ ಎನಿಸುತ್ತಿದೆ. ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಬೇಕು. ರಸ್ತೆ ಪೂರ್ಣ ಬಂದ್‌ ಮಾಡಿ ಸಾರ್ವಜನಿಕ ಬಳಕೆಗೆ ನೀಡಬೇಕು. ಇಲ್ಲಿ ಉದ್ಯಾನ, ಗ್ರಂಥಾಲಯ ವಿಸ್ತರಣೆ, ಆರೋಗ್ಯ ಕೇಂದ್ರ, ಅಂಚೆ ಕಚೇರಿ ಮಾಡಬಹುದು. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.

ಬಾ.ಹ.ರಮಾಕುಮಾರಿ, ಅಕ್ಷತಾ, ಜಯಮ್ಮ, ಶಿವಕುಮಾರ್‌, ಬಡಾವಣೆ ನಿವಾಸಿಗಳು

ತುಮಕೂರಿನ ಅಮರಜ್ಯೋತಿ ನಗರದ ನಾಲ್ಕನೇ ಅಡ್ಡ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಅಗೆದ ಮಣ್ಣನ್ನು ರಸ್ತೆ ಬದಿಯಲ್ಲಿಯೇ ಬಿಡಲಾಗಿದೆ. ಇದು ವಾಹನಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ.

ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಣ್ಣ ಮಳೆ ಸುರಿದರೆ ಮಣ್ಣು ಪೂರ್ತಿ ರಸ್ತೆಗೆ ಸರಿಯುತ್ತದೆ. ಇದರಿಂದ ರಸ್ತೆ ಸಂಪೂರ್ಣವಾಗಿ ಬಂದ್‌ ಆಗಲಿದೆ. ಇದಕ್ಕೆ ಆಸ್ಪದ ನೀಡದಂತೆ ಕ್ರಮ ಜರುಗಿಸಬೇಕು. ಆದಷ್ಟು ಬೇಗ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು.

ಎಂ.ಸದಾಶಿವ, ಅಮರಜ್ಯೋತಿ ನಗರ

ಚರಂಡಿ ದುರಸ್ತಿಗೆ ಒತ್ತಾಯ

ಕುಣಿಗಲ್‌ ತಾಲ್ಲೂಕಿನ ನಡೆಮಾವಿನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುವ್ವೇಕೆರೆ ಕಾಲೊನಿಯಲ್ಲಿ (ಭೀಮನ ಪಾಳ್ಯ) ಚರಂಡಿ ನಿರ್ಮಿಸಿದ್ದರೂ ನಿರ್ವಹಣೆ ಸರಿಯಾಗಿಲ್ಲ.

ಚರಂಡಿಯಲ್ಲಿ ಗಿಡಗಳು ಬೆಳೆದಿದ್ದು, ತೆರವಿಗೆ ಮುಂದಾಗಿಲ್ಲ. ಗ್ರಾ.ಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವರ್ಷಗಳು ಕಳೆದರೂ ಕ್ರಮ ತೆಗೆದುಕೊಂಡಿಲ್ಲ. ಮಳೆ ಬಂದರೆ ರಸ್ತೆ ಮೇಲೆ ನೀರು ಹರಿಯುತ್ತದೆ. ಕಲುಷಿತ ನೀರು ನಿಂತಲ್ಲಿಯೇ ನಿಂತು ಕೆಟ್ಟ ವಾಸನೆ ಬೀರುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ಹರಡುವ ಭೀತಿ ಇದೆ. ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಚರಂಡಿ ಸ್ವಚ್ಛಗೊಳಿಸಬೇಕು.

ಗ್ರಾಮಸ್ಥರು, ತುವ್ವೇಕೆರೆ ಕಾಲೊನಿ

ವಿದ್ಯುತ್‌ ದೀಪ ಅಳವಡಿಸಿ

ಪಾವಗಡ ತಾಲ್ಲೂಕಿನ ನಿಡಗಲ್‌ ಹೋಬಳಿ ಕೊತ್ತೂರಿನಲ್ಲಿ ಚರಂಡಿ ಅಧ್ವಾನವಾಗಿದೆ. ಕಂಬಗಳಿಗೆ ವಿದ್ಯುತ್‌ ದೀಪವನ್ನೂ ಅಳವಡಿಸಿಲ್ಲ.

ಕಸ, ಕಡ್ಡಿ, ಬಾಟಲಿಗಳಿಂದ ಚರಂಡಿ ತುಂಬಿಕೊಂಡಿದೆ. ಮಳೆ ನೀರು ಸರಾಗವಾಗಿ ಮುಂದಕ್ಕೆ ಹರಿಯಲು ಆಗದೆ ರಸ್ತೆಗೆ ನುಗ್ಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ವಿದ್ಯುತ್‌ ಕಂಬಗಳು ಹೆಸರಿಗೆ ಮಾತ್ರ ಇವೆ. ಕಂಬಗಳಿಗೆ ವಿದ್ಯುತ್‌ ದೀಪ ಹಾಕಿಲ್ಲ. ಸಂಜೆಯಾದರೆ ಮುಖ್ಯರಸ್ತೆಯಲ್ಲಿ ಕತ್ತಲು ಆವರಿಸುತ್ತದೆ. ಗ್ರಾಮಸ್ಥರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-17-2068247935

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ