
ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ, ಯಾವ ಭಾಗದಲ್ಲಿ ಎಷ್ಟು?
ಬೆಂಗಳೂರು: ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೇ ಮಲೆನಾಡಿನ ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಘಟಕ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲುವಿನಲ್ಲಿ 71 ಮಿ.ಮೀ, ಶಿಬಾಜೆಯಲ್ಲಿ 57.5 ಮಿ.ಮೀ ಹಾಗೂ ಕಳಂಜದಲ್ಲಿ 49 ಮಿ.ಮೀ ಮಳೆ ದಾಖಲಾಗಿದೆ.
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕೆರ್ವಾಶೆಯಲ್ಲಿ 48 ಮಿ.ಮೀ. ಬೆಳ್ತಂಗಡಿ ತಾಲ್ಲೂಕಿ ಸುಳ್ಕೇರಿಯಲ್ಲಿ 46 ಮಿ.ಮೀ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ನೀಲಕುಂದದಲ್ಲಿ 45.5 ಮಿ.ಮೀ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 45.4. ಮಿ.ಮೀ ಮಳೆಯಾಗಿದೆ.
ಬಂಟ್ವಾಳ ತಾಲ್ಲೂಕಿನ ಬಾಳೆಪುಣಿಯಲ್ಲಿ 41.5 ಮಿ.ಮೀ, ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ನೀರೆಯಲ್ಲಿ ತಲಾ 37.5 ಮಿ.ಮೀ, ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಸಾಲ್ಕಣಿಯಲ್ಲಿ 36.5 ಮಿ.ಮೀ, ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿಯಲ್ಲಿ 36 ಮಿ.ಮೀ ಮಳೆಯಾಗಿದೆ.
ಧರ್ಮಸ್ಥಳದಲ್ಲಿ 34.5 ಮಿ.ಮೀ, ಕುಂದಾಪುರ ತಾಲ್ಲೂಕಿನ ಮದಲಮಕ್ಕಿಯಲ್ಲಿ 33 ಮಿ.ಮೀ, ಸುಳ್ಯ ತಾಲ್ಲೂಕಿನ ಹರಿಹರ ಪಲ್ಲತಡ್ಕದಲ್ಲಿ 32.5 ಮಿ.ಮೀ, ಮಡಿಕೇರಿ ತಾಲ್ಲೂಕಿನ ಚೆಂಬು ಹಾಗೂ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೈರಕುಂದದಲ್ಲಿ ತಲಾ 32 ಮಿ.ಮೀ ಮಳೆಯಾಗಿದೆ.
ಹೊಸನಗರ ತಾಲ್ಲೂಕಿನ ಕರಿಮನೆ ಹಾಗೂ ಬಂಟ್ವಾಳ ತಾಲ್ಲೂಕಿನ ಚೆನ್ನೈತೋಡಿ, ಕುರ್ನಾಡು, ಬಳಂಜದಲ್ಲಿ ತಲಾ 31.5 ಮಿ.ಮೀ, ಬಂಟ್ವಾಳ ತಾಲ್ಲೂಕಿನ ಕುಕ್ಕಿಪಾಡಿ, ಸಾಜಿಪಪಡು, ಕೊಲ್ನಾಡುವಿನಲ್ಲಿ ತಲಾ 31 ಮಿ.ಮೀ ಮಳೆಯಾಗಿದೆ.
ಬೆಳ್ತಂಗಡಿ ತಾಲ್ಲೂಕಿನ ಕೊಯ್ಯಾರು, ಸುಳ್ಯ ತಾಲ್ಲೂಕು ಅಲೆಟ್ಟಿಯಲ್ಲಿ ತಲಾ 30.5 ಮಿ.ಮೀ, ಬೆಳ್ತಂಗಡಿ ತಾಲ್ಲೂಕಿನ ಕನ್ಯಾನ, ಕೊಡಗಿನ ಸಂಪಾಜೆ, ಸುಳ್ಯದ ಅಜ್ಜಾವರ ಹಾಗೂ ಕಾರ್ಕಳ ತಾಲ್ಲೂಕಿನ ಕಾಂತಾವರದಲ್ಲಿ ತಲಾ 30 ಮಿ.ಮೀ ಮಳೆಯಾಗಿದೆ.