ರಾಮನಗರ: ಪಾಳು ಬಿದ್ದ ಬಸ್ ತಂಗುದಾಣ, ಪ್ರಯಾಣಿಕರ ಪರದಾಟ

ರಾಮನಗರ: ಪಾಳು ಬಿದ್ದ ಬಸ್ ತಂಗುದಾಣ, ಪ್ರಯಾಣಿಕರ ಪರದಾಟ

ರಾಮನಗರ: ಪಾಳು ಬಿದ್ದ ಬಸ್ ತಂಗುದಾಣ, ಪ್ರಯಾಣಿಕರ ಪರದಾಟ

ರಾಮನಗರ: ಆ ಊರಿನ ಜನರು ನಿತ್ಯ ಓಡಾಡಲು ಬಸ್ ಅಥವಾ ಖಾಸಗಿ ಪ್ರಯಾಣಿಕ ವಾಹನಗಳನ್ನೇ ಅವಲಂಬಿಸಿದ್ದಾರೆ. ಬಸ್‌ ಹತ್ತುವುದಕ್ಕಾಗಿ ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯಲ್ಲಿ ಬಸ್ ಅಥವಾ ಖಾಸಗಿ ಪ್ರಯಾಣಿಕ ವಾಹನಗಳು ನಿಲ್ಲುವ ಜಾಗಕ್ಕೆ ಬರುವ ಜನರು, ಪಕ್ಕದಲ್ಲೇ ಇರುವ ಬಸ್ ತಂಗುದಾಣಕ್ಕೆ ಹೋಗದೆ ಹೊರಗಡೆಯೇ ನಿಲ್ಲುತ್ತಾರೆ. ಮಳೆ ಬಂದರೂ ಒಳಗೆ ಹೋಗದೆ ನೆನೆಯುತ್ತಾರೆ.

ಇಂತಹದ್ದೊಂದು ದೃಶ್ಯ ಕಂಡುಬಂದಿದ್ದು ನಗರದ ಹೊರವಲಯದಲ್ಲಿ ಬೆಂಗಳೂರು–ಮೈಸೂರು ಹಳೆ ಹೆದ್ದಾರಿಗೆ ಹೊಂದಿಕೊಂಡಂತಿರುವ ಕುಂಬಾಪುರ ಕಾಲೊನಿ ಗೇಟ್‌ನ ಬಸ್ ತಂಗುದಾಣದ ಬಳಿ. ಅದಕ್ಕೆ ಕಾರಣವಿಷ್ಟೆ. ಒಂದು ಕಾಲದಲ್ಲಿ ಬಸ್ ಪ್ರಯಾಣಿಕರು ಆರಾಮವಾಗಿ ಕುಳಿತು ಬಿಸಿಲು ಮತ್ತು ಮಳೆಯಿಂದ ರಕ್ಷಣೆಗೆ ಆಸರೆಯಾಗಿದ್ದ ಅಲ್ಲಿನ ತಂಗುದಾಣ ಒಳಕ್ಕೆ ಕಾಲಿಡಲಾಗದಂತೆ ಪಾಳು ಬಿದ್ದಿದೆ.

ಶಿಥಿಲಾವಸ್ಥೆ ತಲುಪಿರುವನ ತಂಗುದಾಣ ಕಟ್ಟಡದ ಮುಂಭಾಗ ಸೇರಿದಂತೆ ಸುತ್ತಲೂ ಕಳೆಗಳು ಬೆಳೆದಿವೆ. ಒಳಗಡೆ ಬಿಯರ್ ಬಾಟಲಿ, ಮದ್ಯದ ಪಾಕೆಟ್, ಒಡೆದ ಗಾಜುಗಳು, ಸುಟ್ಟ ಪೇಪರ್‌ಗಳ ಬೂದಿ, ಮಲಮೂತ್ರ ವಿಸರ್ಜನೆಯ ಗಬ್ಬು ವಾಸನೆಯೊಂದಿಗೆ ಒಳಭಾಗದಲ್ಲಿ ಕಸ ತುಂಬಿದೆ. ಅದೇ ಕಾರಣಕ್ಕೆ ಬಸ್‌ ಅಥವಾ ವಾಹನಗಳಿಗಾಗಿ ಕಾಯುವ ಜನರು ತಂಗುದಾಣದ ಒಳಕ್ಕೆ ಹೋಗದೆ ಹೊರಗಡೆಯೇ ನಿಲ್ಲುತ್ತಾರೆ.

ಇದೊಂದೇ ಅಲ್ಲ: ನಿರ್ವಹಣೆ ಇಲ್ಲದೆ ಅಧೋಗತಿ ತಲುಪಿರುವ ತಂಗುದಾಣ ಕೇವಲ ಕುಂಬಾಪುರ ಕಾಲೊನಿ ಗೇಟ್‌ಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ನಗರದಿಂದ ಬೆಂಗಳೂರು ಕಡೆಗೆ ಹೋಗುವಾಗ ಸಿಗುವ ಹೊರವಲಯದ ಬಸವನಪುರದಿಂದಿಡಿದು, ಚನ್ನಪಟ್ಟಣ ಮಾರ್ಗದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುವರೆಗೆ ಸುಮಾರು ಏಳೆಂಟು ಕಿ.ಮೀ. ದೂರದಲ್ಲಿ ಅಲ್ಲಲ್ಲಿ ಸಿಗುವ ತಂಗುದಾಣಗಳ ಸ್ಥಿತಿ ಶೋಚನೀಯವಾಗಿದೆ.

ಬಸವನಪುರ, ವಡೇರಹಳ್ಳಿ, ಕುಂಬಾಪುರ ಗೇಟ್ ಕಾಲೊನಿ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಎದುರು ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಹಿಂದಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿದ್ದ ಬಸ್ ತಂಗುದಾಣಗಳು ವರ್ಷಗಳಿಂದ ನಿರ್ವಹಣೆ ಕಾಣದ ಅವಸಾನದ ಅಂಚಿಗೆ ತಲುಪಿವೆ.

ಹೊಸ ಹೆದ್ದಾರಿ ಬಂದ ಬಳಿಕ ನಿರ್ಲಕ್ಷ್ಯ

‘ಬೆಂಗಳೂರು–ಮೈಸೂರು ಹಳೆ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ನಗರದ ಹೊರಭಾಗದಲ್ಲಿ ನೂತನ ಹೆದ್ದಾರಿ ನಿರ್ಮಿಸಿದ ಬಳಿಕ ಹಳೆ ಹೆದ್ದಾರಿಯಲ್ಲಿದ್ದ ಹಲವು ಬಸ್ ತಂಗುದಾಣಗಳು ಪಾಳು ಬಿದ್ದಂತಿವೆ. ಹೊಸ ಹೆದ್ದಾರಿ ಬಂದ ಬಳಿಕ ಹಳೆ ಹೆದ್ದಾರಿಯ ನಿರ್ವಹಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆಯು ರಸ್ತೆ ಬದಿ ನಿರ್ಮಿಸಿರುವ ತಂಗುದಾಣಗಳ ನಿರ್ವಹಣೆಯನ್ನು ಮರೆತಿದೆ’ ಎಂದು ನಿವೃತ್ತ ಸರ್ಕಾರಿ ನೌಕರರ ಮಲ್ಲರಾಜೇ ಅರಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-14-357037077

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ