ಸಿಂಧನೂರು: ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ

ಸಿಂಧನೂರು: ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ

ಸಿಂಧನೂರು: ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ

ಸಿಂಧನೂರು: ತಾಲ್ಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಜಿಲ್ಲೆಯ ದೇವದುರ್ಗ, ಮಸ್ಕಿ, ಅರಕೇರಾ, ಲಿಂಗಸುಗೂರು ಹಾಗೂ ರಾಯಚೂರು ತಾಲ್ಲೂಕು ಗಳನ್ನಷ್ಟೇ ಸರ್ಕಾರ ಪರಿಗಣಿಸಿದೆ. ಆಗಸ್ಟ್ ಮುಗಿಯುತ್ತ ಬಂದರೂ ಜಮೀನಿನಲ್ಲಿ ಶೇ 10 ರಷ್ಟೂ ಬೆಳೆ ಇಲ್ಲ. ಸಿಂಧನೂರು ಸೇರ್ಪಡೆ ಮಾಡದೇ ಈ ಭಾಗದ ರೈತರಿಗೆ ಸರ್ಕಾರ ದ್ರೋಹ ಎಸಗಿದೆ. ಕೂಡಲೇ ಈ ತಾಲ್ಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂಬುದು ರೈತಪರ ಸಂಘಟನೆಗಳ ಆಗ್ರಹ.

ತಾಲ್ಲೂಕಿನಲ್ಲಿ ಒಟ್ಟು 99,345 ಹೆಕ್ಟೇರ್ ಕೃಷಿ ಪ್ರದೇಶ ಇದ್ದು, ಪ್ರಸಕ್ತ ವರ್ಷ ಭತ್ತ 780 ಹೆಕ್ಟೇರ್, ತೊಗರಿ 5,848 ಹೆಕ್ಟೇರ್, ಹತ್ತಿ 2,878 ಹೆಕ್ಟೇರ್, ಸೂರ್ಯಕಾಂತಿ 6,132 ಹೆಕ್ಟೇರ್ ಸೇರಿ ಒಟ್ಟು 16,818 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಇಲ್ಲಿಯವರೆಗೆ ಬಿತ್ತನೆಯಾಗಿದೆ.

ಜೂನ್ 1ರಿಂದ ಆಗಸ್ಟ್ ಕೊನೆಯವರೆಗೆ 220 ಮಿ.ಮೀ ಮಳೆಯಾಗಬೇಕಿತ್ತು. ಕೇವಲ 103 ಮಿ.ಮೀ ಆಗಿದ್ದು, ಶೇ 53ರಷ್ಟು ಮಳೆ ಕೊರತೆಯಾಗಿದೆ. ರೈತ ಸಂಘಟನೆಗಳ ಹಾಗೂ ವಿವಿಧ ಜನಪರ ಸಂಘಟನೆಗಳ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಗೆ ಆಗಸ್ಟ್ 11ರಂದು ನೀರು ಹರಿಬಿಡಲಾಗಿತ್ತು. ಆದರೆ, ನೀರು ತಾಲ್ಲೂಕಿನ ಮುಖ್ಯ ಕಾಲುವೆಗೆ ತಲುಪಿದ್ದು ಮಾತ್ರ ಆಗಸ್ಟ್ 19ಕ್ಕೆ ಇದರಿಂದ ರೈತರು ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ.

‘ತಾಲ್ಲೂಕಿನ ಶೇ 20ರಷ್ಟು ಭೂಮಿಗೂ ಇದುವರೆಗೆ ನೀರು ದೊರೆತಿಲ್ಲ. ಈ ಬಾರಿ ಮುಂಗಾರು ಮಳೆಯಾಗದೇ ಇರುವುದು ಮತ್ತು ವಿಳಂಬವಾಗಿ ಎಡದಂಡೆ ನಾಲೆಗೆ ನೀರು ಹರಿಸಿದ್ದರಿಂದ ತೇವಾಂಶದ ಕೊರತೆಯಿಂದಾಗಿ 3 ತಾಸಿಗೆ ಒಂದು ಎಕರೆ ಜಮೀನು ತೊಯ್ಯುತ್ತದೆ. 1 ಎಕರೆ ತೊಯ್ಯುವಷ್ಟರಲ್ಲಿ ರೈತರ ಪಾಳೆ ಮುಗಿದಿರುತ್ತದೆ. ಇನ್ನೊಂದು ಎಕರೆ ನೀರು ತುಂಬಿಸಲು ಪುನಃ ಒಂದು ವಾರ ಕಾಯಬೇಕು’ ಎಂದು ಚಿರತ್ನಾಳ ಗ್ರಾಮದ ರೈತ ಮಲ್ಲಪ್ಪ, ದೇವರಗುಡಿ ಗ್ರಾಮದ ಶರಣಪ್ಪ ಅಳಲು ತೋಡಿಕೊಂಡರು.

‘ತಾಲ್ಲೂಕಿನ ಬಾದರ್ಲಿ, ಗುಂಜಳ್ಳಿ, ಹೆಡಗಿನಾಳ, ಹುಡಾ, ಸಾಲಗುಂದಾ, ತುರ್ವಿಹಾಳ, ವಲ್ಕಂದಿನ್ನಿ ಹೋಬಳಿಗಳ ವ್ಯಾಪ್ತಿಯ ಹಲವು ಗ್ರಾಮಗಳ ರೈತರು ಮಳೆಯಾಶ್ರಿತ ಕೃಷಿಯನ್ನು ಅವಲಂಬಿಸಿದ್ದಾರೆ. ಕೊನೆ ಭಾಗದ ಪ್ರದೇಶಗಳಾದ ಬಾದರ್ಲಿ, ಹರೇಟನೂರು, ಆಯನೂರು, ರಾಗಲಪರ್ವಿ, ಧುಮುತಿ, ಗೋನವಾರ, ಯಾಪಲಪರ್ವಿ ಮತ್ತಿತರ ಗ್ರಾಮಗಳಲ್ಲಿ ಇಲ್ಲಿಯವರೆಗೂ ಯಾವುದೇ ಬೆಳೆ ಬಿತ್ತನೆ ಆಗಿಲ್ಲ. ಆದ್ದರಿಂದ ಸಿಂಧನೂರು ಬರಪೀಡಿತ ಪ್ರದೇಶ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು’ ಎಂದು ಅಖಿಲ ಭಾರತ ಕಿಸಾನ್ ಸಭಾದ ಮುಖಂಡ ಚಂದ್ರಶೇಖರ ಕ್ಯಾತ್ನಟ್ಟಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಚುನಪ್ಪ ಪೂಜೇರಿ ಬಣ) ರಾಜ್ಯ ಕಾರ್ಯದರ್ಶಿ ಶರಣಪ್ಪ ಮಳ್ಳಿ, ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ ಭೇರ್ಗಿ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-32-2005347023

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ