
ಮಕ್ಕಳಲ್ಲಿ ದುಶ್ಚಟ ತಡೆಯಲು ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ
ದೇವರಹಿಪ್ಪರಗಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳು ಬಾಲ್ಯದಲ್ಲಿ ತಪ್ಪು ಮಾಡಿದಾಗ ಶಿಕ್ಷಕರು, ಪಾಲಕರು ಅವರಿಗೆ ಬುದ್ಧಿ ಮಾತುಗಳ ಮೂಲಕ ತಿದ್ದಿ ಸರಿಯಾದ ದಾರಿಗೆ ತರಬೇಕು ಎಂದು ಮುಖ್ಯಶಿಕ್ಷಕ ಅಶೋಕ ಹೊಸಗೌಡ್ರ ಹೇಳಿದರು.
ತಾಲ್ಲೂಕಿನ ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಜರುಗಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ದುಶ್ಚಟಗಳನ್ನು ತಡೆಯುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಅಗತ್ಯವಾಗಿವೆ. ಸರ್ಕಾರ ಮಾಡದ ಜಾಗೃತಿ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ಅಬ್ದುಲ್ ರಜಾಕ್ ನದಾಫ್, ವಲಯ ಮೇಲ್ವಿಚಾರಕಿ ಸವಿತಾ ಪೂಜಾರಿ ಮಾತನಾಡಿದರು.
ಶಾಲಾ ಸಿಬ್ಬಂದಿ ಎಂ.ಎಸ್. ಬಗಲಿ, ಬಿ.ಎಸ್.ಅಗಸಬಾಳ, ಸುನೀತಾ ಕೆ. ಬಸವರಾಜ ಕಮತರ, ಎಸ್.ಎಸ್.ಮಲ್ಲೇದ, ಜಿ.ಆರ್.ಕುಂಬಾರ, ಎನ್.ಬಿ.ಬಿರಾದಾರ, ಸೇವಾಪ್ರತಿನಿಧಿಗಳಾದ ಪ್ರೀಯಾಂಕ, ಶ್ರೀಗೌರಿ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-26-2035112066