
ಫಾರ್ಚೂನರ್‌ನಲ್ಲಿ ಬಂದು ಪೊರಕೆ ಹಿಡಿಯುವ ಪೌರ ಕಾರ್ಮಿಕ:ಬಂಟ್ವಾಳದ ಸೇಸಪ್ಪಣ್ಣನ ಕತೆ
ಫಾರ್ಚೂನರ್ ಕಾರಿನಲ್ಲಿ ಕೆಲಸಕ್ಕೆ ಬರುವ ಪೌರ ಕಾರ್ಮಿಕರನ್ನು ನೋಡಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುರಸಭೆಯ ಪೌರ ಕಾರ್ಮಿಕ ಸೇಸಪ್ಪಣ್ಣ ಅವರು ಪ್ರತಿದಿನ ಫಾರ್ಚೂನರ್ ಕಾರಿನಲ್ಲಿ ಕೆಲಸಕ್ಕೆ ಬಂದು, ಪೊರಕೆ ಹಿಡಿದು ಬೀದಿ ಬದಿಯ ಕಸ ಗುಡಿಸುತ್ತಾರೆ. ಸುಮಾರು 30 ವರ್ಷಗಳ ಹಿಂದೆ ದಿನಗೂಲಿ ಪೌರ ಕಾರ್ಮಿಕರಾಗಿ ಕೆಲಸ ಆರಂಭಿಸಿದ ಅವರು, ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಂಡಿದ್ದಾರೆ. ಮದ್ಯವ್ಯಸನ ತ್ಯಜಿಸಿ ದುಡಿಮೆಯನ್ನೇ ನಂಬಿಕೊಂಡ ಸೇಸಪ್ಪಣ್ಣ, ತಮ್ಮ ಪರಿಶ್ರಮದ ಹಣದಿಂದ ಸೆಕೆಂಡ್‌ಹ್ಯಾಂಡ್ ಫಾರ್ಚೂನರ್ ಖರೀದಿಸಿದ್ದಾರೆ. ಅವರ ಕಾರಿನ ಮೇಲಿನ ಆಸಕ್ತಿ, ಸರಳ ಜೀವನ ಮತ್ತು ಪರಿಶ್ರಮದ ಹಿಂದಿರುವ ಕಥೆ ಇಲ್ಲಿದೆ.