ಬಿಗ್‌ಬಾಸ್ ಅಗ್ನಿಪರೀಕ್ಷೆಗೆ ವಿದಾಯ...ಭಾವುಕ ಧ್ವನಿಯಲ್ಲಿ ಕುಮಾರಿ ಹೇಳಿದ್ದಿಷ್ಟು

ಬಿಗ್‌ಬಾಸ್ ಅಗ್ನಿಪರೀಕ್ಷೆಗೆ ವಿದಾಯ...ಭಾವುಕ ಧ್ವನಿಯಲ್ಲಿ ಕುಮಾರಿ ಹೇಳಿದ್ದಿಷ್ಟು

ಬಿಗ್‌ಬಾಸ್ ಅಗ್ನಿಪರೀಕ್ಷೆಗೆ ವಿದಾಯ...ಭಾವುಕ ಧ್ವನಿಯಲ್ಲಿ ಕುಮಾರಿ ಹೇಳಿದ್ದಿಷ್ಟು

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 13’ಕ್ಕೆ ಹೋಗಲು ಜನಸಾಮಾನ್ಯರು ಹೋರಾಟ ನಡೆಸುತ್ತಿದ್ದಾರೆ. ಬಿಗ್ ಬಾಸ್ ಅಗ್ನಿಪರೀಕ್ಷೆಯ ವೇಳೆ ಆಯ್ಕೆಯಾದ ಜನಸಾಮಾನ್ಯರಿಗೆ ತೀರ್ಪುಗಾರರು ಟಾಸ್ಕ್‌ಗಳನ್ನು ಕೊಟ್ಟಿದ್ದರು. ಬಳಿಕ ವೀಕ್ಷಕರು ತಮ್ಮ ವೋಟಿಂಗ್ ಮೂಲಕ ಬಿಗ್‌ಬಾಸ್ ಮನೆಗೆ ಯಾರು ಸೂಕ್ತ ಎಂದು ಆಯ್ಕೆ ಮಾಡುತ್ತಿದ್ದಾರೆ. 

ಈ ನಡುವೆ ವೀಕ್ಷಕರು ಹಾಗೂ ತೀರ್ಪುಗಾರರ ಮನಗೆದ್ದಿದ್ದ ಹಳ್ಳಿ ಪ್ರತಿಭೆ ಕುಮಾರಿ ಅವರು ಬಿಗ್‌ ಬಾಸ್‌ ಶೋನಿಂದ ಹೊರಬಿದ್ದಿರುವುದಾಗಿ ಕಲರ್ಸ್ ಕನ್ನಡ ಪ್ರೋಮೊ ಒಂದನ್ನು ಹಂಚಿಕೊಂಡಿದೆ. ಮಾತ್ರವಲ್ಲದೆ, ಒಕ್ಕಣೆಯಲ್ಲಿ ಅಗ್ನಿಪರೀಕ್ಷೆಯಿಂದ ಕುಮಾರಿ ವಿದಾಯ... ಎಂದು ಬರೆದಿದೆ. ಸದ್ಯ ಈ ಸುದ್ದಿ ಕುಮಾರಿ ಅವರ ಅಭಿಮಾನಿಗಳಲ್ಲಿ ನಿರಾಶೆಯನ್ನುಂಟು ಮಾಡಿದೆ.

ಕುಮಾರಿ ಅವರು ತಮ್ಮ ಮಾತಿನ ಕೌಶಲ್ಯ ಹಾಗೂ ಮುಗ್ಧತೆಯಿಂದ ತೀರ್ಪುಗಾರರ ಮನಗೆದ್ದಿದ್ದರು. ಇದಕ್ಕಾಗಿ ಅವರನ್ನು ‘ಸ್ಟಾರ್ ಸ್ಪರ್ಧಿ’ ಎಂದು ಘೋಷಿಸಲಾಗಿತ್ತು. ಬಳಿಕ ಸಹ ಸ್ಪರ್ಧಿ ಪೂರ್ಣಿಮಾ ಅವರೊಂದಿಗೆ ಬಲೂನ್ ಒಡೆಯುವ ಟಾಸ್ಕ್ ಕೊಟ್ಟಿದ್ದರು. ಟಾಸ್ಕ್ ಶುರುವಾಗುತ್ತಿದ್ದಂತೆ ಪೂರ್ಣಿಮಾ ಅವರು ಕುಮಾರಿಯನ್ನು ತಳ್ಳಿ ಬಲೂನ್ ಅನ್ನು ಒಡೆದು ಹಾಕಿದ್ದರು. ಈ ವೇಳೆ ಏಕಾಏಕಿ ತಲೆ ಸುತ್ತಿ ಕುಮಾರಿ ಕೆಳಗೆ ಬಿದ್ದಿದ್ದಳು. ಆ ಕೂಡಲೇ ಟಾಸ್ಕ್ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.

ಈ ಘಟನೆಯ ಬಳಿಕ ಕುಮಾರಿ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ವಿಡಿಯೊ ಮೂಲಕ ವೋಟ್ ಮಾಡುವಂತೆ ವೀಕ್ಷಕರನ್ನು ಕೇಳಿಕೊಂಡಿದ್ದರು. ನೆನ್ನೆಯಿಂದ ವೋಟಿಂಗ್ ಲಿಸ್ಟ್‌ನಲ್ಲಿಯೂ ಕುಮಾರಿ ಅವರ ಹೆಸರನ್ನು ತೆಗೆದುಹಾಕಲಾಗಿತ್ತು. ಇದಕ್ಕೆ ಕಾರಣವೇನು? ಎಂಬುದನ್ನು ವಾಹಿನಿಯು ಪ್ರೋಮೊ ಮೂಲಕ ತಿಳಿಸಿದೆ.‌

ಪ್ರೋಮೊದಲ್ಲಿ ಹೇಳಿರುವಂತೆ, ಸದ್ಯ ಕುಮಾರಿ ಅವರಿಗೆ ಆರೋಗ್ಯದ ಸಮಸ್ಯೆ ಇದೆ. ಈ ಕಾರಣದಿಂದಾಗಿ ಅವರು ಆಟ ಆಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹಾಗಾಗಿ ಬಿಗ್ ಬಾಸ್ ‘ಅಗ್ನಿ ಪರೀಕ್ಷೆ’ಯಿಂದ ಕುಮಾರಿ ಹೊರಬಿದ್ದಿದ್ದಾರೆ.

ಕೊನೆಯ ಬಾರಿ ಬಿಗ್‌ ಬಾಸ್ ‘ಅಗ್ನಿ ಪರೀಕ್ಷೆ’ಯ ವೇದಿಕೆ ಮೇಲೆ ಮಾತನಾಡಿರುವ ಕುಮಾರಿ ಅವರು, ‘ನಾನು ಈವರೆಗೆ ಎಂದಿಗೂ ಬೆಂಗಳೂರನ್ನು ನೋಡಿರಲಿಲ್ಲ. ಆದ್ದರಿಂದ ನಾನು ಇಲ್ಲಿದ್ದ ಇಷ್ಟು ದಿನವನ್ನು ಎಂಜಾಯ್ ಮಾಡಿದ್ದೇನೆ. ಮತ್ತೆ ಯಾವಾಗ ಬೆಂಗಳೂರಿಗೆ ಬರುತ್ತೇನೆ ಎಂಬುದು ಗೊತ್ತಿಲ್ಲ. ನನ್ನ ಬಿಗ್‌ ಬಾಸ್ ಜರ್ನಿ ಕೊನೆಯಾಗುತ್ತಿದೆ ಎಂಬ ಬೇಸರವಿದೆ’ ಎಂದು ಭಾವುಕವಾಗಿದ್ದಾರೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ