ಕಾವೇರಿ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಎಂ.ಜಿ.ಬೆಳ್ಳಿಯಪ್ಪ ಆಯ್ಕೆ

ಕಾವೇರಿ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಎಂ.ಜಿ.ಬೆಳ್ಳಿಯಪ್ಪ ಆಯ್ಕೆ

ಕಾವೇರಿ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಎಂ.ಜಿ.ಬೆಳ್ಳಿಯಪ್ಪ ಆಯ್ಕೆ

ಗೋಣಿಕೊಪ್ಪಲು: ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಸಂಘದ ಉಪಾಧ್ಯಕ್ಷರಾಗಿ ತೃತೀಯ ಬಿ.ಕಾಂ ವಿದ್ಯಾರ್ಥಿ ಎರಂ.ಜಿ.ಬೆಳ್ಳಿಯಪ್ಪ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ತೃತೀಯ ಬಿಸಿಎ ವಿದ್ಯಾರ್ಥಿನಿ ಪ್ರಿನ್ಸಿ ದೇವಮ್ಮ, ಕ್ರೀಡಾ ಕಾರ್ಯದರ್ಶಿಯಾಗಿ ತೃತೀಯ ಬಿಸಿಎ ವಿದ್ಯಾರ್ಥಿ ಪೊನ್ನಣ್ಣ ಸಿ.ಎಸ್., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೃತೀಯ ಬಿಸಿಎ ವಿದ್ಯಾರ್ಥಿನಿ ಸುರಕ್ಷಾ ವಿ.ಎಸ್., ಜಂಟಿ ಕಾರ್ಯದರ್ಶಿಗಳಾಗಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಾದ ನಿತಿನ್ ಬೋಪಣ್ಣ ಹಾಗೂ ರೋನಿಕ್ ಕೆ.ಎನ್ ಆಯ್ಕೆಯಾದರು.

ಪ್ರಾಂಶುಪಾಲ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರೊ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂತಹ ಚುನಾವಣೆಗಳು ಮಹತ್ವದ್ದಾಗಿವೆ. ಗೆಲುವು ಸಾಧಿಸಿದ ವಿದ್ಯಾರ್ಥಿಗಳು ಸೋತ ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಕಾಲೇಜಿನ ಏಳಿಗೆಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಉಪಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಭಾರತಿ, ಐಕ್ಯೂಎಸಿ ಸಂಚಾಲಕಿ ನಯನಾ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ.ಎ.ಕವಿತ ಹಾಜರಿದ್ದರು. ಚುನಾವಣಾಧಿಕಾರಿಯಾಗಿ ವಿ.ಎಸ್. ಅಜಯ್ ಕುಮಾರ್, ಸಹ ಚುನಾವಣಾಧಿಕಾರಿಗಳಾಗಿ ಸಿ.ಎಂ.ಕಿರಣ್, ಎಸ್.ಎಂ.ರಜನಿ, ಡಾ.ಎಂ.ಸಿ. ಸೀಮಾ, ಕೆ.ಟಿ.ಸೀತಮ್ಮ, ಸಿ.ಸಿ.ಪೊನ್ನಮ್ಮ, ಅಕ್ಷತಾ ಸಿ, ವಚನ್ ಎಸ್.ಡಿ. ಕಾರ್ಯನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-51-1016177906

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ