ಅಬ್ಬಿ ವಿ ಕಂಠದಲ್ಲಿ ದೇವಿ ಮಹಾತ್ಮೆ ಚಿತ್ರದ 'ಜಗವ ಕಾಯೋ ದೇವನು' ಹಾಡು ಬಿಡುಗಡೆ

ಅಬ್ಬಿ ವಿ ಕಂಠದಲ್ಲಿ ದೇವಿ ಮಹಾತ್ಮೆ ಚಿತ್ರದ 'ಜಗವ ಕಾಯೋ ದೇವನು' ಹಾಡು ಬಿಡುಗಡೆ

ಅಬ್ಬಿ ವಿ ಕಂಠದಲ್ಲಿ ದೇವಿ ಮಹಾತ್ಮೆ ಚಿತ್ರದ 'ಜಗವ ಕಾಯೋ ದೇವನು' ಹಾಡು ಬಿಡುಗಡೆ

ಕಾಂತಾರ: ಅಧ್ಯಾಯ 1’ ಚಿತ್ರದ ‘ಬ್ರಹ್ಮ ಕಲಶ’ ಗೀತೆಯ ಮೂಲಕ ಕೇಳುಗರ ಮನಗೆದ್ದಿದ್ದ ಅಬ್ಬಿ ವಿ. ಇದೀಗ ‘ದೇವಿ ಮಹಾತ್ಮೆ’ ಚಿತ್ರದ ‘ಜಗವ ಕಾಯೋ ದೇವನು...’ ಹಾಡಿಗೆ ದನಿಯಾಗಿದ್ದಾರೆ.

‘ದೇವಿ ಮಹಾತ್ಮೆ’ ಚಿತ್ರತಂಡ ಅಬ್ಬಿ ವಿ. ಅವರ ಕಂಠದಲ್ಲಿ ಮೂಡಿಬಂದಿರುವ ಈ ಗೀತೆಯನ್ನು ಬಿಡುಗಡೆ ಮಾಡಿದೆ.

ಕೆನಡಾದಲ್ಲಿ ಬೆಳೆದಿರುವ ಅಬ್ಬಿ ವಿ. ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಹೊಂದಿದ್ದಾರೆ. ಭಕ್ತಿ ಮತ್ತು ದೈವಿಕ ಭಾವದ ಗೀತೆಗಳ ಪ್ರಸ್ತುತಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಈ ಗೀತೆಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಲಿಖಿತ್ ಪ್ರಸಾದ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರತಂಡ ಈಗಾಗಲೇ ನಟ ರಂಗಾಯಣ ರಘು ಅವರ ಅಭಿನಯ ಹಾಗೂ ಲಿಖಿತ್ ಪ್ರಸಾದ್ ಶೆಟ್ಟಿ ಅವರ ಹಿನ್ನೆಲೆ ಸಂಗೀತ ಒಳಗೊಂಡ ಟೀಸರ್ ಬಿಡುಗಡೆ ಮಾಡಿದ್ದು, ಜಾಲತಾಣದಲ್ಲಿ ಗಮನ ಸೆಳೆದಿತ್ತು. ಎಸ್.ಕೆ. ರಾವ್ ಅವರ ಛಾಯಾಗ್ರಹಣವೂ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

‘ಯುವಿಜಿ ಸ್ಟುಡಿಯೊ’ ಬ್ಯಾನರ್‌ ಅಡಿಯಲ್ಲಿ ವಿದ್ಯಾ ಗಾಂಧಿ ರಾಜನ್ ಚಿತ್ರ ನಿರ್ಮಿಸುತ್ತಿದ್ದು, ನಾಗರಾಜ ಸೋಮಯಾಜಿ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿದ್ದಾರೆ. ನಾಗರಾಜ ಸೋಮಯಾಜಿ ಮತ್ತು ಭಾಸ್ಕರ ಬಂಗೇರ ಸಂಭಾಷಣೆ ಬರೆದಿದ್ದು, ಉಜ್ವಲ್ ಚಂದ್ರ ಸಂಕಲನ ನಿರ್ವಹಿಸಿದ್ದಾರೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-51-674910059

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ