ರಾಜೀವ್ ಕನಸಿನ ಭಾರತ ನಿರ್ಮಾಣವೇ ನನ್ನ ಸಂಕಲ್ಪ: ಅಪ್ಪನನ್ನು ಸ್ಮರಿಸಿದ ರಾಹುಲ್

ರಾಜೀವ್ ಕನಸಿನ ಭಾರತ ನಿರ್ಮಾಣವೇ ನನ್ನ ಸಂಕಲ್ಪ: ಅಪ್ಪನನ್ನು ಸ್ಮರಿಸಿದ ರಾಹುಲ್

ರಾಜೀವ್ ಕನಸಿನ ಭಾರತ ನಿರ್ಮಾಣವೇ ನನ್ನ ಸಂಕಲ್ಪ: ಅಪ್ಪನನ್ನು ಸ್ಮರಿಸಿದ ರಾಹುಲ್

ನವದೆಹಲಿ: ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಅಂಗವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಅಪ್ಪನ ಆದರ್ಶಗಳನ್ನು ಸ್ಮರಿಸಿದ್ದಾರೆ. 

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, 'ಭಾರತೀಯರಲ್ಲಿ ಸಾಮರಸ್ಯ, ಪ್ರತಿಯೊಬ್ಬರ ಹೃದಯದಲ್ಲೂ ಕರುಣೆ ಹಾಗೂ ಎಲ್ಲ ನಾಗರಿಕರಿಗೂ ನ್ಯಾಯ ಮತ್ತು ಪ್ರಜಾಪ್ರಭುತ್ವದ ಸಮಾನ ಹಕ್ಕುಗಳು - ಇವು ನನ್ನ ತಂದೆ ನೀಡಿದ ಪ್ರಮುಖ ಪಾಠಗಳು' ಎಂದು ಉಲ್ಲೇಖಿಸಿದ್ದಾರೆ.

‘ಅಪ್ಪ, ನಿಮ್ಮ ಈ ಬೋಧನೆಗಳೇ ನನ್ನ ಶಕ್ತಿ. ನಿಮ್ಮ ನೆನಪುಗಳೇ ನನ್ನ ಧೈರ್ಯ. ನೀವು ಕಂಡಿದ್ದ ಕನಸಿನ ಭಾರತವನ್ನು ನಿರ್ಮಿಸುವ ಸಂಕಲ್ಪವು ನನಗೆ ಸದಾ ದಾರಿದೀಪವಾಗಿ ಮುನ್ನಡೆಸಲಿದೆ,’ ಎಂದು ಬರೆದುಕೊಂಡಿದ್ದಾರೆ. 

ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಸೇರಿದಂತೆ ಪ್ರಮುಖರು ಸ್ಮರಿಸಿದ್ದಾರೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ