ಕಾಳಗಿ: ಜೆಎಂಎಫ್‌ಸಿ ಕೋರ್ಟ್ ಉದ್ಘಾಟನೆಗೆ ಸಜ್ಜು

ಕಾಳಗಿ: ಜೆಎಂಎಫ್‌ಸಿ ಕೋರ್ಟ್ ಉದ್ಘಾಟನೆಗೆ ಸಜ್ಜು

ಕಾಳಗಿ: ಜೆಎಂಎಫ್‌ಸಿ ಕೋರ್ಟ್ ಉದ್ಘಾಟನೆಗೆ ಸಜ್ಜು

ಕಾಳಗಿ: ನೂತನ ತಾಲ್ಲೂಕು ಕೇಂದ್ರ ಕಾಳಗಿಯಲ್ಲಿ ಜೆಎಂಎಫ್‌ಸಿ ಕೋರ್ಟ್ ಉದ್ಘಾಟನೆಗೆ ಹೊಸ ಕಟ್ಟಡ ಸಜ್ಜುಗೊಂಡಿದೆ.

ಸುಗೂರು ರಸ್ತೆ ಮಾರ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾಲೇಜಿನ ಒಂದು ಪ್ರತ್ಯೇಕವಾದ ಕಟ್ಟಡವನ್ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗಿದೆ.

ಸುಣ್ಣ–ಬಣ್ಣ, ಫರ್ನಿಚರ್, ವಿದ್ಯುತ್ ಸಂಪರ್ಕ, ಹಾಲ್, ಡಯಾಸ್, ಆಫಿಸ್, ಚೇಂಬರ್, ಪಾರ್ಕಿಂಗ್, ಪೀಠೋಪಕರಣಗಳು ಹೀಗೆ ಅಗತ್ಯ ಸಿದ್ಧತೆಯೊಂದಿಗೆ ಕೋರ್ಟ್ ಸಜ್ಜುಗೊಂಡಿದೆ.

ಮೊದಲು ಚಿತ್ತಾಪುರ ಕೋರ್ಟ್ ವ್ಯಾಪ್ತಿಗೆ ಬರುತ್ತಿದ್ದ ತಾಲ್ಲೂಕಿನ ಕಾಳಗಿ ಹೋಬಳಿಯ 46 ಮತ್ತು ಚಿಂಚೋಳಿ ಕೋರ್ಟ್ ವ್ಯಾಪ್ತಿಗೆ ಬರುತ್ತಿದ್ದ ಕೋಡ್ಲಿ ಹೋಬಳಿಯ 27 ಗ್ರಾಮಗಳ ಪ್ರಕರಣಗಳು ಕಾಳಗಿ ಜೆಎಂಎಫ್‌ಸಿ ಕೋರ್ಟ್ ವ್ಯಾಪ್ತಿಗೆ ಇನ್ಮುಂದೆ ಸೇರಲಿವೆ.

ಚಿತ್ತಾಪುರ ಹಾಗೂ ಚಿಂಚೋಳಿ ಕೋರ್ಟಿನಿಂದ ಕಾಳಗಿ ಕೋರ್ಟ್‌ಗೆ ಒಳಪಡುವ ಪ್ರಕರಣಗಳನ್ನು ವರ್ಗಾಯಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ.

ಅದರಂತೆ ಇಲ್ಲಿ ವಿಚಾರಣೆ ನಡೆಸಲು ಪ್ರತಿ ಸೋಮವಾರ ಮತ್ತು ಮಂಗಳವಾರ ಕಲಬುರಗಿಯ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರನ್ನು ನಿಯೋಜನೆ ಮಾಡಿ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳು ಆ.12ರಂದು ಆದೇಶ ಹೊರಡಿಸಿದ್ದಾರೆ.

ಕಾಳಗಿಯಲ್ಲಿ ಕೋರ್ಟ್ ರಚಿಸುವ ಸಂಬಂಧ ಹೈಕೋರ್ಟ್ ಮತ್ತು ಜಿಲ್ಲಾ ಕೋರ್ಟ್ ನ್ಯಾಯಾಧೀಶರು ಈ ಹಿಂದೆ ಅನೇಕ ಬಾರಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರು.

ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ ಇದಕ್ಕಾಗಿ ಶ್ರಮಿಸಿದ್ದಾರೆ.

ಎಲ್ಲ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿರುವ ಕಾಳಗಿ ತಾಲ್ಲೂಕಿನ ಕೋರ್ಟ್ ಶುಭಾರಂಭದ ಮುಹೂರ್ತ ಇದೇ ವಾರದಲ್ಲಿ ನಿಶ್ಚಯ ಆಗುವ ಸಂಭವ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-31-1300857069

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ