
ರಾಯಚೂರು : ನೀರು ಸಂಸ್ಕರಣಾ ಘಟಕಗಳ ಸಂಯೋಜಿತ ನಿರ್ವಹಣೆ
ರಾಯಚೂರು: ಮಹಾನಗರಪಾಲಿಕೆ ಅಧೀನದ ಜಲ ಸಂಸ್ಕರಣಾ ಘಟಕಗಳ ಸಂಪೂರ್ಣ ನಿರ್ವಹಣೆಗೆ ಸಮಗ್ರ ಮತ್ತು ಸಂಯೋಜಿತ ನಿರ್ವಹಣೆಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಹೊಸ ಸಂಯೋಜಿತ ವ್ಯವಸ್ಥೆಯಲ್ಲಿ ತರಬೇತಿ ಪಡೆದವರಿಂದಲೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಿಂದ ಸಂಸ್ಕರಣಾ ರಾಸಾಯನಿಕಗಳ ಪೂರೈಕೆ, ನಿರ್ವಹಣೆ ಮತ್ತು ಅತ್ಯುತ್ತಮ ಡೋಸಿಂಗ್. ಪಂಪ್‌ಗಳು, ಮೋಟಾರ್‌ಗಳು, ಕವಾಟಗಳು ಮತ್ತು ಸಂಬಂಧಿತ ಎಲೆಕ್ಟ್ರೋಮೆಕಾನಿಕಲ್ ಉಪಕರಣಗಳ ವ್ಯವಸ್ಥಿತ ಕಾರ್ಯಾಚರಣೆ ಸುಲಭವಾಗಿದೆ.
ನೀರು ಸರಬರಾಜಿನಲ್ಲಿ ದಿಢೀರ್ ಕಾಣಿಸಿಕೊಳ್ಳುತ್ತಿದ್ದ ತಾಂತ್ರಿಕ ದೋಷಗಳನ್ನು ಮುಂಚಿತವಾಗಿಯೇ ಅರಿತುಕೊಳ್ಳಲು ಸಾಧ್ಯವಾಗಿದೆ. ಯಂತ್ರೋಪಕರಣ ಹಾಗೂ ಅಗತ್ಯ ಸಲಕರಣೆಗಳ ಜೀವಿತಾವಧಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಮುನ್ಸೂಚಕ ನಿರ್ವಹಣೆಗೆ ಒತ್ತುಕೊಡಲಾಗಿದೆ.
ನಿಯಂತ್ರಿತ ಡೋಸಿಂಗ್‌ನೊಂದಿಗೆ ಸುಧಾರಿತ ಶುದ್ಧೀಕರಣ ಮತ್ತು ಸೋಂಕುಗಳೆತ ಅಭ್ಯಾಸ. ಸಂಸ್ಕರಣಾ ನಿಯತಾಂಕಗಳು ಮತ್ತು ಸಂಸ್ಕರಿಸಿದ ನೀರಿನ ಗುಣಮಟ್ಟದ ನಿಯಮಿತ ಮೇಲ್ವಿಚಾರಣೆ, ಯಾಂತ್ರಿಕ, ವಿದ್ಯುತ್ ಮತ್ತು ಪ್ರಕ್ರಿಯೆ-ಸಂಬಂಧಿತ ನ್ಯೂನತೆಗಳ ಸಕಾಲಿಕ ತಿದ್ದುಪಡಿ. ಸರಿಯಾದ ದಾಖಲೆಗಳ ನಿರ್ವಹಣೆ, ಕಾರ್ಯಾಚರಣೆಯ ಮೇಲ್ವಿಚಾರಣೆ ಮತ್ತು ಕಾರ್ಯಕ್ಷಮತೆಯ ಹೊಣೆಗಾರಿಕೆ ಸಂಯೋಜಿತ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯು ಏಕ-ಬಿಂದು ಹೊಣೆಗಾರಿಕೆಯನ್ನು ಬಲಪಡಿಸಿದೆ.
ರಾಯಚೂರು ಮಹಾನಗರದಲ್ಲಿ ಹೊಸದಾಗಿ ನೀರು ಪರೀಕ್ಷಾ ವಿಧಾನಗಳನ್ನು ಆರಂಭಿಸಲಾಗಿದೆ. ವಾರ್ಡ್‌ವಾರು ಸಿಬ್ಬಂದಿಗೆ ಟೆಸ್ಟಿಂಗ್ ಕಿಟ್‌ಗಳನ್ನು ಕೊಡಲಾಗಿದೆ. ಆರೋಗ್ಯ ಇಲಾಖೆಯ ನಿತ್ಯ ಮೂರು ಮಾದರಿಗಳನ್ನು ಪಡೆದು ಪರಿಶೀಲಿಸುತ್ತಿದ್ದಾರೆ. ಪ್ರತಿ ವಾರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಯೋಗಾಲಯದಿಂದ ವರದಿ ತರಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ.
ರಾಯಚೂರು ಇತಿಹಾಸದಲ್ಲೇ ನಗರಕ್ಕೆ ಪೂರೈಕೆಯಾಗುವ ಚಿಕ್ಕಸಗೂರ ಹಾಗೂ ರಾಂಪೂರ ಜಲಾಶಯ ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿ ವೃತ್ತಿಪರತೆಯನ್ನು ಹೆಚ್ಚಿಸಲಾಗಿದೆ. ಇದಕ್ಕಾಗಿ ಇಬ್ಬರು ನಿವೃತ್ತ ಮುಖ್ಯ ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ.
ವಾರ್ಡ್ ಸಂಖ್ಯೆ 14ರಲ್ಲಿ ನಿಜಾಮರಕಾಲದಲ್ಲಿ ಅಳವಡಿಸಿದ ಪೈಪ್‌ಲೈನ್ ಪತ್ತೆಯಾಗಿದೆ. ಇದರ ಬದಲಾವಣೆಗೆ ₹ 4 ಕೋಟಿ ಬೇಕಾಗಲಿದೆ ಎಂದು ವಿವರಿಸುತ್ತಾರೆ.
ಓವರ್‌ಹೆಡ್ ಟ್ಯಾಂಕ್ ಹಾಗೂ ನೆಲೆ ಮಟ್ಟದ ಜಲಸಂಗ್ರಹಾಗಾರಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಯುವಿ ಕಿರಣಗಳ ಮೂಲಕ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗಿದೆ ಇದು ಜಲ ಶುದ್ಧೀಕರಣದ ಆಧುನಿಕ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ ಎಂದು ಹೇಳುತ್ತಾರೆ.
ಈ ಮೊದಲು ಜಲ ಸಂಸ್ಕರಣಾ ಘಟಕದಲ್ಲಿ ಪೂರ್ವ-ಕ್ಲೋರಿನೇಷನ್ ಸೌಲಭ್ಯವಿರಲಿಲ್ಲ. ಮೊದಲಿನ ವ್ಯವಸ್ಥೆಯಲ್ಲಿ ನಿಖರ ಮತ್ತು ಸ್ಥಿರವಾದ ಕ್ಲೋರಿನ್ ಡೋಸಿಂಗ್ ಅನ್ನು ಖಚಿತಪಡಿಸಿಕೊಳ್ಳ ಲಾಗುತ್ತಿರಲಿಲ್ಲ. ಸೋಂಕುನಿವಾರಕ ಅಂಶ ತೆಗೆದುಹಾಕುವುದು ಕಷ್ಟಕರವಾಗಿಸಿತ್ತು. ಈಗ, ಹೊಸ ವಿಧಾನವು ಪೂರ್ವ-ಶುದ್ಧೀಕರಣ ಹಾಗೂ ನಂತರದ ಶುದ್ಧೀಕರಣದ ನಿಖರತೆ ಒದಗಿಸುತ್ತದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-32-647511966