ರಾಜ್ಯ ಜೂನಿಯರ್ ಅಥ್ಲೆಟಿಕ್ ಕೂಟ: ಸಂಜನಾ ರೆಡ್ಡಿ, ತೇಜಸ್ವಿನಿ ರಾವ್‌ ಮಿಂಚು

ರಾಜ್ಯ ಜೂನಿಯರ್ ಅಥ್ಲೆಟಿಕ್ ಕೂಟ: ಸಂಜನಾ ರೆಡ್ಡಿ, ತೇಜಸ್ವಿನಿ ರಾವ್‌ ಮಿಂಚು

ರಾಜ್ಯ ಜೂನಿಯರ್ ಅಥ್ಲೆಟಿಕ್ ಕೂಟ: ಸಂಜನಾ ರೆಡ್ಡಿ, ತೇಜಸ್ವಿನಿ ರಾವ್‌ ಮಿಂಚು

ಬೆಂಗಳೂರು: ನಗರದ ಅಥ್ಲೀಟುಗಳಾದ ಸಂಜನಾ ರೆಡ್ಡಿ ಮತ್ತು ತೇಜಸ್ವಿನಿ ಜಿ.ರಾವ್ ಅವರು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಾಜ್ಯ ಜೂನಿಯರ್ ಅಥ್ಲೆಟಿಕ್ ಕೂಟದ ಶಾಟ್‌ಪಟ್‌ನಲ್ಲಿ ನೂತನ ದಾಖಲೆ ಸ್ಥಾಪಿಸಿದರು.

18 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ಸಂಜನಾ ಅವರು ಗುಂಡನ್ನು 15.32 ಮೀ. ದೂರ ಎಸೆದರು. ಆ ಮೂಲಕ ನಿಮಿತಾ ಜಿ.ಕೆ. ಹೆಸರಿನಲ್ಲಿದ್ದ 12 ವರ್ಷ ಹಳೆಯ ದಾಖಲೆಯನ್ನು ಮುರಿದರು. 16 ವರ್ಷ ವಯಸ್ಸಿನ ಸಂಜನಾ ಅವರು ಲುಧಿಯಾನಾದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಸಂಪಾದಿಸಿದರು.

ಸಂಜನಾ ಅವರು ಎಸ್‌.ಡಿ.ಈಶನ್ ಮತ್ತು ಕಾಂತಮ್ಮ ಅವರಿಂದ ತರಬೇತಿ ಪಡೆಯುತ್ತಿದ್ದು, ಪುದುಚೇರಿಯಲ್ಲಿ, ಮುಂದಿನ ತಿಂಗಳ ಮಧ್ಯದಲ್ಲಿ ನಡೆಯಲಿರುವ ದಕ್ಷಿಣ ವಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೂ ಅರ್ಹತೆ ಪಡೆದರು. ಇದೇ ವೇಳೆ, 16 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ತೇಜಸ್ವಿನಿ, ಷಾಟ್‌ಪಟ್‌ಅನ್ನು 12.89 ಮೀ. ದೂರ ಎಸೆದು ಸಂಜನಾ ಅವರು ಹೋದ ವರ್ಷ ನಿರ್ಮಿಸಿದ್ದ 12.00 ಮೀ.ಗಳ ದಾಖಲೆ ಮುರಿದರು. ಅವರೂ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸಿದರು.

20 ವರ್ಷ, 18 ವರ್ಷ ಮತ್ತು 16 ವರ್ಷದೊಳಗಿನವರ ವಿಭಾಗದಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಮೊದಲ ದಿನ ಒಟ್ಟು 9 ಕೂಟ ದಾಖಲೆಗಳು ಪತನಗೊಂಡವು.

ಫಲಿತಾಂಶಗಳು (ಮೊದಲ ಸ್ಥಾನ ಪಡೆದವರು): ಪುರುಷರು: 20 ವರ್ಷದೊಳಗಿನವರು: 100 ಮೀ. ಓಟ: ಚಿರಂತ್ ಪಿ. (ಮೈಸೂರು), ಕಾಲ: 10.39 ಸೆ. (ನೂತನ ದಾಖಲೆ)–1; ದಯಾನಂದ (ದಕ್ಷಿಣ ಕನ್ನಡ), ಕಾಲ: 48.66 ಸೆ.; 800 ಮೀ. ಓಟ: ಆನಂದ್‌ ಪರಸಪರ್ (ಧಾರವಾಡ) ಕಾಲ: 1ನಿ.59.20 ಸೆ.; 110 ಮೀ. ಹರ್ಡಲ್ಸ್‌: ರೋಹನ್ ರಾಥೋಡ್‌ (ವಿಜಯಪುರ), ಕಾಲ: 14.01 ಸೆ.; ಹೈಜಂಪ್‌: ಸಿನಾನ್‌ (ಉಡುಪಿ), ಎತ್ತರ: 2.03 ಮೀ.

18 ವರ್ಷದೊಳಗಿನವರು: 100 ಮೀ: ಸಾಹಿಲ್‌ (ದಕ್ಷಿಣ ಕನ್ನಡ), ಕಾಲ: 10.40 ಸೆ., ನೂತನ ದಾಖಲೆ; 400 ಮೀ. ಓಟ: ಆಯುಷ್‌ ಪ್ರಾಂಜರ್ (ದಕ್ಷಿಣ ಕನ್ನಡ), ಕಾಲ: 47.68 ಸೆ. (ನೂತನ ದಾಖಲೆ) 110 ಮೀ. ಹರ್ಡಲ್ಸ್‌: ಅದ್ವಿತ್ ವಿ. ಯಾದವ್ (ದಕ್ಷಿಣ ಕನ್ನಡ), ಕಾಲ: 14.06 ಸೆ. ನೂತನ ದಾಖಲೆ; 80 ಮೀ. ಹರ್ಡಲ್ಸ್‌: ಕೌಶಿಕ್ ಪಿ.ಶೆಟ್ಟಿಗಾರ್ (ದಕ್ಷಿಣ ಕನ್ನಡ), ಕಾಲ: 11.11 ಸೆ.

16 ವರ್ಷದೊಳಗಿನವರು: ಶಾಟ್‌ಪಟ್‌: ಸುಶಾಂತ್ ಗೌಡ (ಉತ್ತರ ಕನ್ನಡ), ದೂರ: 14.92 ಮೀ., ನೂತನ ದಾಖಲೆ.

ಮಹಿಳೆಯರು: 20 ವರ್ಷದೊಳಗಿನವರು: 100 ಮೀ. ಓಟ: ಶ್ರುತಿ ಪಿ.ಶೆಟ್ಟಿ (ಉಡುಪಿ), ಕಾಲ: 11.61 ಸೆ., ನೂತನ ದಾಖಲೆ; 400 ಮೀ. ಓಟ: ರೀತುಶ್ರೀ (ದಕ್ಷಿಣ ಕನ್ನಡ), ಕಾಲ: 57.10 ಸೆ.; 800 ಮೀ. ಓಟ: ಶಿಪಾ ರಾಕೇಶ್ (ಧಾರವಾಡ), ಕಾಲ: 2ನಿ.14.13 ಸೆ.; 100 ಮೀ. ಹರ್ಡಲ್ಸ್‌: ಇಶಾ ಎಲಿಝಬೆತ್ (ಬೆಂಗಳೂರು) 14.34 ಸೆ.

18 ವರ್ಷದೊಳಗಿನವರು: 100 ಮೀ. ಓಟ: ಸುಚಿತ್ರಾ ಎಸ್‌. (ಬೆಂಗಳೂರು), ಕಾಲ: 11.75 ಸೆ.; 100 ಮೀ. ಹರ್ಡಲ್ಸ್‌: ಎಂ. ನೂಪುರ್‌ ಹೊಳ್ಳ (ಬೆಂಗಳೂರು), ಕಾಲ: 14.14 ಸೆ.; ಷಾಟ್‌ಪಟ್‌: ಎಂ.ಸಂಜನಾ ರೆಡ್ಡಿ (ಬೆಂಗಳೂರು), ದೂರ: 15.52 ಮೀ. ನೂತನ ದಾಖಲೆ; 3000 ಮೀ. ರೇಸ್‌ವಾಕ್‌: ಭಾಗಿರಥಿ (ದಕ್ಷಿಣ ಕನ್ನಡ), ಕಾಲ: 16ನಿ.54.54 ಸೆ.

16 ವರ್ಷದೊಳಗಿನವರು: 80 ಮೀ. ಹರ್ಡಲ್ಸ್: ಆಸ್ತಾ (ದಕ್ಷಿಣ ಕನ್ನಡ), ಕಾಲ: 11.94 ಸೆ.; ಷಾಟ್‌ಪಟ್‌: ತೇಜಸ್ವಿನಿ ಜಿ.ರಾವ್‌ (ಬೆಂಗಳೂರು), ದೂರ: 12.89 ಮೀ., ನೂತನ ದಾಖಲೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-51-1316759286

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ