ಭಯೋತ್ಪಾದಕರೆಂದು ಶಂಕಿಸಿ ಬೇಸ್‌ಬಾಲ್ ಬ್ಯಾಟ್‌ನಿಂದ ಟೆಕಿಗಳ ಮೇಲೆ ಹಲ್ಲೆ, ಪರಾರಿ

ಭಯೋತ್ಪಾದಕರೆಂದು ಶಂಕಿಸಿ ಬೇಸ್‌ಬಾಲ್ ಬ್ಯಾಟ್‌ನಿಂದ ಟೆಕಿಗಳ ಮೇಲೆ ಹಲ್ಲೆ, ಪರಾರಿ

ಭಯೋತ್ಪಾದಕರೆಂದು ಶಂಕಿಸಿ ಬೇಸ್‌ಬಾಲ್ ಬ್ಯಾಟ್‌ನಿಂದ ಟೆಕಿಗಳ ಮೇಲೆ ಹಲ್ಲೆ, ಪರಾರಿ

ಬೆಂಗಳೂರು: ಭಯೋತ್ಪಾದಕರೆಂದು ಶಂಕಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಬೇಸ್‌ಬಾಲ್‌ ಬ್ಯಾಟ್‌ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಎಚ್‌ಎಎಲ್‌ ಬಳಿಯ ಎಇಸಿಎಸ್‌ ಲೇಔಟ್‌ನಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾಗಿರುವ ಸಂದೀಪ್‌ ಕುಮಾರ್‌ ಮತ್ತು ಅವರ ಸ್ನೇಹಿತ ರೋಹಿತ್‌ ಕುಮಾರ್‌ ಅವರ ದೂರು ಆಧರಿಸಿ, ಎಚ್‌ಎಎಲ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ಆಗಸ್ಟ್‌ 6ರಂದು ಬೆಳಗಿನ ಜಾವ ಸ್ನೇಹಿತನನ್ನು ಭೇಟಿಯಾಗಲು ಎಇಸಿಎಸ್‌ ಲೇಔಟ್‌ಗೆ ಹೋಗಿದ್ದ ಸಂದೀಪ್‌ ಕುಮಾರ್‌ ಹಾಗೂ ರೋಹಿತ್‌ ಕುಮಾರ್‌, ಐಸ್‌ಕ್ರೀಮ್ ಅಂಗಡಿ ಮುಂಭಾಗದಲ್ಲಿ ಕಾಯುತ್ತಾ ನಿಂತಿದ್ದರು. ಅದೇ ವೇಳೆಗೆ ಅಲ್ಲಿಗೆ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಆ ಇಬ್ಬರಿಗೆ, ‘ನೀವು ಭಯೋತ್ಪಾದಕರಾ’ ಎಂದು ಪ್ರಚೋದನಾಕಾರಿಯಾಗಿ ಪ್ರಶ್ನಿಸಿದ್ದಾನೆ. ಅದಕ್ಕೆ ಅವರು, ‘ನಾವು ಭಯೋತ್ಪಾದಕರಲ್ಲ. ಭಾರತೀಯ ನಾಗರಿಕರು’ ಎಂದು ಉತ್ತರಿಸಿದ್ದಾರೆ.

ಬಳಿಕ ಅಪರಿಚಿತ ವ್ಯಕ್ತಿ, ಗುರುತಿನ ಚೀಟಿ ತೋರಿಸುವಂತೆ ಅವರಿಗೆ ಗದರಿದ್ದಾನೆ. ಆಗ ಸಂದೀಪ್‌ ಕುಮಾರ್‌ ಹಾಗೂ ರೋಹಿತ್‌ ಕುಮಾರ್‌, ‘ಯಾವ ಅಧಿಕಾರದ ಮೇಲೆ ಗುರುತಿನ ಚೀಟಿ ಕೇಳುತ್ತಿದ್ದೀಯಾ? ನಮ್ಮನ್ನು ವಿಚಾರಣೆ ಮಾಡಲು ನೀನು ಯಾರು?’ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಆ ವ್ಯಕ್ತಿ, ಅವರಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ, ತನ್ನ ಕಾರಿನಲ್ಲಿದ್ದ ಬೇಸ್‌ಬಾಲ್‌ ಬ್ಯಾಟ್‌ನಿಂದ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ರೋಹಿತ್‌ಕುಮಾರ್‌, ಆತನ ದುಂಡಾವರ್ತಿಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಯತ್ನಿಸಿದಾಗ ಆರೋಪಿ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ.

ಘಟನೆಯ ದೃಶ್ಯಾವಳಿ ಸಮೀಪದ ಬ್ಯಾಂಕ್‌ನ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ, ರೋಹಿತ್‌ಕುಮಾರ್‌ ಅವರ ಮೊಬೈಲ್‌ನಲ್ಲೂ ಸೆರೆಯಾಗಿದೆ. ಆರೋಪಿ ಪಾನಮತ್ತನಾಗಿ ಬಂದು ಮದ್ಯದ ನಶೆಯಲ್ಲಿಈ ದುಷ್ಕೃತ್ಯ ಎಸಗಿರುವ ಶಂಕೆಯಿದೆ. ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಹಾಗೂ ಕಾರಿನ ನೋಂದಣಿ ಸಂಖ್ಯೆಯ ಸುಳಿವು ಆಧರಿಸಿ ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ