
ಅಮೀರ್ ಖಾನ್‌ರನ್ನು ಕಡೆಗಣಿಸಿದ್ರಾ? "ಇನ್ನು ನನ್ನ ಜೊತೆ ಫೋಟೋ ನಿರೀಕ್ಷಿಸಬೇಡಿ' ಎಂದ ಪ್ರೀತಿ ಜಿಂಟಾ!
Actor Preity Zinta: ಬಾಲಿವುಡ್‌ನ ಮತ್ತೊಂದು ಸಿನಿಮಾ (Batwara 1947) ಇದೇ ಆಗಸ್ಟ್ 14ರಂದು ತೆರೆಗೆ ಬರಲು ಸಜ್ಜಾಗಿದೆ. ಬಹುತಾರಾಗಣದ ಈ ಸಿನಿಮಾ ಪ್ರಚಾರ ವೇಳೆ ನಟ ಅಮೀರ್ ಖಾನ್ ಅವರನ್ನು ನಟಿ ಪ್ರೀತಿ ಜಿಂಟಾ ಅವರು ಕಡೆಗಣಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕರ್ಷಕ ಶಿರ್ಷಿಕೆ ಕೊಟ್ಟು ಹಂಚಿಕೊಂಡ ವಿಡಿಯೋ ಮತ್ತು ತಮ್ಮ ಮೇಲಿನ ಆರೋಪ ಕುರಿತು ನಟಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಮುಂದೆ 'ನನ್ನ ಜೊತೆ ಫೋಟೋ ನಿರೀಕ್ಷಿಸಬೇಡಿ' ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದಿಯ 'ಬಟ್ವಾರಾ 1947' ಸಿನಿಮಾದಲ್ಲಿ ನಟ ಅಮೀರ್, ನಟಿ ಪ್ರೀತಿ ಜಿಂಟಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಆಮಿರ್ ಖಾನ್ ಅವರನ್ನು ನಟಿ ನಿರ್ಲಕ್ಷಿಸಿದ್ದಾರೆ ಎಂದು ಸೂಚಿಸುವ ಪಾಪರಾಜಿಗಳ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ನಟಿ ಪ್ರೀತಿ ಜಿಂಟಾ ಟೀಕಿಸಿದ್ದಾರೆ.
ಪಾಪರಾಜಿ ಖಾತೆಯೊಬ್ಬರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ನಟಿ ಪ್ರೀತಿ ತನ್ನ ವ್ಯಾನಿಟಿ ವ್ಯಾನ್‌ನಿಂದ ಇಳಿದು ಛಾಯಾಗ್ರಾಹಕರಿಗೆ ದಾರಿ ಕೇಳಿದ್ದಾರೆ. ಆ ಹೊತ್ತಿಗೆ ಆಮಿರ್ ಖಾನ್ ನಿಂತಿದ್ದನ್ನು ನೋಡಬಹುದು. ಹೀಗಿದ್ದರೂ ಈ ನಟ, ನಟಿಯರಿಬ್ಬರ ನಡುವೆ ಯಾವುದೇ ಸಂವಹನ ನಡೆದಿಲ್ಲ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋಗೆ 'ಓಹ್ ಪ್ರೀತಿ ಜಿಂಟಾ ಅಮೀರ್ ಖಾನ್ ಅವರನ್ನು ನಿರ್ಲಕ್ಷಿಸಿದ್ದಾರೆಯೇ?' ಎಂದು ಶಿರ್ಷಿಕೆ ನಿಡಲಾಗಿದೆ.
ವಿಮಾನ ಹತ್ತುವ ಆತುರದಲ್ಲಿದ್ದೆ, ಗೌರವವಿದೆ: ನಟಿ
ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಪ್ರೀತಿ ಜಿಂಟಾ ಪ್ರತಿಕ್ರಿಯಿಸಿದ್ದು, "ನಾನು ಉದ್ದೇಶಪೂರ್ವಕವಾಗಿ ಆಮಿರ್ ಖಾನ್ ಅವರನ್ನು ನಿರ್ಲಕ್ಷಿಸಿಲ್ಲ. ಸಿನಿಮಾದ ಚಿತ್ರೀಕರಣ ಮುಗಿಸಲು, ಬಳಿಕ ವಿಮಾನ ಹತ್ತಲು ಅವಸರದಲ್ಲಿದ್ದೆ' ಎಂದು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲದೇ ವೀಡಿಯದಲ್ಲಿ ಈ ಘಟನೆಯನ್ನು ಬಿಂಬಿಸಿದ ರೀತಿಯನ್ನು ನಟಿ ಖಂಡಿಸಿದ್ದಾರೆ. 'ಇಂತಹ ಕ್ಲಿಕ್‌ಬೈಟ್ ಕಂಟೆಂಟ್ ತೋರಿಸುವುದು ಸರಿಯಲ್ಲ. 'ನಾನು ಶೂಟ್ ಮಾಡಿದ ನಂತರ 'ಬಟ್ವಾರಾ 1947' ಪ್ರಚಾರಕ್ಕಾಗಿ ವಿಮಾನ ಹತ್ತಲು ಆತುರದಲ್ಲಿದ್ದೆ. ಈ ವೇಳೆ ಆಮಿರ್ ಅವರು ವ್ಯಾನ್ ಬಳಿ ಇರುವುದನ್ನು ನೋಡಲಿಲ್ಲ. ನೀವು ಇದೇ ರೀತಿ ನಕಾರಾತ್ಮಕ ಅಂಶಗಳನ್ನು ಉತ್ತೇಜಿಸುವುದು, ಪೊಸ್ಟ್ ಮಾಡುವ ಹೊಂದಿದ್ದರೆ ದಯವಿಟ್ಟು ನನ್ನೊಂದಿಗೆ ನಿಂತು ಅಥವಾ ನಿಲ್ಲಿಸಿ ಫೋಟೋ ತೆಗೆದುಕೊಳ್ಳುತ್ತೇನೆ ಎಂದು ನಿರೀಕ್ಷಿಸಬೇಡಿ!. ಅಮೀರ್ ಖಾನ್ ಅವರ ಮೇಲೆ ನನಗೆ ಅಪಾರ ಗೌರವ, ಪ್ರೀತಿ ಇದೆ. ಇಂತಹ ಬೆಳವಣಿಗೆ ಸರಿಯಲ್ಲ' ಎಂದು ನಟಿ ಪ್ರೀತಿ ಹೇಳಿದ್ದಾರೆ.
'ಬಟ್ವಾರಾ 1947' ಕುರಿತು
'ಬಟ್ವಾರಾ 1947' ಸಿನಿಮಾದಲ್ಲಿ ಅಮೀರ್ ಖಾನ್, ಪ್ರೀತಿ ಜಿಂಟಾ ಜೊತೆಗೆ ಸನ್ನಿ ಡಿಯೋಲ್, ಕರಣ್ ಡಿಯೋಲ್, ವಿಕ್ಕಿ ಕೌಶಲ್, ಕನ್ನಿಕಾ ಕಪೂರ್, ಅಲಿ ಫಾಜಲ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಇದಾಗಿದೆ. 'ಆಮಿರ್ ಖಾನ್ ಪ್ರೊಡಕ್ಷನ್ಸ್' ಸಿನಿಮಾ ನಿರ್ಮಿಸಿದೆ. ಎ.ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾಗಾಗಿ ಪ್ರೀತಿ ಮತ್ತು ಅಮೀರ್ ಖಾನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.