ವಿಜಯಪುರದ ‘ನವರಸಪುರ’ ಉತ್ಸವ; ಸರ್ಕಾರದ ತಾತ್ಸಾರ

ವಿಜಯಪುರದ ‘ನವರಸಪುರ’ ಉತ್ಸವ; ಸರ್ಕಾರದ ತಾತ್ಸಾರ

ವಿಜಯಪುರದ ‘ನವರಸಪುರ’ ಉತ್ಸವ; ಸರ್ಕಾರದ ತಾತ್ಸಾರ

ವಿಜಯಪುರ: ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರ ಉತ್ಸವಗಳು ಪ್ರತಿ ವರ್ಷ ಅದ್ದೂರಿಯಾಗಿ ಸಾಂಸ್ಕೃತಿಕ ರಸದೌತಣ ಉಣಬಡಿಸಿದರೆ ವಿಜಯಪುರದ ‘ನವರಸಪುರ’ ಉತ್ಸವಕ್ಕೆ ಮಾತ್ರ ನೂರೆಂಟು ನೆಪ.

ಒಮ್ಮೆ ನೆರೆಯ ನೆಪ, ಇನ್ನೊಮ್ಮೆ ಬರದ ನೆಪ ಹೀಗೆ ನವರಸಪುರ ಉತ್ಸವಕ್ಕೆ ‘ನೆಪ’ಗಳೇ ಅಡ್ಡಿಯಾಗುತ್ತಿವೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ನವರಸಪುರ ಉತ್ಸವಕ್ಕೆ ಮಾತ್ರ ಈ ತಾತ್ಸಾರವೇಕೆ? ಈ ತಾರತಮ್ಯವೇಕೆ ಎಂಬ ಸಹಜ ಪ್ರಶ್ನೆ ಮೂಡಿದೆ.

ಹೆಸರೇ ಹೇಳುವಂತೆ ಸಂಗೀತ, ಕಲಾ ಪರಂಪರೆಯ ನವರಸಗಳು ಸಮ್ಮಿಳಿತವಾಗುವಂತೆ ನಡೆಯುವ ನವರಸಪುರ ಉತ್ಸವಕ್ಕೆ ತನ್ನದೇ ಆದ ವೈಭವವಿತ್ತು. ನಾಡಿನ ಅನೇಕ ದಿಗ್ಗಜ ಕಲಾವಿದರು ನವರಸಪುರ ಉತ್ಸವದಲ್ಲಿ ಕಲಾ ಪ್ರದರ್ಶನ ನೀಡುವುದನ್ನು ತಮ್ಮ ಪ್ರತಿಷ್ಠೆ ಎಂದೇ ಭಾವಿಸಿದ್ದರು. ಆದರೆ, ಕಾಲ ಕಳೆದಂತೆ ನವರಸಪುರ ಉತ್ಸವಕ್ಕೆ ಜಿಲ್ಲಾಡಳಿತ ತಾತ್ಸಾರ ಭಾವನೆ ಪುನರಾವರ್ತನೆ ಮಾಡುತ್ತಲೇ ಇರುವುದು ನವರಸಪುರ ಉತ್ಸವ ಎದುರು ನೋಡುತ್ತಿರುವ ಸಾಂಸ್ಕೃತಿಕ ಅಭಿರುಚಿಯ ಮನಸ್ಸುಗಳಿಗೆ ನಿರಾಸೆ ಉಂಟು ಮಾಡುತ್ತಲೇ ಇದೆ.

ಕಳೆದ 11 ವರ್ಷಗಳಿಂದ ಈ ಉತ್ಸವ ಆಯೋಜನೆಯಾಗಿಲ್ಲ. ಕಳೆದ ಹಲವು ವರ್ಷಗಳಿಂದ ಸತತ ನೆರೆ ಮತ್ತು ಬರ ಪರಿಸ್ಥಿತಿಗಳ ನೆಪ ಹೇಳಿ ನವರಸಪುರ ಉತ್ಸವವನ್ನು ಮುಂದೂಡುತ್ತಾ ಬರಲಾಗಿದೆ. ವಿಜಯಪುರದ ಇತಿಹಾಸವನ್ನು ಸಾರುವ ನವರಸಪುರ ಉತ್ಸವವನ್ನು ಆಚರಿಸಬೇಕೆಂಬುದು ಜನರ ಆಶಯವಾಗಿದೆ.

ನವರಸಪುರ ಉತ್ಸವ ಆಯೋಜನೆಯ ಬಗ್ಗೆ ಸಚಿವ ಎಂ.ಬಿ. ಪಾಟೀಲ 2026 ವರ್ಷಾರಂಭದಲ್ಲಿ ಇಂಗಿತ ವ್ಯಕ್ತಪಡಿಸಿ ಮಾರ್ಚ್ ಮೊದಲ ವಾರದಲ್ಲಿ ನವರಸಪುರ ಉತ್ಸವ ಆಯೋಜನೆ ಮಾಡುವ ನಿರ್ಧಾರ ಪ್ರಕಟಿಸಿದ್ದರು. ಪರೀಕ್ಷೆ ಹಿನ್ನೆಲೆಯಲ್ಲಿ ಕೇವಲ 10-15 ದಿನ ವ್ಯತ್ಯಾಸವಾಗಬಹುದು ಆದರೆ, ಉತ್ಸವ ಮಾತ್ರ ಪಕ್ಕಾ ಎಂದು ಹೇಳಿದ್ದರು. ಆದರೆ, ಉತ್ಸವ ಮಾತ್ರ ಆಚರಣೆಯಾಗಲಿಲ್ಲ.

ಏಪ್ರಿಲ್‌ನಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಉಸ್ತುವಾರಿ ಸಚಿವರ ನಿರ್ದೇಶನದಂತೆ ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಉತ್ಸವ ಆಯೋಜಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ, ಆಗಸ್ಟ್ ಕಳೆದು ಈಗ ಸೆಪ್ಟೆಂಬರ್‌ಗೆ ಕಾಲಿಡುತ್ತಿದೆ. ಉತ್ಸವ ಆಚರಣೆಯ ಸಿದ್ಧತೆ ಒಂದೆಡೆ ಇರಲಿ ‘ಹೇಳಿಕೆ’ ಸಹ ಇಲ್ಲದಂತಾಗಿದೆ. ಈ ಬಾರಿಯಾದರೂ ನವರಸಪುರ ಉತ್ಸವ ಆಚರಿಸಬೇಕೆಂಬುದು ಜನರ ಕೂಗಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-26-284735174

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ