Bengaluru Rent: ಬೆಂಗಳೂರಲ್ಲಿ ಬಾಡಿಗೆದಾರರಿಗೆ ಹೊಸ ಸಂಕಷ್ಟ; ಮುಂಗಡ ಹಣದ ವಿಚಾರದಲ್ಲೂ ಶಾಕ್ !

Bengaluru Rent: ಬೆಂಗಳೂರಲ್ಲಿ ಬಾಡಿಗೆದಾರರಿಗೆ ಹೊಸ ಸಂಕಷ್ಟ; ಮುಂಗಡ ಹಣದ ವಿಚಾರದಲ್ಲೂ ಶಾಕ್ !

Bengaluru Rent: ಬೆಂಗಳೂರಲ್ಲಿ ಬಾಡಿಗೆದಾರರಿಗೆ ಹೊಸ ಸಂಕಷ್ಟ; ಮುಂಗಡ ಹಣದ ವಿಚಾರದಲ್ಲೂ ಶಾಕ್ !

Bengaluru Rent: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿನ ಮುಂಗಡ ಹಣ (Rent Advance Amount)ಗೆ ಸಂಬಂಧಿಸಿದಂತೆ ಮತ್ತೊಮ್ಮೆ ಗಂಭೀರ ಚರ್ಚೆಗಳು ಶುರುವಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಹೆಚ್ಚು ಮುಂಗಡ ಹಣ ಪಡೆದುಕೊಳ್ಳುವುದು ಮುಂದುವರಿದಿದೆ. ಬಾಡಿಗೆ ಹಣ ಮಿತಿ ಹೆಚ್ಚಳವಾಗುತ್ತಿರುವುದು ಸಹ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ಇರುವವರು ಸಂಕಷ್ಟ ಅನುಭವಿಸುವಂತೆ ಆಗಿದೆ. ಇದರ ನಡುವೆ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವುದ್ದಕ್ಕೆ ಕೇವಲ 2 ತಿಂಗಳ ಮುಂಗಡ ಹಣ ಪಾವತಿ ಮಾಡಿದರೆ ಸಾಕು ಎಂದು ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಬೆಂಗಳೂರಿನಲ್ಲಿ ಹಲವು ಬಾಡಿಗೆದಾರರು ಬಾಡಿಗೆ ಮನೆಗಳ ಅಡ್ವಾನ್ಸ್‌ ಮೊತ್ತವು ತುಂಬಾ ಜಾಸ್ತಿ ಇದೆ ಎಂದು ಮೊದಲಿನಿಂದಲೂ ದೂರುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ದುಬಾರಿ ಬಾಡಿಗೆ ಅಥವಾ ಮುಂಗಡ ಹಣವನ್ನು ತೆಗೆದುಕೊಳ್ಳಬಾರದು ಎಂದು ಕರ್ನಾಟಕ ಸರ್ಕಾರವು ನಿಯಮ ರೂಪಿಸಿದೆ.

ಅಲ್ಲದೆ ಕೇಂದ್ರ ಸರ್ಕಾರವು ಸಹ ನಿಯಮ ರೂಪಿಸಿದೆ. ಆದರೆ, ಈ ಕಾನೂನುಗಳು ಕೇವಲ ಕಾಗದ ಹುಲಿಯಾಗಿವೆ. ಇಂದಿಗೂ ಸಹ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಆಸ್ತಿದಾರರು ಬಾಡಿಗೆದಾರರಿಂದ ದುಬಾರಿ ಮೊತ್ತದ ಅಡ್ವಾನ್ಸ್‌ ತೆಗೆದುಕೊಳ್ಳುವುದು ಮುಂದುವರಿದಿದೆ. ಬೆಂಗಳೂರಿನಲ್ಲಿ ಮುಂಗಡ ಹಣ ತೆಗೆದುಕೊಳ್ಳುವ ಬಗ್ಗೆ ಯುವತಿ ಮಾಡಿರುವ ಪೋಸ್ಟ್‌ನಲ್ಲಿ ಏನಿದೆ ಹಾಗೂ ಈ ವಿಡಿಯೋ ಈಗ ವೈರಲ್ ಆಗುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿರುವವರು ಮುಂಗಡ ಹಣ ಅಥವಾ ಬಾಡಿಗೆಯ ಮೂರು ತಿಂಗಳ ಮೊತ್ತವನ್ನು ಕೊಟ್ಟರೆ ಸಾಕು ಎನ್ನುವ ನಂಬಿಕೆ ಇದೆ. ಆದರೆ ಇದು ನಿಜವಲ್ಲ ಎಂದು ಮುಂಬೈನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯುವುದಕ್ಕೆ ಮೂರು ತಿಂಗಳ ಮುಂಗಡ ಹಣ ಪಾವತಿ ಮಾಡಿದರೆ ಸಾಕು ಎಂದು ಹಲವರು ನಂಬಿರುವಂತೆ ಇದೆ. ಆದರೆ, ಈ ನಿಯಮ ಅಸ್ತಿತ್ವದಲ್ಲಿಯೇ ಇಲ್ಲ ಎಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸ್ನೇಹಾ ತಮ್ಹಂಕರ್ ಅವರು ಹೇಳಿದ್ದಾರೆ. ಈ ವಿಚಾರವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುವುದಕ್ಕೆ ಕಾರಣವಾಗಿದೆ.

ಬೆಂಗಳೂರಲ್ಲಿ ಬಾಡಿಗೆ ಸಮಸ್ಯೆ ಹೆಚ್ಚಳ

ಸೋಶಿಯಲ್ ಮೀಡಿಯಾ ಎಕ್ಸ್‌ ಪೋಸ್ಟ್‌ನಲ್ಲಿ ಸ್ನೇಹಾ ತಮ್ಹಂಕರ್ ಎನ್ನುವವರು ಹಂಚಿಕೊಂಡಿರುವ ಪೋಸ್ಟ್‌ ಇದೀಗ ವೈರಲ್ ಆಗಿದೆ. ಬೆಂಗಳೂರಿನ ಅತಿದೊಡ್ಡ ಬಾಡಿಗೆ ಹಗರಣವೆಂದರೆ ದಲ್ಲಾಳಿಗಳು ನಿಮಗೆ 'ಮೇಡಂ, ಹೊಸ ಕಾನೂನು ಠೇವಣಿ 3 ತಿಂಗಳು ಮಾತ್ರ. ನಾವು ಸಾಮಾನ್ಯವಾಗಿ 6 ಬಾಡಿಗೆ ಅಡ್ವಾನ್ಸ್‌ ​​ಶುಲ್ಕ ವಿಧಿಸುತ್ತೇವೆ. ಆದರೆ ನಾವು ಅಡ್ವಾನ್ಸ್‌ ಮೊತ್ತವನ್ನು 4 ತಿಂಗಳಿಗೆ ಇಳಿಸಿದ್ದೇವೆ. ಬ್ರೋಕರ್‌ಗಳು ಹಾಗೂ ಕೆಲವು ಮನೆಯ ಮಾಲೀಕರು ಬಹಿರಂಗವಾಗಿಯೇ ಹೆಚ್ಚು ಅಡ್ವಾನ್ಸ್‌ ಮೊತ್ತವನ್ನು ಕೇಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಇದೀಗ ಈ ಪೋಸ್ಟ್‌ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಾಗೂ ಅಡ್ವಾನ್ಸ್‌ಗೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ಆಗುವುದಕ್ಕೆ ಪ್ರಾರಂಭವಾಗಿದೆ.

ಇನ್ನು ಬೆಂಗಳೂರಿನಲ್ಲಿ ಮೂರು ತಿಂಗಳು ಅಥವಾ ನಾಲ್ಕು ತಿಂಗಳು ಬಾಡಿಗೆ ಮೊತ್ತವನ್ನು ಮೊದಲೇ ಕೊಡುವುದು ದೊಡ್ಡ ವಿಷಯವೇ ಅಲ್ಲ. ನಾವೆಲ್ಲ ಹತ್ತು ತಿಂಗಳ ಮುಂಗಡ ಹಣವನ್ನು ಪಾವತಿ ಮಾಡಿದ್ದೇವೆ ಎಂದು ಹಲವು ನೆಟ್ಟಿಗರು ಹೇಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ