
ಕೇವಲ 10 ರೂಪಾಯಿಗೆ ಕಂಪನಿಯಲ್ಲಿ ಹೊಟ್ಟೆ ತುಂಬಾ ಊಟ; ಸೆಕ್ಯೂರಿಟಿ ಗಾರ್ಡ್ ಹಂಚಿಕೊಂಡ ವಿಡಿಯೋ ಕಂಡು ನೆಟ್ಟಿಗರು ಫಿದಾ
ಇಂದಿನ ದುಬಾರಿ ಜಗದಲ್ಲಿ ಹೊರಗಡೆ ಒಂದು ಸಾಮಾನ್ಯ ಹೋಟೆಲ್‌ಗೆ ಹೋಗಿ ಊಟ ಮಾಡಬೇಕೆಂದರೂ ಕನಿಷ್ಠ 100 ರೂಪಾಯಾದ್ರೂ ಬೇಕೆ ಬೇಕು. ಅಂತಹದ್ದರಲ್ಲಿ, ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕೇವಲ 10 ರೂಪಾಯಿಗೆ ಹೊಟ್ಟೆತುಂಬಾ ಊಟ ನೀಡುತ್ತಿದೆ ಎಂದರೆ ನಂಬಬಹುದೇ? ಹೌದು, ನಂಬಲೇಬೇಕು. ಏಕೆಂದರೆ ಸೆಕ್ಯೂರಿಟಿ ಗಾರ್ಡ್ ಒಬ್ಬರು ತಮ್ಮ ಕಂಪನಿಯಲ್ಲಿ ಕೇವಲ 10 ರೂಪಾಯಿಗೆ ಸಿಗುವ ಭರ್ಜರಿ ಊಟದ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಆನಂದ್ ಕುಮಾರ್ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಏನಿದೆ?
ಆನಂದ್ ಕುಮಾರ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಒಂದನ್ನಾ ಹಂಚಿಕೊಂಡಿದ್ದಾರೆ. ತಮ್ಮ ಕೆಲಸದ ಸ್ಥಳದಲ್ಲಿ ಪ್ರತಿದಿನ ನೀಡುವ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವಿಡಿಯೋಗಳನ್ನ ಅವರು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಈ ಬಾರಿ ಅವರು, "ಕಂಪನಿಯ ಊಟ ಕೇವಲ 10 ರೂಪಾಯಿಯಲ್ಲಿ" ಎಂಬ ಕ್ಯಾಪ್ಷನ್‌ನೊಂದಿಗೆ ಈ ವಿಡಿಯೋವ್ನಾ ಅಪ್‌ಲೋಡ್ ಮಾಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಆನಂದ್ ಕುಮಾರ್, "ಸ್ನೇಹಿತರೇ, ಕಂಪನಿಯ ಊಟ ಬಂದಿದೆ. ನಮ್ಮ ಕಂಪನಿಯು ಊಟಕ್ಕೆ ಕೇವಲ 10 ರೂಪಾಯಿ ಮಾತ್ರ ತೆಗೆದುಕೊಳ್ಳುತ್ತದೆ. ಊಟದ ಸಮಯವಾಗಿದೆ, ಬನ್ನಿ ಇಂದು ಕಂಪನಿ ಏನೆಲ್ಲಾ ಕಳುಹಿಸಿದೆ ನೋಡೋಣ," ಎನ್ನುತ್ತಾ ಊಟದ ಪ್ಯಾಕೆಟ್ ತೆರೆದು ತೋರಿಸಿದ್ದಾರೆ.
ಆನಂದ್ ಕುಮಾರ್ ಅವರು ಪ್ಯಾಕೆಟ್ ತೆರೆದು ಪ್ರತಿಯೊಂದು ಖಾದ್ಯವನ್ನು ತೋರಿಸಿದ್ದಾರೆ. ಈ ಊಟದಲ್ಲಿ ಗರಿಗರಿಯಾದ ಹಪ್ಪಳ, ಹಾಗಲಕಾಯಿ ಪಲ್ಯ, ಸೋಯಾಬೀನ್ ಸಬ್ಜಿ, ಸಾಕಷ್ಟು ಪ್ರಮಾಣದ ಅನ್ನ, ಬೇಳೆ ಸಾರು ಮತ್ತು ಒಂದು ತುಂಡು ಈರುಳ್ಳಿ ಇರುವುದನ್ನು ನೋಡಬಹುದು.
"ಹೊರಗಡೆ ಇದೇ ಊಟಕ್ಕೆ 50 ರಿಂದ 100 ರೂಪಾಯಿಗಳವರೆಗೆ ಖರ್ಚಾಗುತ್ತದೆ. ಆದರೆ ನಮ್ಮ ಕಂಪನಿಯಲ್ಲಿ ಕೇವಲ 10 ರೂಪಾಯಿಗೆ ಸಿಗುತ್ತಿದೆ," ಎಂದು ಆನಂದ್ ಕುಮಾರ್ ತಮ್ಮ ಕಂಪನಿಗೆ ಧನ್ಯವಾದ ತಿಳಿಸಿದ್ದಾರೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಇಷ್ಟೊಂದು ಒಳ್ಳೇಯ ಗುಣಮಟ್ಟದ ಹಾಗೂ ಪೌಷ್ಟಿಕಾಂಶವುಳ್ಳ ಊಟವನ್ನ ನೀಡುತ್ತಿರುವುದಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪ್ಲಾಸ್ಟಿಕ್ ಕವರ್ ಬಳಕೆಯ ಕುರಿತು ನೆಟ್ಟಿಗರ ಕಳವಳ
ಕಂಪನಿಯು ಕೇವಲ 10 ರೂಪಾಯಿಗೆ ಊಟ ನೀಡುತ್ತಿರುವುದಕ್ಕೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಬಿಸಿ ಊಟವನ್ನ ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿರುವುದಕ್ಕೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. "ಪ್ಲಾಸ್ಟಿಕ್ ಕವರ್‌ಗಳಲ್ಲಿ ಊಟ ನೀಡದಂತೆ ಕಂಪನಿಗೆ ತಿಳಿಸಿ, ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ," ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. "ದಯವಿಟ್ಟು ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಲಂಚ್ ಬಾಕ್ಸ್ ಅಥವಾ ಆಹಾರಕ್ಕೆ ಯೋಗ್ಯವಾದ ಕಂಟೇನರ್‌ಗಳನ್ನ ಬಳಸಿ," ಎಂದು ಹಲವರು ಸಲಹೆ ನೀಡಿದ್ದಾರೆ. ಈ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಿರುವ ಆನಂದ್ ಕುಮಾರ್, ಜನರ ಈ ಸಲಹೆಯನ್ನ ಕಂಪನಿಯ ಆಡಳಿತ ಮಂಡಳಿಯವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.
View this post on InstagramA post shared by Anand Kumar (@thenameisanand01)
A post shared by Anand Kumar (@thenameisanand01)
ಸಾಮಾಜಿಕ ಜಾಲತಾಣಗಳಲ್ಲಿ ಸ್ವಾರಸ್ಯಕರ ಪ್ರತಿಕ್ರಿಯೆಗಳು
ಪ್ಲಾಸ್ಟಿಕ್ ಪ್ಯಾಕೇಜಿಂಗ್ ಕುರಿತು ಚರ್ಚೆಗಳ ನಡುವೆಯೂ, ಉದ್ಯೋಗಿಗಳ ಹಸಿವು ನೀಗಿಸುತ್ತಿರುವ ಕಂಪನಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. "ಯಾವುದೇ ಕಂಪನಿಯಾಗಿದ್ದರೂ ಸರಿ, ಕೇವಲ 10 ರೂಪಾಯಿಗೆ ಹೊಟ್ಟೆತುಂಬಾ ಊಟ ಹಾಕುತ್ತಿರುವುದಕ್ಕೆ ನನ್ನದೊಂದು ಸಲಾಂ," ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇನ್ನೂ ಕೆಲವರು ತಮಾಷೆಯಾಗಿ, "ಇದು ಯಾವ ಕಂಪನಿ ಗುರು? ಕಂಪ್ಯೂಟರ್ ಸೈನ್ಸ್ ಪದವೀಧರರಿಗೆ ಕೆಲಸ ಸಿಗುತ್ತಾ?" ಎಂದು ಪ್ರಶ್ನಿಸಿದ್ದರೆ, ಮತ್ತೊಬ್ಬರು "ಅಣ್ಣಾ, ದಯವಿಟ್ಟು ಅದೇ ಕಂಪನಿಯಲ್ಲಿ ನನಗೊಂದು ಕೆಲಸ ಕೊಡಿಸಿ," ಎಂದು ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಇಂದಿನ ದುಬಾರಿ ದಿನಗಳಲ್ಲಿ 10 ರೂಪಾಯಿಗೆ ಇಂತಹ ಸಂಪೂರ್ಣ ಊಟ ಸಿಗುವುದು ಅಪರೂಪ ಎಂಬುದು ಹಲವರು ಅಭಿಪ್ರಾಯ.